ವೀರಶೈವ ಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಮತ್ತೊಂದು ಅವಧಿಗಾಗಿ ಎಸ್ಸೆಸ್ ನಾಮಪತ್ರ

ವೀರಶೈವ ಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಮತ್ತೊಂದು ಅವಧಿಗಾಗಿ ಎಸ್ಸೆಸ್ ನಾಮಪತ್ರ

ಬೆಂಗಳೂರು, ಸೆ.5- ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಮತ್ತೊಂದು ಅವಧಿಗೆ ಆಯ್ಕೆ ಬಯಸಿ ಇಂದು ನಾಮಪತ್ರ ಸಲ್ಲಿಸಿದರು.

ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಇದೇ ದಿನಾಂಕ 29ರಂದು ಚುನಾವಣೆ ನಡೆಯಲಿದ್ದು, ನಿವೃತ್ತ ಹಿರಿಯ ಐಎಎಸ್ ಅಧಿಕಾರಿಯೂ ಆಗಿರುವ ಮುಖ್ಯ ಚುನಾವಣಾಧಿಕಾರಿ ಎಂ.ಬಿ. ದ್ಯಾಬೇರಿ ಅವರಿಗೆ ಎಸ್ಸೆಸ್ ತಮ್ಮ ಉಮೇದುವಾರಿಕೆ ಅರ್ಜಿ ನೀಡಿದರು.

ನಾಮಪತ್ರ ಸಲ್ಲಿಕೆಗೆ ಇದೇ ದಿನಾಂಕ 11 ಕೊನೆಯ ದಿನವಾಗಿದ್ದು, ದಿನಾಂಕ 12 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. 

ಉಮೇದುವಾರಿಕೆ ಅರ್ಜಿ ವಾಪಸ್ ಪಡೆಯಲು ದಿನಾಂಕ 15ರವರೆಗೆ ಕಾಲಾವಕಾಶವಿದೆ ಎಂದು ಮುಖ್ಯ ಚುನಾವಣಾಧಿಕಾರಿ ದ್ಯಾಬೇರಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಹಾಸಭಾದ ರಾಜ್ಯ ಘಟಕದ ನೂತನ ಅಧ್ಯಕ್ಷ ಶಂಕರ್‌ ಬಿದರಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ,  ಎಂ.ಎನ್.ರಾಜಶೇಖರಪ್ಪ, ಬಿ.ಎಸ್.ಸಚ್ಚಿದಾನಂದಮೂರ್ತಿ, ಹೆಚ್.ಎಂ.ರೇಣುಕ ಪ್ರಸನ್ನ, ಚಿದಾನಂದ ಎಸ್.ಮಠದ, ಕೋರಿ ವಿರುಪಾಕ್ಷಪ್ಪ, ಗಂಗಮ್ಮ ಬಸವರಾಜು, ಚಂದ್ರಕಲಾ ಶ್ರೀಕಂಠರಾಧ್ಯ, ರೂಪಶೇಖರ ಇತರರು ಉಪಸ್ಥಿತರಿದ್ದರು.

error: Content is protected !!