ಮಲೇಬೆನ್ನೂರು, ಸೆ.8- ಮಲೇಬೆನ್ನೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶ್ರೀ ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಎಲ್ಲರ ಮನೆಗಳಲ್ಲಿ ಗೌರಿ-ಗಣಪತಿ ಸಾಮಾನ್ಯವಾಗಿ ಪೂಜೆಯೊಂದಿಗೆ ಹಬ್ಬವನ್ನು ಸರಳವಾಗಿ ಆಚರಿಸಿದರು.
ಪ್ರತಿಷ್ಠಾಪನೆ : ಪಟ್ಟಣದ ನೀರಾವರಿ ಇಲಾಖೆಯ ಮೈದಾನದಲ್ಲಿ 3ನೇ ವರ್ಷದ ಹಿಂದೂ ಮಹಾಗಣಪತಿಯನ್ನು ವಿಶೇಷ ಪೂಜೆಯೊಂದಿಗೆ ಶನಿವಾರ ಪ್ರತಿಷ್ಠಾಪಿಸಲಾಯಿತು.
ಜಿ.ಪಂ. ಮಾಜಿ ಸದಸ್ಯರಾದ ಬೆಣ್ಣೆಹಳ್ಳಿ ಹಾಲೇಶಪ್ಪ, ಬಿ.ಎಂ.ವಾಗೀಶ್ ಸ್ವಾಮಿ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿ ಮುಖಂಡರಾದ ಚಂದ್ರಶೇಖರ್ ಪೂಜಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಬಿ.ಮಂಜುನಾಥ್, ಕೆ.ಜಿ.ಲೋಕೇಶ್, ಬಿ.ವೀರಯ್ಯ, ಭಾನುವಳ್ಳಿ ಸುರೇಶ್, ಪಿ.ಆರ್.ರಾಜು, ಕೆ.ಪಿ.ಗಂಗಾಧರ್, ಎ.ಆರೀಫ್ ಅಲಿ, ಎಕ್ಕೆಗೊಂದಿ ಕರಿಯಪ್ಪ, ಬಸವರಾಜ್ ದೊಡ್ಮನಿ, ಭೋವಿಕುಮಾರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಚಿದಾನಂದಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಅಬೀದ್ ಅಲಿ, ತಾ.ಪಂ. ಮಾಜಿ ಅಧ್ಯಕ್ಷ ಐರಣಿ ಅಣ್ಣಪ್ಪ, ಜನತಾ ಬಜಾರ್ ನಿರ್ದೇಶಕ ಪಿ.ಹೆಚ್.ಶಿವಕುಮಾರ್, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಚಿಟ್ಟಕ್ಕಿ ನಾಗರಾಜ್, ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಅಶೋಕ್ ಯರೇಚಿಕ್ಕನಹಳ್ಳಿ, ಎ.ಕೆ.ಲೋಕೇಶ್, ಸುಬ್ಬಿ ರಾಜಣ್ಣ, ರವಿ ಮೇದಾರ್, ಆರ್ಟ್ಸ್ ಮಂಜು, ದೊರೆಸ್ವಾಮಿ, ಹೊಸಳ್ಳಿ ಕರಿಬಸಪ್ಪ, ಬಟ್ಟೆ ಅಂಗಡಿ ವಿಶ್ವ, ಜಿಗಳಿ ಹನುಮಗೌಡ, ಗೌಡ್ರ ಶ್ರೀನಿವಾಸ್, ಸಂಜು, ಕಿರಣ್, ದೇವರಾಜ್, ಕಡೇಮನಿ ಮಂಜು, ಕೊಮಾರನಹಳ್ಳಿ ಸುನೀಲ್, ಪೂಜಾರ್ ಬೀರಪ್ಪ, ಪೂಜಾರ್ ನಾರಾಯಣಪ್ಪ, ಪೂಜಾರ್ ನಾಗರಾಜ್, ಕಡ್ಲೆಗೊಂದಿ ಕೇಶವ, ಸಂಗಮೇಶಣ್ಣ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.
ಡಿವೈಎಸ್ಪಿ ಬಸವರಾಜ್, ಸಿಪಿಐ ಸುರೇಶ್ ಸಗರಿ, ಪಿಎಸ್ಐ ಪ್ರಭು ಕೆಳಗಿನಮನಿ ಅವರು ಭೇಟಿ ನೀಡಿದ್ದರು. ಪಟ್ಟಣದ ಕಾಳಿಕಾದೇವಿ ದೇವಸ್ಥಾನ, ಕಲ್ಲೇಶ್ವರ ದೇವಸ್ಥಾನ, ಕಾಲಭೈರವ ದೇವಸ್ಥಾನದ ಏಕನಾಥೇಶ್ವರಿ ದೇವಸ್ಥಾನ, ದುರ್ಗಾಂಬಿಕೆ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿರುವ ಗಣಪತಿಗಳೂ ಎಲ್ಲರ ಗಮನ ಸೆಳೆಯುತ್ತಿವೆ.