ಧರ್ಮದ ರಕ್ಷಣೆಗಾಗಿ ಧರೆಗಿಳಿದವನೇ ಶ್ರೀ ಕೃಷ್ಣ

ಧರ್ಮದ ರಕ್ಷಣೆಗಾಗಿ ಧರೆಗಿಳಿದವನೇ ಶ್ರೀ ಕೃಷ್ಣ

ಶಾಸಕ ಬಿ.ದೇವೇಂದ್ರಪ್ಪ 

ಜಗಳೂರು, ಆ. 26-ಸಮಾಜದಲ್ಲಿ ಅಧರ್ಮ ತಾಂಡವವಾಡುತ್ತಿರುವಾಗ ಧರ್ಮರಕ್ಷಣೆಗೆ ಧರೆಗಿಳಿದು ಬರುವವನೇ ಅವತಾರ ಪುರುಷ ಶ್ರೀಕೃಷ್ಣ ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿ ಅಂಗವಾಗಿ ಶ್ರೀಕೃಷ್ಣನ ಭಾವಚಿತ್ರಕ್ಕೆ  ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಮಹಾಭಾರತದ ಶ್ರೀ ಕೃಷ್ಣನು ಕೇವಲ‌ ಯಾದವ ಸಮಾಜಕ್ಕೆ ಸೀಮಿತವಾಗದೆ ಎಲ್ಲಾ ವರ್ಗದವರು ಮಹಾಭಾರತ ಗ್ರಂಥವನ್ನು ಅಧ್ಯಯನ ನಡೆಸಬೇಕಿದೆ.ಇದರಿಂದ ಗೀತಾಸಾರ, ಶ್ರೀಕೃಷ್ಣನ ಸಂದೇಶಗಳನ್ನು ಯುವ ಪೀಳಿಗೆಗೆ ಪಸರಿಸಬೇಕಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತ ನಡೆಸುತ್ತಿದ್ದು ಹಿಂದುಳಿದ, ಶೋಷಿತ ಸಮುದಾಯಗಳು ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕಿದೆ ಎಂದು ಕಿವಿಮಾತು ಹೇಳಿದರು.

ಜಯಂತಿಗೆ ಅಧಿಕಾರಿಗಳು ಗೈರು ಶಾಸಕ ಗರಂ: ಸರಳ ಶ್ರೀಕೃಷ್ಣ ಜನ್ಮಾಷ್ಟಮಿ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ‌ ಅಧಿಕಾರಿಗಳ‌ ಗೈರು ಕಂಡು ಗರಂ ಆದ ಶಾಸಕರು ತಹಶೀಲ್ದಾರ್‌ರ ನ್ನೊಳಗೊಂಡಂತೆ,ವಿ ವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು ಗೈರಾಗಿರುವುದು ಮಹಾನೀಯರಿಗೆ, ದಾರ್ಶನಿ ಕರಿಗೆ, ತೋರುವ ಅಗೌರವದ ಪ್ರತಿಬಿಂಬ ವಾಗಿದೆ. ಗೈರಾದ ಪ್ರತಿಯೊಬ್ಬ ಇಲಾಖೆ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿಗೋಳಿಸಲು’ ಗ್ರೇಡ್ -2 ತಹಶೀಲ್ದಾರ್ ಮಂಜಾನಂದ ಅವರಿಗೆ ಸೂಚಿಸಿದರು.

ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತ ನಾಡಿ, ತಾಲ್ಲೂಕಿನಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿದ  ಯಾದವ ಸಮಾಜದವರು ಸಹೋದರ ಸಮುದಾಯಗಳ ಸಹಯೋಗದಲ್ಲಿ ಅದ್ದೂರಿಯಾಗಿ ಶ್ರೀ ಕೃಷ್ಣ ಜಯಂತ್ಯೋತ್ಸವ ಆಚರಿಸಬೇಕಿದೆ.ಹೆಚ್ಚು ಜನ ಭಾಗವಹಿಸಬೇಕು. ಕಳೆದ ವರ್ಷ ಯಾದವ ಸಮಾಜದ ಶ್ರೀಗಳ ಸಾನ್ನಿಧ್ಯದಲ್ಲಿ ಕೃಷ್ಣ ಜಯಂತಿ ಆಚರಿಸಲಾಗಿತ್ತು. ಪ್ರಸಕ್ತವಾಗಿ ಉತ್ತಮ ಮಳೆ-ಬೆಳೆಯಾಗಿದ್ದು, ಈ ಬಾರಿಯೂ ಸಂಭ್ರಮದ ಆಚರಣೆಗೆ ಮುಂದಾಗೋಣ ಎಂದು ಕರೆ‌ ನೀಡಿದರು.

ಎಸ್ ಟಿ ಘಟಕದ ರಾಜ್ಯ ಮುಖಂಡ ಕೆ.ಪಿ.ಪಾಲಯ್ಯ ಮಾತನಾಡಿ, ದಾರ್ಶನಿಕರ ಜಯಂತಿ ಗಳು ಕೇವಲ ಸರ್ಕಾರಿ ಕಾರ್ಯಕ್ರಮಕ್ಕೆ‌ ಸೀಮಿತವಾಗದೆ ಸಾಂಸ್ಕೃತಿಕ‌ ಕಾರ್ಯಕ್ರಮ ಗಳಾಗಬೇಕಿದೆ. ಶ್ರೀಕೃಷ್ಣನ ಜೀವನ ಚರಿತ್ರೆ, ಅವತಾರಗಳು ಯುವಪೀಳಿಗೆಗೆ ತಲುಪ ಬೇಕಿದೆ. ಇಂದಿನ ಯುವಪೀಳಿಗೆ ಉನ್ನತ ಶಿಕ್ಷಣ, ಅಭ್ಯಾಸದಿಂದ ವಿಮುಖಗೊಂಡು ಮೊಬೈಲ್ ಗೀಳಿನಲ್ಲಿ ತಲ್ಲೀನರಾಗಿ ದ್ದಾರೆಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗ್ರೇಡ್ -2 ತಹಶೀ ಲ್ದಾರ್ ಮಂಜಾನಂದ, ಪ.ಪಂ‌ ಸದಸ್ಯರಾದ ರಮೇಶ್ ರೆಡ್ಡಿ, ಶಕೀಲ್ ಅಹಮ್ಮದ್, ಯಾದವ ಸಮಾಜದ ತಾಲೂಕು ಅಧ್ಯಕ್ಷ ಕೃಷ್ಣಪ್ಪ, ಮುಖಂಡರಾದ ಜೀವಣ್ಣ, ತಿಪ್ಪೇಸ್ವಾಮಿಗೌಡ, ಬಾಲರಾಜ್,  ರಂಗಸ್ವಾಮಿ, ಕಾಟಪ್ಪ, ಮಹೇಶ್ವ ರಪ್ಪ, ಪಲ್ಲಾಗಟ್ಟೆ ಶೇಖರಪ್ಪ,ಸಿ.ತಿಪ್ಪೇಸ್ವಾಮಿ, ಕಾಟಲಿಂಗಪ್ಪ,ಕುಮಾರ್,ಕುಬೇಂದ್ರಪ್ಪ,ಬಿ.ಲೋಕೇಶ್, ಸೇರಿದಂತೆ ಇದ್ದರು.

error: Content is protected !!