ದಾವಣಗೆರೆ, ಆ.22- ಇಲ್ಲಿನ ಕಸ್ತೂರ ಬಾ ಬಡಾವಣೆಯ ರಾಯರ ಮಠದಲ್ಲಿ ಗುರುವಾರ ರಾಘವೇಂದ್ರ ಸ್ವಾಮಿಗಳ ಆರಾಧನೆ ಉತ್ಸವದ ನಿಮಿತ್ತ ಭಕ್ತರ ಮಂತ್ರಘೋಷಗಳ ನಡುವೆ ರಥೋತ್ಸವ ನಡೆಯಿತು.
ಪೂರ್ವಾರಾಧನೆ ಮತ್ತು ಮಧ್ಯಾರಾಧನೆ ಬಳಿಕ ಕೊನೆಯ ದಿನದ ಉತ್ತರಾರಾಧನೆ ರಾಯರ ದಿನ ಗುರುವಾರ ನಡೆದಿರುವುದು ರಾಘವೇಂದ್ರ ಸ್ವಾಮಿಗಳ ಭಕ್ತರಲ್ಲಿ ಹರ್ಷ ಮೂಡಿಸಿತ್ತು.
ಕೊನೆಯ ದಿನದ ಆರಾಧನೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಹೆಚ್ಚು ಸಂಖ್ಯೆ ಯಲ್ಲಿ ಶ್ರೀಮಠಕ್ಕೆ ಭೇಟಿ ನೀಡಿದ್ದರು. ಅಲಂಕೃತಗೊಂಡ ಬೃಂದಾ ವನ ದರ್ಶನ ಪಡೆದು ರಾಯರ ನಾಮ ಜಪಿಸಿದರು.
ಗುರುವಾರ ಸ್ವಪ್ನ ಬೃಂದಾವನಕ್ಕೆ ವಿಶೇಷ ಪೂಜೆ, ವಿವಿಧ ಅಭಿಷೇಕಗಳ ಬಳಿಕ ರಥೋತ್ಸವ ನಡೆಯಿತು. ನಂದ ಕಿಶೋರ ಹಾಗೂ ಭಾರತಿ ಭಜನಾ ಮಂಡ ಳಿಯವರು ರಾಯರ ಸ್ತೋತ್ರ ಪಠಿಸಿದರು.
ಕಡೂರ್ ಪ್ರಾಣೇಶ್ ಆಚಾರ್, ಕೋಸಾ ಪ್ರಸನ್ನ, ಕಂಪ್ಲಿ ಗುರುರಾಜ್ ಆಚಾರ್, ನಿರಂಜನ್, ವಾಚಸ್ಪತಿ, ಸಿ.ಕೆ.ಆನಂತೀರ್ಥಾಚಾರ್, ಕಂಪ್ಲಿ ಪ್ರಹ್ಲಾದ್, ನರಗನಹಳ್ಳಿ ಶ್ರೀನಿವಾಸ್, ಪ್ರಹ್ಲಾದ್, ರಾಘವೇಂದ್ರ ಕುಲಕರ್ಣಿ ಸೇರಿದಂತೆ ಇತರರು ರಥೋತ್ಸವದಲ್ಲಿ ಭಾಗವಹಿಸಿದ್ದರು. ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.