ಮಾನ್ಯರೇ,
ದಾವಣಗೆರೆ ಸ್ಮಾರ್ಟ್ ಸಿಟಿಯಲ್ಲಿ ಹಂದಿಗಳ ಹಾವಳಿ ಮತ್ತೆ ಆರಂಭವಾಯಿತೇ? ನಗರದಲ್ಲಿ ಸಂಪೂರ್ಣವಾಗಿ ಹಂದಿಗಳು ಕಣ್ಮರೆಯಾಗಿದ್ದವು. ಆದರೆ ಇತ್ತೀಚಿನ ಕೆಲ ದಿನಗಳಿಂದ ಹಿಂದಿನಂತೆಯೇ ಹಂದಿಗಳು ಕಾಣಸಿಗುತ್ತಿವೆ.
ಸ್ವಚ್ಛತೆಗೆ ಮಾದರಿ ಆಗಲು ಶ್ರಮಿಸುತ್ತಿರುವ ಪೌರ ಕಾರ್ಮಿಕರಿಗೆ ಈ ಹಂದಿಗಳಿಂದ ಹೊರೆಯು ಹೆಚ್ಚಾಗದಿರಲಿ. ಹಂದಿಗಳ ಸಂಖ್ಯೆಯು ಪೂರ್ಣ ಪ್ರಮಾಣದಲ್ಲಿ ಕಡಿತಗೊಳ್ಳಲಿ. ಇಲ್ಲವಾದಲ್ಲಿ ಈಗಾಗಲೇ ಖಾಲಿ ನಿವೇಶನಗಳಲ್ಲಿ ಮತ್ತು ಕೆಲ ಜಾಗ ಸಿಕ್ಕರೆ ಕಸಗಳನ್ನು ಚೆಲ್ಲುವ ಜನಗಳ ನಡುವೆ ಈ ಹಂದಿಗಳಿಂದ ಆಗುವ ನಗರದ ಮಾಲಿನ್ಯಕ್ಕೆ ಹೊಣೆ ಹೊರುವವರು ಯಾರು ಆಗುತ್ತಾರೆ? ನಗರದ ಸ್ವಚ್ಛತೆಗೆ ಪ್ರತಿಯೊಬ್ಬ ನಾಗರಿಕರು ಕಾರಣೀಭೂತರಾಗಬೇಕಾಗಿದೆ. ಇದರ ಜೊತೆ ಹಂದಿಗಳನ್ನು ನಿರ್ಮೂಲನೆಗೊಳಿಸಬೇಕಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ನಿಗಾವಹಿಸಬೇಕಾಗಿದೆ.
– ವೈ. ವಾದಿರಾಜ ಭಟ್, ವಕೀಲರು, ದಾವಣಗೆರೆ