ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತ ನೌಕರರಿಗೂ ಸೌಲಭ್ಯ ನೀಡಲು ಮನವಿ

ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತ ನೌಕರರಿಗೂ ಸೌಲಭ್ಯ ನೀಡಲು ಮನವಿ

ಜಗಳೂರು, ಆ. 21-  7 ನೇ ವೇತನ ಆಯೋಗದ ಅನುಷ್ಠಾನದಲ್ಲಿ ದಿನಾಂಕ:1-7-2022 ರಿಂದ ದಿ.31-07-2024 ರ ಅವಧಿಯಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ತಾಲ್ಲೂಕು ಸಮಿತಿ ವತಿಯಿಂದ ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ತಾಲೂಕು ಅಧ್ಯಕ್ಷ ಪಿ.ಗುರಪ್ಪ ಮಾತನಾಡಿ, ರಾಜ್ಯದ ಸರ್ಕಾರಿ ನೌಕರರಿಗೆ ಮತ್ತು ನಿವೃತ್ತ ಸರ್ಕಾರಿ ನೌಕರರಿಗೆ ಸರ ಕಾರವು ಪರಿಷ್ಕೃತ 7 ನೇ ವೇತನ ಅನುಷ್ಠಾನ ಗೊಳಿಸಿರುವುದು ಸ್ವಾಗತಾರ್ಹ. 2022 ಜುಲೈ 1 ರಿಂದ 2024 ಜುಲೈ 31 ರ ಅವಧಿಯಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ, ಸೇವೆಯಲ್ಲಿರುವಾಗ ಮರಣ ಹೊಂದಿದ ಅಥವಾ ಸೇವೆಯಲ್ಲಿರುವುದು ಸಮಾಪ್ತಿಗೊಂಡ ಸರ್ಕಾರಿ ಪ್ರಕರಣಗಳಲ್ಲಿ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿಗದಿಪಡಿಸ ಲಾದ ಕಾಲ್ಪನಿಕ ವೇತನವನ್ನು ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಲೆಕ್ಕ ಹಾಕುವ ಉದ್ದೇಶಿತಗಳಿಗಾಗಿ ಪರಿಗಣಿಸ ತಕ್ಕದ್ದು. ಸದರಿ ಕಾಲ್ಪನಿಕ ನಿಗದಿಯ ಆರ್ಥಿಕ ಲಾಭವು ನಿವೃತ್ತಿ ಹೊಂದಿದ ಸರ್ಕಾರಿ ನೌಕರನಿಗೆ ಮತ್ತು ಮರಣ ಹೊಂದಿದ ಸರ್ಕಾರಿ ನೌಕರನ ಫಲಾನುಭವಿಗಳಿಗೆ ಸಂದ ರ್ಭಾನುಸಾರ ದಿ. 01-08-2024 ರಿಂದ‌ ಪ್ರಾಪ್ತವಾಗಬೇಕು ಎಂದು ಮನವಿ ಮಾಡಿದರು.

ಸಂಘದ ಕಾರ್ಯದರ್ಶಿ ಜಗನ್ನಾಥರೆಡ್ಡಿ ಮಾತನಾಡಿ, 7 ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವೃತ್ತಿ ಆರ್ಥಿಕ‌ ಸೌಲಭ್ಯಗಳಾದ ಡಿಸಿಆರ್ ಜಿ, ಆಪ್ಷನ್, ಇಎಲ್ ಎನ್ ಕಾಸ್ಟಮೆಂಟ್, ಸೌಲಭ್ಯಗಳನ್ನು ಲೆಕ್ಕಾಚಾರದೊಂದಿಗೆ ನ್ಯಾಯಯೋಚಿತವಾಗಿ ಲಭ್ಯವಾಗುವ ಆರ್ಥಿಕ  ಸೌಲಭ್ಯ ದೊರಕಿಸಿಕೊಡಲು ಸರ್ಕಾರದ ಗಮನಕ್ಕೆ  ತರಬೇಕು ಎಂದು ವಿನಂತಿಸಿಕೊಂಡರು.

ಮನವಿ ಸ್ವೀಕರಿಸ‌ಿದ ಶಾಸಕರು, ತಮ್ಮ‌ ಮನವಿಯನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ತಮ್ಮ ಬೇಡಿಕೆಯನ್ನು  ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ತಾಲ್ಲೂಕು ಕಛೇರಿಗೆ ತೆರಳಿ  ತಹಶೀಲ್ದಾರ್ ಸೈಯ್ಯದ್ ಕಲೀಂ ಉಲ್ಲಾ ಅವರಿಗೂ ಲಿಖಿತ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ‌ ನಿವೃತ್ತ ನೌಕರರ ವೇದಿಕೆಯ ತಾಲ್ಲೂಕು ಗೌರವ ಅಧ್ಯಕ್ಷ ಜಯ್ಯಪ್ಪ, ಪದಾಧಿಕಾರಿಗಳಾದ ಡಿ.ತಿಪ್ಪೇಸ್ವಾಮಿ, ಡಿಬಿ.ಬಸಪ್ಪ,. ಎಂ.ವಿ.ಬಸವರಾಜಪ್ಪ, ಬಿ.ಮಹೇಶ್ವರಪ್ಪ, ಜಯ್ಯಣ್ಣ, ಜಯ್ಯಮ್ಮ, ಅರ್ಜುನಪ್ಪ, ಸಾವಿತ್ರಮ್ಮ, ಶಕುಂತಲಮ್ಮ, ನಾಗಪ್ಪ, ನೇಮಿಚಂದ್ರ, ಚಂದ್ರಶೇಖರಯ್ಯ, ಧನಂಜಯರೆಡ್ಡಿ ಇದ್ದರು.

error: Content is protected !!