ರಾಜ್ಯಪಾಲರ ನಡೆ ಖಂಡಿಸಿ ಹರಿಹರದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ರಾಜ್ಯಪಾಲರ ನಡೆ ಖಂಡಿಸಿ ಹರಿಹರದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಹರಿಹರ, ಅ.19- ಮುಡಾ ನಿವೇಶನ ಕುರಿತಂತೆ, ರಾಜ್ಯಪಾಲರು ಸಿ.ಎಂ. ಸಿದ್ದರಾಮಯ್ಯ ನವರ ವಿರುದ್ಧ ಪ್ರಾಸಿಕ್ಯೂ ಷನ್ನಿಗೆ ಅನುಮತಿ ನೀಡಿರುವುದನ್ನು ಖಂಡಿಸಿ ತಾಲ್ಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ಮಾಡಿ, ತಹಶೀಲ್ದಾರ್ ಗುರುಬಸವರಾಜ್ ಅವರಿಗೆ ಮನವಿ ಅರ್ಪಿಸಲಾಯಿತು. 

ಪಕ್ಕೀರಸ್ವಾಮಿ ಮಠದ ಮುಂಭಾಗದಿಂದ ಆರಂಭವಾದ ಮೆರವಣಿಗೆಯು ಶಿವಮೊಗ್ಗ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಮುಖ್ಯ ರಸ್ತೆಯ ಮೂಲಕ ಹಾದು, ಗಾಂಧಿ ವೃತ್ತದಲ್ಲಿ ಟೈರಿಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿ -ಜೆಡಿಎಸ್ ಪಕ್ಷದ ವಿರುದ್ಧ ಘೋಷಣೆ ಹಾಕಲಾಯಿತು.

ಈ ವೇಳೆ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಬಳಿ ಹರಿಹರ ತಾಲ್ಲೂಕಿನ ಭೈರನಪಾದ ಏತ ನೀರಾವರಿ ಯೋಜನೆ ಮತ್ತು ನಗರದ ಕುಡಿಯುವ ನೀರಿನ ಶೇಖರಣಾ ಘಟಕದ ಯೋಜನೆ ವಿಚಾರಗಳಿಗೆ ಸಂಬಂಧಿಸಿದಂತೆ ದಾಖಲೆಗಳು ಇದ್ದು, ಅವುಗಳು ಕಾರ್ಯರೂಪಕ್ಕೆ ಬರಬೇಕಾದರೆ ಅವರನ್ನು ಆಡಳಿತದಲ್ಲಿ ಹೋರಾಟದ ಮೂಲಕ ಉಳಿಸಿಕೊಳ್ಳುವುದು ತಾಲ್ಲೂಕಿನ ಜನತೆಗೆ ಅತ್ಯವಶ್ಯಕವಾಗಿದೆ ಎಂದರು.

ಮಾಜಿ ಶಾಸಕ ಎಸ್.ರಾಮಪ್ಪ ಮಾತನಾಡಿ, ಮುಡಾ ವಿಚಾರದಲ್ಲಿ ಯಾವುದೇ ರೀತಿಯ ತಿರುಳಿಲ್ಲ ಎಂಬುದು ರಾಜ್ಯಪಾಲರಿಗೆ ತಿಳಿದಿದೆ. ಆದರೂ ಸಹ ಪ್ರಾಸಿಕ್ಯೂಷನ್ನಿಗೆ ಅನುಮತಿ ನೀಡಿರುವುದು ರಾಜ್ಯದ ಸಮಸ್ತ ಜನರಿಗೆ ಮಾಡಿರುವ ದ್ರೋಹವಾಗಿದೆ  ಎಂದು ಕಿಡಿಕಾರಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ಮಾತನಾಡಿ, ರಾಜ್ಯಪಾಲರು ತಮ್ಮ ಹುದ್ದೆಯ ಘನತೆ ಮತ್ತು ಸಂವಿಧಾನದ ಆಶಯಗಳನ್ನು ಕೊಂದು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿ.ಪಂ. ಮಾಜಿ ಸದಸ್ಯರಾದ ಎಂ.  ನಾಗೇಂದ್ರಪ್ಪ, ಬಿ.ಎಂ. ವಾಗೀಶ್ ಸ್ವಾಮಿ, ಮಾಜಿ ಎಪಿಎಂಸಿ ಅಧ್ಯಕ್ಷ ಮಂಜುನಾಥ್ ಪಾಟೀಲ್, ಮಾಜಿ ನಗರಸಭೆ ಅಧ್ಯಕ್ಷ ಬಿ‌.‌ ರೇವಣಸಿದ್ದಪ್ಪ, ಮುಖಂಡ ಸಿ.ಎನ್. ಹುಲಿಗೇಶ್, ನಗರಸಭೆ ಸದಸ್ಯ ಶಂಕರ್ ಖಟಾವ್ಕರ್ ಮಾತನಾಡಿ, ರಾಜ್ಯಪಾಲರ ಕಚೇರಿ ಇತ್ತೀಚೆಗೆ ಬಿಜೆಪಿ – ಜೆಡಿಎಸ್ ಮತ್ತು ಆರ್.ಎಸ್.ಎಸ್. ಕಚೇರಿಯಾಗಿ ಮಾರ್ಪಾಡಾಗಿದೆ. ಬಿಜೆಪಿಯವರಿಗೆ ಆಪರೇಷನ್ ಕಮಲ ಎಂಬ ಚಟುವಟಿಕೆಗೆ ರಾಜ್ಯದಲ್ಲಿ ಅವಕಾಶ ಇಲ್ಲವೆಂದು ಮನವರಿಕೆ ಯಾಯಿತೋ ಆಗಿನಿಂದಲೇ
ರಾಜ ಭವನವನ್ನು ದುರುಪಯೋಗ ಪಡಿಸಿಕೊಂಡು, ಚುನಾಯಿತ ಸರ್ಕಾ ರವನ್ನು ಬುಡ ಮೇಲು ಮಾಡಿ, ಅಧಿಕಾರಕ್ಕೆ ಬರಬೇಕು ಎಂದು ಕನಸು ಕಾಣುತ್ತಿರು ವುದರಿಂದ ನೋಟಿಸ್, ಪ್ರಾಸಿಕ್ಯೂಷನ್ ಅನುಮತಿ ಎಂಬ ನಾಟಕ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಟಿ.ಜೆ. ಮುರುಗೇಶಪ್ಪ, ಅಮರಾವತಿ ರೇವಣಸಿದ್ದಪ್ಪ, ಕೆ‌.ಜಡಿಯಪ್ಪ, ಕನ್ನಪ್ಪ ಭಾನುವಳ್ಳಿ, ಮಹಮ್ಮದ್ ಫೈರೊಜ್, ನಗರಸಭೆ ಸದಸ್ಯ ಕೆ.ಜಿ. ಸಿದ್ದೇಶ್, ಅಲೀಂ, ಬಾಬುಲಾಲ್, ನಾಮನಿರ್ದೇಶನ ಸದಸ್ಯರಾದ ಕೆ.ಬಿ. ರಾಜಶೇಖರ, ಸಂತೋಷ ದೊಡ್ಡಮನಿ, ಜೋಸೆಫ್, ದಿವಾಕರ್, ಮುಖಂಡರಾದ ಎಂ.ಬಿ. ಅಣ್ಣಪ್ಪ, ಸಂತೋಷ ನೋಟದರ್, ಆದಾಪುರ ವೀರಭದ್ರಪ್ಪ, ಪರಶುರಾಮ್ ಅಂಬೇಕರ್, ಗಣೇಶ ದುರ್ಗದ್, ಮಲ್ಲೇಶ್, ಎಂ.ಬಿ. ಅಭಿದಾಲಿ, ಎಲ್.ಬಿ ಹನುಮಂತಪ್ಪ, ದಾದಾಪೀರ್ ಭಾನುವಳ್ಳಿ, ಬಿ.ಎನ್. ರಮೇಶ್, ಜಿಗಳಿ ಆನಂದಪ್ಪ, ಹೆಚ್.ಶಿವಪ್ಪ, ಕೆ.‌ಅಣ್ಣಪ್ಪ, ಎಂ.ಎಸ್. ಆನಂದ್, ಕುಂಬಳೂರು ವಾಸುದೇವ್, ತಿಪ್ಪೇಶ್, ಬಾಷಾ, ಭಾಗ್ಯಮ್ಮ, ಐರಣಿಯಮ್ಮ, ಜಮಿಲಾಬಿ, ಮಾಲಾ, ಸವಿತಾ ನಾಯ್ಕ್, ಹಬೀಬ್ ಉಲ್ಲಾ, ಮಲ್ಲೇಶ್ ಕಮಲಾಪುರ, ಬಲರಾಮ್, ರಮೇಶ್ ನಾಯ್ಕ್, ಶ್ರೀನಿವಾಸ್ ಮೂರ್ತಿ, ನಿಧಿ, ನಾರಾಯಣ, ಬಬ್ಲೂ ಪೈಲ್ವಾನ್, ನಸ್ರುಲ್ಲಾ, ಕುಮಾರ್, ಬೆಳ್ಳೂಡಿ ಕುಮಾರ್ ಇತರರು ಹಾಜರಿದ್ದರು.   

error: Content is protected !!