ಸುತ್ತೂರಿನಲ್ಲಿ `ಎಸ್ಸೆಸ್ ಅತಿಥಿ ಗೃಹ’ ಉದ್ಘಾಟನೆ

ಸುತ್ತೂರಿನಲ್ಲಿ `ಎಸ್ಸೆಸ್ ಅತಿಥಿ ಗೃಹ’ ಉದ್ಘಾಟನೆ

ದಾವಣಗೆರೆ, ಆ.9- ಜಗದ್ಗುರು ಶ್ರೀ ವೀರ ಸಿಂಹಾಸನ ಮಹಾಸಂಸ್ಥಾನ ಮಠ ಶ್ರೀಕ್ಷೇತ್ರ ಸುತ್ತೂರು ಮೈಸೂರು ಜಿಲ್ಲೆ ಇಲ್ಲಿ ಶಾಸಕರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ನಿರ್ಮಿಸಿರುವ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಅತಿಥಿ ಗೃಹವನ್ನು ಇಂದು ಲೋಕಾರ್ಪಣೆ ಗೊಳಿಸಲಾಯಿತು. ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶೀ ಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಿವಶಂಕರಪ್ಪನವರು ಅತಿಥಿ ಗೃಹವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ತೋಟಗಾರಿಕೆ ಮತ್ತು ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಸಚಿವ ಎಸ್ .ಎಸ್. ಮಲ್ಲಿಕಾರ್ಜುನ್, ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಮಠದ ಆಡಳಿತ ಅಧಿಕಾರಿ ಸಿ.ಜಿ.ಬೆಟಸೂರಮಠ, ಬೆಂಗಳೂರು ಮಾಜಿ ಮೆಯರ್ ಪುಟ್ಟರಾಜು, ಉದ್ಯಮಿ ಇಂದೂಧರ್, ವರುಣ ಮಹೇಶ್, ಸುನಂದ ಗಿರೀಶ್ ಮತ್ತಿತರರು ಇದ್ದರು.

error: Content is protected !!