`ಬಂಗಾರದ ಮಣ್ಣಿನಲ್ಲಿ ಬೆಳ್ಳಿಲಿಂಗ ಒಡಮೂಡಿತು, ಆ ಲಿಂಗದ ಮೇಲೆ ಕಾಳಿಂಗ ಸರ್ಪ ಮುತ್ತಿತು, ಆ ಸರ್ಪಕ್ಕೆ ಗರುಡ ಕುಕ್ಕಿತಲೇ ಎಚ್ಚರ’

`ಬಂಗಾರದ ಮಣ್ಣಿನಲ್ಲಿ ಬೆಳ್ಳಿಲಿಂಗ ಒಡಮೂಡಿತು, ಆ ಲಿಂಗದ ಮೇಲೆ ಕಾಳಿಂಗ ಸರ್ಪ ಮುತ್ತಿತು, ಆ ಸರ್ಪಕ್ಕೆ ಗರುಡ ಕುಕ್ಕಿತಲೇ ಎಚ್ಚರ’

ಹರಿಹರ, ಆ. 9-  `ಬಂಗಾರದ ಮಣ್ಣಿನಲ್ಲಿ ಬೆಳ್ಳಿಲಿಂಗ ಒಡಮೂಡಿತು, ಆ ಲಿಂಗದ ಮೇಲೆ ಕಾಳಿಂಗ ಸರ್ಪ ಮುತ್ತಿತು, ಆ ಸರ್ಪಕ್ಕೆ ಗರುಡ ಕುಕ್ಕಿತಲೇ ಎಚ್ಚರ’ ಎಂದು ಜಿಗಳಿ ರಂಗನಾಥ ಸ್ವಾಮಿಯ ಕಾರಣಿಕವನ್ನು ಪೂಜಾರ್ ಬಸವರಾಜ್ ಸ್ವಾಮಿಗಳು ನುಡಿದರು. 

ನಗರದ ಸಂಗಮೇಶ್ವರ ಮತ್ತು ಮಹೇಶ್ವರ ದೇವಸ್ಥಾನದ ಆವರಣದಲ್ಲಿ ನಾಗರ ಪಂಚಮಿ ಹಬ್ಬದ ಅಂಗವಾಗಿ ಕಾರಣಿಕ ಹೇಳುವುದಕ್ಕಿಂತ ಮುಂಚಿತವಾಗಿ ಜಿಗಳಿ ರಂಗನಾಥ ಸ್ವಾಮಿಯ ಕಾರಣಿಕವನ್ನು ನುಡಿಯುವ ಬಸವರಾಜ್ ಸ್ವಾಮಿಗಳು ರಂಗನಾಥ ಸ್ವಾಮಿಯನ್ನು ಮೆರವಣಿಗೆ ಮೂಲಕ ತುಂಗಭದ್ರಾ ನದಿಗೆ ಕರೆದೊಯ್ದು ನದಿಯಲ್ಲಿ ವಿಶೇಷ ಪೂಜೆ, ಮಹಾಮಂಗಳಾರತಿ ಸೇರಿದಂತೆ ಹಲವು ಬಗೆಯ ಪೂಜಾ ಕಾರ್ಯಗಳನ್ನು ನೆರವೇರಿಸಿ ನಂತರ ಕಂಬ ಏರಿ ಕಾರಣಿಕ ನುಡಿದರು.

ಈ ವೇಳೆ ನಗರದ ಮಾಜೇನಹಳ್ಳಿ ಗ್ರಾಮದೇವತೆ ಊರಮ್ಮದೇವಿ, ಪೇಟೆ ಆಂಜನೇಯ ಸ್ವಾಮಿ, ಕಸಬಾ ದುರ್ಗಾದೇವಿ, ಯಲವಟ್ಟಿ ಆಂಜನೇಯ ಸ್ವಾಮಿ, ಬೆಳ್ಳೂಡಿ ಬೀರಪ್ಪ, ಹನುಮ್ಮಪ್ಪ, ಚಂದ್ರಗುತ್ಯಮ್ಮ, ಹಳೇಬಾತಿ ಆಂಜನೇಯ ಸ್ವಾಮಿ ಸೇರಿದಂತೆ ವಿವಿಧ ಗ್ರಾಮದ ದೇವರುಗಳು ಹಾಜರಿದ್ದವು.

ಈ ಸಂದರ್ಭದಲ್ಲಿ ಅಮರಾವತಿ ಗೌಡ್ರು ಮಹದೇವಪ್ಪ, ಕಸಬಾ ಗೌಡ್ರು ಲಿಂಗರಾಜ್ ಪಾಟೀಲ್, ಮಾಜೇನಹಳ್ಳಿ ಗೌಡ್ರು ಚನ್ನಬಸಪ್ಪ, ಕರಿಬಸಪ್ಪ ಕಂಚಿಕೇರಿ, ಲೋಕೇಶ್ ಮೂರ್ಕಲ್, ಪೃಥ್ವಿ ಕುಮಾರ್, ಕೃಷ್ಣ ಪಿ. ರಾಜೋಳ್ಳಿ, ಗುರು ಬಸವರಾಜ್, ಅತೀಶ್, ಸಿ.ಕೆ. ಗುರುಪ್ರಸಾದ್, ಹಿಂದೂ ಜಾಗರಣ ವೇದಿಕೆಯ ಚಂದನ್ ಮೂರ್ಕಲ್, ಶಿವು, ಮಹೇಶ್, ಜಿಗಳಿ ಬಸವನಗೌಡ್ರು, ಜಿ.ಎಂ. ಆನಂದಪ್ಪ, ಕೆ.ಆರ್. ರಂಗಪ್ಪ, ಇಂದೂಧರ್, ಗೋಪೋಜಿ ಆನಂದಪ್ಪ, ಪೂಜಾರ್ ನಾಗರಾಜ್, ಯಲವಟ್ಟಿ ಮಂಜುನಾಥ್, ಕೆ.ಬಿ. ಸತೀಶ್ ಯಲವಟ್ಟಿ, ಮಾಕನೂರು ಪರಸಪ್ಪ, ನಟರಾಜ್, ದೇವೇಂದ್ರಪ್ಪ, ಜಗದೀಶ್, ಜಯ್ಯಣ್ಣ, ಚಂದ್ರಪ್ಪ, ಪ್ರಕಾಶ್, ಸಿದ್ದಲಿಂಗಪ್ಪ, ಬೀರಪ್ಪ, ಜಲೀಲ್ ಸಾಬ್ ಇತರರು ಹಾಜರಿದ್ದರು.

error: Content is protected !!