ಮಾನ್ಯರೇ,
2-3 ವರ್ಷಗಳಿಂದ ನಗರದ ಎಲ್ಲಾ ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದರಿಂದ ಕೆಲಸಕ್ಕೆ ತೆರಳಿದ ನಾಗರಿಕರು ರಾತ್ರಿ ವೇಳೆ ಮನೆಗೆ ಹೋಗಲು ಆತಂಕ ಪಡುವಂತಾಗಿದೆ. ವೃದ್ಧರು, ವಾಹನ ಸವಾರರು ಹಾಗೂ ಮಕ್ಕಳಿಗೆ ತೀವ್ರತರ ತೊಂದರೆ ಉಂಟಾಗುತ್ತಿದ್ದು, ಈ ಕುರಿತು ಪತ್ರಿಕೆಯ ಓದುಗರ ಪತ್ರದ ಮೂಲಕ ಸಾಕಷ್ಟು ಸಲ ಸಂಬಂಧಿಸಿದ ಅಧಿಕಾರಿಗಳನ್ನು ಎಚ್ಚರಿಸಿದರೂ ಕುರುಡರಂತೆ ವರ್ತಿಸುವುದು ವಿಪರ್ಯಾಸ.ಸಾರ್ವಜನಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಪಾಲಿಕೆ ಆಯುಕ್ತರು, ಪಾಲಿಕೆ ಸದಸ್ಯರು ಮತ್ತು ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ಪರಿಹರಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
– ಐಗೂರು ಪ್ರಭು, ದಾವಣಗೆರೆ.