ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್ ಭೇಟಿ, ಮನವೊಲಿಕೆ
ಹರಿಹರ, ಆ.2 – ಮೈದುಂಬಿಕೊಂಡು ಹರಿಯುತ್ತಿರುವ ತುಂಗಭದ್ರಾ ನದಿಯ ನೀರಿನ ಪ್ರಮಾಣ ಹೆಚ್ಚಾಗಿ ನಗರದ ಗಂಗಾನಗರದ ಸುಮಾರು16 ಮನೆಗಳಿಗೆ ನೀರು ನುಗ್ಗಿದ್ದು ನಿರಾಶ್ರಿತರು ಕಾಳಜಿ ಕೇಂದ್ರಕ್ಕೆ ತೆರಳುವುದಿಲ್ಲ ಎಂದು ಪಟ್ಟು ಹಿಡಿದಿದ್ದರಿಂದ, ಸ್ಥಳಕ್ಕೆ ದಾವಣಗೆರೆ ಉಪವಿಭಾಗ ಅಧಿಕಾರಿ ಸಂತೋಷ ಕುಮಾರ್ ಭೇಟಿಕೊಟ್ಟು ನಿರಾಶ್ರಿತರಿಗೆ ಕಾಳಜಿ ಕೇಳದ್ರಗಳಿಗೆ ತೆರಳುವಂತೆ ಮನವೊಲಿಸಿದರು.
ಈ ವೇಳೆ ಎಸಿ ಸಂತೋಷ ಕುಮಾರ್ ಮಾತನಾಡಿ, ಈಗಾಗಲೇ ರಾಜ್ಯದಾದ್ಯಂತ ವಿವಿಧ ನಗರಗಳಲ್ಲಿ ಬಹಳಷ್ಟು ಮಳೆಯಿಂದಾಗಿ ಡ್ಯಾಮ್ ನಿಂದ 1 ಲಕ್ಷದ 30 ಸಾವಿರ ಕ್ಯೂಸೆಕ್ಸ್ ನೀರು ಹೊರಗಡೆ ಬಿಟ್ಟಿದ್ದು, ಅದರಿಂದಾಗಿ ಹರಿಹರದ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಇಲ್ಲಿನ ಗಂಗಾನಗರದಲ್ಲಿ 16 ಮನೆಗಳ ಜಲಾ ವೃತವಾಗಿದ್ದು ನಿರಾಶ್ರಿತ ಕುಟುಂಬಕ್ಕೆ ಪ್ರಕೃತಿ ವಿಕೋಪದ ಅಡಿಯಲ್ಲಿ ಎಪಿಎಂಸಿ ಆವರಣದಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ.
ಆ ಕೊಠಡಿಯಲ್ಲಿ ನಿರಾಶ್ರಿತರ ಕುಟುಂಬದ ಸದಸ್ಯ ರಿಗೆ ಊಟ, ತಿಂಡಿ, ವಸತಿ, ಜೊತೆಗೆ ಆರೋಗ್ಯ ರಕ್ಷಣೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ನಿರಾಶ್ರಿತರು ನಮಗೆ ಪದೇ, ಪದೇ ಇದೇ ರೀತಿಯ ಸಮಸ್ಯೆ ಬರುತ್ತದೆ. ಆದ್ದ ರಿಂದ ನಮಗೆ ಶಾಶ್ವತ ಪರಿಹಾರವನ್ನು ನೀಡದೆ ಹೊರತು ನಾವು ಸ್ಥಳವನ್ನು ಬಿಟ್ಟು ಕದಲುವುದಿಲ್ಲ ಎಂಬ ಬಿಗು ಪಟ್ಟು ಹಿಡಿದಿಕೊಂಡಿದ್ದರು. ಅವರಿಗೆ ಸರ್ಕಾರದ ಮಾನ ದಂಡಗಳನ್ನು ವಿವರಿಸುವುದರ ಮೂಲಕ ಅವರನ್ನು ಮನ ವೊಲಿಸಲಾಗಿದ್ದು, ಅವರು ಕೂಡ ನಮ್ಮ ಮಾತಿಗೆ ಸಹ ಮತ ಸೂಚಿಸಿ ಸಂಜೆ ಕಾಳಜಿ ಕೇಂದ್ರಕ್ಕೆ ತೆರಳುವುದಾಗಿ ಭರವಸೆಯನ್ನು ನೀಡಿದ್ದಾರೆ ಎಂದು ಹೇಳಿದರು.
ನಿರಾಶ್ರಿತರು, ಹಾಗೂ ಜಯ ಕರ್ನಾಟಕ ಸಂಘಟನೆ ಮುಖಂಡರು, ನಗರ ಸಭೆಯ ಜಾಗದಲ್ಲಿ ನಮಗೆ ಶಾಸ್ವತ ಪರಿಹಾರವನ್ನು ಕೊಡಿಸಿ ಅಥವಾ ಜಿ. ಪ್ಲಸ್ ಮಾದರಿಯಲ್ಲಿ ಮನೆಗಳ ನಿರ್ಮಾಣ ಮಾಡಿಕೊಡುವಂತೆ ಮನವಿಯನ್ನು ಮಾಡಿಕೊಂಡಿದ್ದು. ನಮಗೆ ನಗರ ಸಭೆಯ ಜಾಗದ ಎಲ್ಲಿ ಇದಾವೆ ಮತ್ತು ಎಷ್ಟು ಎಕರೆ ಪ್ರದೇಶದಲ್ಲಿ ಇದಾವೆ ಎಂಬುದರ ಬಗ್ಗೆ, ಸಂಪೂರ್ಣ ಮಾಹಿತಿ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಮಾಹಿತಿ ಸಂಗ್ರಹಿಸಿ ಸಾರ್ವಜನಿಕರಿಗೆ ಯಾವುದೇ ರೀತಿಯ ಜೀವ ಹಾನಿಯಾಗದಂತೆ ರಕ್ಷಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುವುದಾಗಿ ಹೇಳಿದರು.
ಉಕ್ಕಡಗಾತ್ರಿ ಗ್ರಾಮದಲ್ಲಿ ಸಹ ಹೊಳೆ ತುಂಬಿ ಕೊಂಡು ಹರಿಯತ್ತಿರುವುದರಿಂದ ಎರಡು ಗ್ರಾಮದ ಮಧ್ಯೆ ಹಾದು ಹೋಗಿರುವ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ತಿಳಿಸಿದರು.
ಜಯ ಕರ್ನಾಟಕ ಸಂಘಟನೆ ಮುಖಂಡ ಎ ಗೋವಿಂದ, ಆನಂದ್, ನಿರಾಶ್ರಿತರಾದ ರಮಿದಾ, ಯಾಸ್ಮಿನ್, ಪರ್ವಿನ್ ಬಾನು, ಅಲಿಮಾ, ಸಲ್ಮಾ ಮಾತನಾಡಿ, ಗಂಗಾನಗರದ ಸುಮಾರು 40 ಮನೆಗಳು ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದಾಗ ಜಲಾವೃತವಾಗುತ್ತವೆ. ಪ್ರತಿ ಸಾರಿ ಎಪಿಎಂಸಿ ಆವರಣದ ಕೊಠಡಿಯಲ್ಲಿ ಕಾಳಜಿ ಕೇಂದ್ರ ತೆರೆಯುತ್ತಾರೆ. ತದನಂತರ ನಂತರ ಇಲ್ಲಿನ ಜನರ ಕಷ್ಟ ಏನು ಎಂದು ಯಾರು ಕೇಳೋಕೆ ಬರೋಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಆಡಳಿತದ ವಿಎ ಹೇಮಂತ್ ಕುಮಾರ್, ಸಮೀರ್ ಆಹ್ಮದ್, ಅಂಜನಪ್ಪ, ನಗರಸಭೆ ಆರೋಗ್ಯ ಇಲಾಖೆಯ ಸಂತೋಷ ನಾಯ್ಕ್, ನಿರಾಶ್ರಿತರರಾದ ಅಲಿಮಾ, ತೌಸಿಯಾ, ಖಮೃನಬಿ, ಮಾರುನ್ ಬಿ ಇತರರು ಹಾಜರಿದ್ದರು.