ಮಾನ್ಯರೇ,
ನಗರದ ಸಿ.ಜಿ. ಆಸ್ಪತ್ರೆ ರಸ್ತೆಯ ಕಾಫಿ ಬಾರ್ ಮುಂಭಾಗದಲ್ಲಿನ ಡ್ರೈನೇಜ್ ಸೋರಿಕೆ ನಿತ್ಯವೂ ಆಗುತ್ತಿದ್ದು, ಸೋರಿಕೆಯಿಂದ ಬರುವ ತ್ಯಾಜ್ಯ ರಸ್ತೆಯಲ್ಲಿ ಹರಿದು ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಡ್ರೈನೇಜ್ ಬಳಿ ಹೋಟೆಲ್‌ಗಳ ಕಸ ಸುರಿಯುತ್ತಿರುವುದರಿಂದ ದುರ್ವಾಸನೆ ಹಬ್ಬುತ್ತಿದ್ದು, ಈ ದುಸ್ಥಿತಿಯಿಂದ ಸ್ಥಳೀಯರು ಪ್ರತಿನಿತ್ಯವೂ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.
ರಸ್ತೆಯಲ್ಲಿ ಹರಿಯುತ್ತಿರುವ ತಾಜ್ಯ ನೀರು ಮತ್ತು ಕಸದ ರಾಶಿಯಿಂದಾಗಿ ಸೊಳ್ಳೆಗಳು ಹೆಚ್ಚಾಗುತ್ತಿವೆ. ಡೆಂಗ್ಯೂ ರೋಗದ ಭಯ ಇಲ್ಲಿನ ನಿವಾಸಿಗಳಿಗೆ ಕಾಡುತ್ತಿದೆ. ಆದ್ದರಿಂದ ಮಹಾನಗರ ಪಾಲಿಕೆಯ ಅಧಿಕಾರಿಗಳು ಈ ಕೂಡಲೇ ಡ್ರೈನೇಜ್ ದುರಸ್ತಿ ಪಡಿಸುವಂತೆ ವಿನಂತಿ.
– ಹನುಮಂತರಾಜ್