ದಾವಣಗೆರೆ, ಜು.27- ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿ ಸಿದ್ದ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ವಿರುದ್ಧ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಕಿಡಿಕಾರಿದ್ದಾರೆ.
ಇಂದಿಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಹಿರಿಯರ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಸೋತ ಮೇಲೆ ಸುಮ್ಮನಿರಬೇಕು. ಬರುವ ಚುನಾವಣೆ ತನಕ ಕಾಯಬೇಕು. ಅದು ಬಿಟ್ಟು ಹಿರಿಯರ ಬಗ್ಗೆ ಮಾತ ನಾಡಿದರೆ ಎಷ್ಟು ಸರಿ ? ಹೀಗೆ ಟೀಕೆ ಮಾಡಿ ದರೆ ಅವರಿಗೆ ಎಷ್ಟು ಸೊಕ್ಕು ಇರ ಬೇಕು ಎಂದು ಸಿದ್ದೇಶ್ವರ ವಿರುದ್ಧ ಹರಿಹಾಯ್ದರು. ಸೋತ ಮೇಲೆ ಒಪ್ಪಿಕೊಂಡು ಆರಾಮವಾಗಿ ಮನೆ ಯಲ್ಲಿರಬೇಕು. ಅದನ್ನು ಬಿಟ್ಟು ನನ್ನನ್ನು ಲೀಡರ್ ಸೋಲಿಸಿದ್ರು ಅನ್ನೋದು ಸರಿಯಲ್ಲ. ಅವನು ನಿಮಿಷ ನಿಮಿಷಕ್ಕೂ ಅಳುತ್ತಿದ್ದಾನೆ. ಯಾಕೆ ಅವನು ಅಳುತ್ತಿದ್ದಾನೆ ಗೊತ್ತಿಲ್ಲ. ಅಷ್ಟೇ ಅಲ್ಲದೇ ಅವನು ಭೀಮಸಮುದ್ರದಿಂದ ಏನು ತಗೊಂಡು ಬಂದಿದ್ದ ಎಂದರು.