ಹರಿಹರದ ಹಿಂದೂ ರುದ್ರಭೂಮಿ ವಿಸ್ತರಿಸಿ ವಿಧಾನಸಭೆಯಲ್ಲಿ ಶಾಸಕ ಹರೀಶ್ ಆಗ್ರಹ

ಹರಿಹರದ ಹಿಂದೂ ರುದ್ರಭೂಮಿ ವಿಸ್ತರಿಸಿ ವಿಧಾನಸಭೆಯಲ್ಲಿ ಶಾಸಕ ಹರೀಶ್ ಆಗ್ರಹ

ಬೆಂಗಳೂರು, ಜು. 22 – ಹರಿಹರದ ಹಿಂದೂ ರುದ್ರಭೂಮಿ ವಿಸ್ತರಿಸಲು ಸರ್ಕಾರ ಅನುದಾನ ನೀಡಬೇಕು ಎಂದು ಶಾಸಕ ಬಿ.ಪಿ. ಹರೀಶ್ ಅವರು, ವಿಧಾನಸಭೆಯಲ್ಲಿ ಆಗ್ರಹಿಸಿದ್ದಾರೆ.

ಹರಿಹರ ನಗರ 1.50 ಲಕ್ಷ ಜನಸಂಖ್ಯೆ ಹೊಂದಿದೆ. ತುಂಗಭದ್ರಾ ನದಿ ಪಕ್ಕದಲ್ಲಿರುವ ಹಿಂದೂ ರುದ್ರಭೂಮಿ, ಮಳೆಗಾಲದಲ್ಲಿ ಶೇಕಡ 50 ರಿಂದ 60 ರಷ್ಟು ಮುಳುಗಡೆ ಆಗುತ್ತಿದೆ. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಶಾಸಕರು ಹೇಳಿದರು.

ಸ್ಮಶಾನಕ್ಕೆ ಜಾಗ ಕೊಡಲು ರುದ್ರಭೂಮಿ ಪಕ್ಕದ ರೈತರ ಮನವೊಲಿಸಲಾಗಿದೆ. ಸರ್ಕಾರ ಆದಷ್ಟು ಬೇಗ ಜಮೀನು ವಶಪಡಿಸಿಕೊಳ್ಳಬೇಕು. ಇಲ್ಲವಾದರೆ ರಿಯಲ್ ಎಸ್ಟೇಟ್ ಒತ್ತಡದಿಂದ ಈ ಜಾಗ ಕೈತಪ್ಪುವ ಪರಿಸ್ಥಿತಿ ಇದೆ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಹಾಲಿ ಸ್ಮಶಾನ 10 ಎಕರೆ 9 ಗುಂಟೆ ಇದೆ. ಹೆಚ್ಚುವರಿಯಾಗಿ ಜಾಗ ಗುರುತಿಸಲಾಗಿದೆ. ರೈತರು 9 ಎಕರೆ ಜಾಗ ಕೊಡಲು ಒಪ್ಪಿದ್ದಾರೆ. ಆದರೆ ಮಾರ್ಗಸೂಚಿ ದರ ಎಕರೆಗೆ 67 ಲಕ್ಷ ಇದ್ದರೆ, ರೈತರು 1.20 ಕೋಟಿ ರೂ. ಕೇಳುತ್ತಿದ್ದಾರೆ ಎಂದರು.

ಸಂಧಾನ ಮಾಡಿ ಸಕಾರಣ ದರದಲ್ಲಿ ಜಮೀನು ಖರೀದಿಸಲು ಪ್ರಯತ್ನ ನಡೆಸುತ್ತಿದ್ದೇವೆ. ಇಲ್ಲವಾದರೆ ಬೇರೆ ಜಾಗವನ್ನಾದರೂ ಹೆಚ್ಚುವರಿ ಸ್ಮಶಾನಕ್ಕೆ ನೀಡಬೇಕು ಎಂದು ತಹಶೀಲ್ದಾರ್ ಹಾಗೂ ಜಿಲ್ಲಾಧಿ ಕಾರಿಗಳಿಗೆ ಸೂಚನೆ ನೀಡಿದ್ದೇವೆ. ಎಲ್ಲಾ ಪ್ರಯತ್ನ ಮಾಡಿ ಹೆಚ್ಚುವರಿ ಭೂಮಿ ಸ್ಮಶಾನಕ್ಕೆ ಕಾಯ್ದಿರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಮುಂದುವರೆದು ಮಾತನಾಡಿದ ಶಾಸಕ ಹರೀಶ್, ನಗರ ಪ್ರದೇಶಗಳಲ್ಲಿ ಒಂದು ಕೋಟಿ ರೂ. ದರ ನಿಜವಾಗಿಯೂ ದೊಡ್ಡದಲ್ಲ. ದಾವಣಗೆರೆ ಭಾಗದಲ್ಲಿ ನಾಲ್ಕು – ಐದು ಕೋಟಿ ರೂ. ಕೊಟ್ಟರೂ ಜಾಗ ಸಿಗುವುದಿಲ್ಲ ಎಂದರು.

ಅಲ್ಲದೆ ಹೊಳೆ ಭಾಗದಲ್ಲಿರುವ ಬಡವರ ಗುಡಿಸ ಲುಗಳು ಪ್ರತಿ ವರ್ಷ ಮಳೆಗಾಲದಲ್ಲಿ ಮುಳುಗಡೆಯಾಗುತ್ತವೆ. ರೈತರ ಜಮೀನು ಖರೀದಿಸಿದಲ್ಲಿ ಸ್ಮಶಾನಕ್ಕೆ ಅನುಕೂಲ ಆಗುವ ಜೊತೆಗೆ, ಮುಳುಗಡೆ ಸಮಸ್ಯೆ ಎದುರಿಸುತ್ತಿರು ವವರಿಗೆ ನಿವೇಶನ ಒದಗಿಸಲು ಸಾಧ್ಯವಾಗುತ್ತದೆ. ಸಚಿವರು ದೊಡ್ಡ ಮನಸ್ಸು ಮಾಡಬೇಕು ಎಂದು ಒತ್ತಾಯಿಸಿದರು.

error: Content is protected !!