ಚಂದ್ರಶೇಖರ್, ವೀರಶೈವ ಸಭಾದ ಜಿಲ್ಲಾಧ್ಯಕ್ಷ

ಚಂದ್ರಶೇಖರ್, ವೀರಶೈವ ಸಭಾದ ಜಿಲ್ಲಾಧ್ಯಕ್ಷ

ದಾವಣಗೆರೆ, ಜು.8- ಅಖಿಲ ಭಾರತ ವೀರಶೈವ – ಲಿಂಗಾಯತ ಮಹಾಸಭಾದ ದಾವಣ ಗೆರೆ ಜಿಲ್ಲಾಧ್ಯಕ್ಷರಾಗಿ ಐಗೂರು ಸಿ. ಚಂದ್ರಶೇಖರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಹಾಸಭಾದ ದಾವಣಗೆರೆ ಜಿಲ್ಲಾ ಘಟಕಕ್ಕೆ ಇದೇ ದಿನಾಂಕ 21ರಂದು ನಿಗದಿಯಾಗಿದ್ದ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದ್ದ ಇಂದು, ಕಣದಲ್ಲಿ ಚಂದ್ರಶೇಖರ್ ಒಬ್ಬರೇ ಇರುವ ಕಾರಣ, ಅವರ ಆಯ್ಕೆ ಅವಿರೋಧವಾಗಿ ನಡೆಯಿತು.

ಐಗೂರು ಚಂದ್ರಶೇಖರ್ ಮಹಾಸಭಾದ ಜಿಲ್ಲಾಧ್ಯಕ್ಷರಾದರೆ, ಉಳಿದಂತೆ 20 ಜನರು ಜಿಲ್ಲಾ ಘಟಕದ ಕಾರ್ಯನಿರ್ವಾಹಕ ಸಮಿತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಡಿ.ಎಂ. ಶಿವಕುಮಾರ್ ಕೊರಟಿಕೆರೆ, ಕೆ.ಆರ್. ಸಿದ್ದೇಶ್ವರಪ್ಪ, ಬಿ.ಎಂ. ವಿಶ್ವನಾಥ್, ಡಾ. ಅಶೋಕ್ ಕುಮಾರ್, ಬಿ.ಜೆ. ರಮೇಶ್, ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ, ಬಸವರಾಜಪ್ಪ ಬೆಳಗಾವಿ, ಕಿರುವಾಡಿ ವಿ. ಸೋಮಶೇಖರ್, ಕೆ.ಕೆ. ಮಹೇಶ್ ಕಂಚಿಕೆರೆ, ಎ.ವಿ. ಪ್ರಸಾದ್ ಅಥಣಿ, ಮಾಗಾನಹಳ್ಳಿ ಎಂ.ಜೆ. ಗಿರೀಶ್, ಅವಿನಾಶ್ ಬಸವರಾಜ್, ಮುಂಡಾಸ್ ವೀರೇಂದ್ರ (ಎಲ್ಲರೂ ದಾವಣಗೆರೆ), ಎಸ್.ಜಿ. ವೇದಮೂರ್ತಿ (ಶಾಮನೂರು), ಎ.ಸಿ. ಪಾಟೀಲ್ (ತ್ಯಾವಣಗಿ), ಎನ್.ಎಂ. ರಾಜು, ಬಸವರಾಜ ಓಂಕಾರಿ, ಆರ್.ಟಿ. ಪ್ರಶಾಂತ್ (ಹರಿಹರ), ಬಿ. ಉಮೇಶ್ ಕುಮಾರ್ (ಚನ್ನಗಿರಿ), ಜೆ.ಎನ್. ಶಿವನಗೌಡ (ಜಗಳೂರು) ಅವರುಗಳು ಮಹಾಸಭಾದ ಜಿಲ್ಲಾ ಘಟಕದ ಕಾರ್ಯನಿರ್ವಾಹಕ ಸಮಿತಿಗೆ ಆಯ್ಕೆಯಾಗಿದ್ದಾರೆ.

ಮಹಾಸಭಾದ ಜಿಲ್ಲಾ ಘಟಕದ ಕಾರ್ಯನಿರ್ವಾಹಕ ಸಮಿತಿಗೆ ಮಹಿಳಾ ಸದಸ್ಯರುಗಳಾಗಿ 9 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಿ.ಓ. ಯಶೋಧ, ಎನ್.ಎಸ್. ನಿರ್ಮಲ, ಕೆ.ಇ. ಮಂಜುಳ, ಜೆ.ಎಂ. ನಾಗರತ್ನ, ನೀತಾ ನಂದೀಶ್ ಬಳ್ಳಾರಿ, ಪಲ್ಲವಿ ಪಾಟೀಲ್, ಕೆ.ಪಿ.ರಾಜೇಶ್ವರಿ, ವಿಜಯ ಬಸವ ರಾಜ್, ಎ.ಎಸ್. ಸುಧಾ ಅವರುಗಳು ಮಹಿಳಾ ಸದಸ್ಯರುಗಳಾಗಿದ್ದಾರೆ.

ಪ್ರೊ. ವೈ. ವೃಷಭೇಂದ್ರಪ್ಪ ಉಪ ಚುನಾವಣಾ ಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಬಹುಮುಖ ಪ್ರತಿಭೆ : ಅಖಿಲ ಭಾರತ ವೀರಶೈವ – ಲಿಂಗಾಯತ ಮಹಾಸಭಾದ ದಾವಣಗೆರೆ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಐಗೂರು ಸಿ. ಚಂದ್ರಶೇಖರ್ ಅವರದು ಬಹುಮುಖ ಪ್ರತಿಭೆ ಮತ್ತು ಕ್ರಿಯಾಶೀಲ ವ್ಯಕ್ತಿತ್ವ.

ದಾವಣಗೆರೆಯ ಸುಸಂಸ್ಕೃತ ಐಗೂರು ಮನೆತನದ ದೊಡ್ಡಬಸಪ್ಪನವರ ಪುತ್ರರಾದ ಚಂದ್ರಶೇಖರ್ ಅವರು ಸೃಜನಶೀಲರಾಗಿದ್ದು, ಏನನ್ನಾದರೂ ಸಾಧಿಸುವ ಛಲವುಳ್ಳವರು. ಉದ್ಯಮಿಯಾಗಿರುವ ಅವರು, ವಿವಿಧ ಕ್ಷೇತ್ರ ಮತ್ತು ಹಲವಾರು ಸಾಮಾಜಿಕ ಸಂಘಟನೆಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಅಖಿಲ ಭಾರತ ವೀರಶೈವ – ಲಿಂಗಾಯತ ಮಹಾಸಭಾದ ಉದ್ಯಮ ಮತ್ತು ವಾಣಿಜ್ಯ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಎಣ್ಣೆ ಕಾಳು – ಎಣ್ಣೆ ಗಿರಣಿ ಮಾಲೀಕರ ಸಂಘದ ಖಜಾಂಚಿಯಾಗಿ, ದಾವಣಗೆರೆ ರೋಟರಿ ಕ್ಲಬ್ ಅಧ್ಯಕ್ಷರಾಗಿ, ಶಿವ ಸಹಕಾರ ಬ್ಯಾಂಕ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಐಗೂರು ಚಂದ್ರಶೇಖರ್ ಅವರ ಸಂಘಟನೆಯ ಕಾರ್ಯವನ್ನು ಶ್ಲ್ಯಾಘಿಸಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಮಹಾಸಭಾದ ಜಿಲ್ಲಾ ಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.

error: Content is protected !!