ಹರಿಹರ, ಜ. 5 – ಹಾವೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇನದ ಸಮ್ಮೇಳನಾಧ್ಯಕ್ಷರಾದ ಡಾ. ದೊಡ್ಡರಂಗೇಗೌಡರಿಗೆ ಹರಿಹರದಲ್ಲಿ ಸನ್ಮಾನಿಸಲಾಯಿತು. ಸಮ್ಮೇಳನಕ್ಕೆ ತೆರಳುವ ಮಾರ್ಗದಲ್ಲಿ ಅವರು ಹರಿಹರಕ್ಕೆ ಆಗಮಿಸಿದ್ದರು. ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಗೌರವ ಕಾರ್ಯದರ್ಶಿ ಗಳಾದ ಬಿ.ಬಿ. ರೇವಣನಾಯ್ಕ್, ಎಂ. ಚಿದಾನಂದ ಕಂಚಿಕೇರಿ, ಜಿಲ್ಲಾ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಜಿಲ್ಲಾ ಸದಸ್ಯ ಎ. ರಿಯಾಜ್ ಆಹ್ಮದ್, ತಾಲ್ಲೂಕು ಸದಸ್ಯ ತಿಪ್ಪಣ್ಣರಾಜ್, ಈಶಪ್ಪ ಬೂದಿಹಾಳ, ಶೇಖರಗೌಡ ಪಾಟೀಲ್, ಹೆಚ್.ಸಿ. ಕೀರ್ತಿ ಕುಮಾರ್, ಜೆ.ಕೆ. ಪಂಚಾಕ್ಷರಿ, ಹೆಚ್. ಸುಧಾಕರ, ಆರ್.ಮಂಜುನಾಥ್, ದಾದಾಪೀರ್ ಭಾನುವಳ್ಳಿ, ಬಹುಜನ ಸಮಾಜ ಪಕ್ಷದ ಹೆಚ್. ಮಲ್ಲೇಶ್, ಬಿ.ಎನ್. ರಮೇಶ್ ಉಪಸ್ಥಿತರಿದ್ದರು.