ನೂತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಾವಿತ್ರಿ ಬಾಪುಲೆ ಜಯಂತಿ ಆಚರಣೆ

ನೂತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಾವಿತ್ರಿ ಬಾಪುಲೆ ಜಯಂತಿ ಆಚರಣೆ

ದಾವಣಗೆರೆ, ಜ.5- ನಗರದ ನೂತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಾವಿತ್ರಿ ಬಾಪುಲೆ ಅವರ 192ನೇ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಡಾ. ಕೆ.ಎಸ್.ದಿವಾಕರ್ ನಾಯ್ಕ್ ಅವರ ಅಧ್ಯಕ್ಷತೆ ವಹಿಸಿ ಮಾತನಾಡಿ, `ಇತಿಹಾಸವನ್ನು ಓದದೇ ಇರುವವರು ಇತಿಹಾಸ ನಿರ್ಮಿಸಲಾರರು’ ಎಂದರು.  ಸಾವಿತ್ರಿ ಬಾಪುಲೆ ಅವರನ್ನು `ನಾರಿ ಶಕ್ತಿ’ ಎಂದು ವರ್ಣಿಸಿದರು. 

ಪ್ರತಿ ಭಾರತೀಯ ಹೆಣ್ಣು ಮಕ್ಕಳು ಸಾವಿತ್ರಿ ಬಾಪುಲೆಯವರಿಗೆ ಚಿರಋಣಿಯಾಗಿರಬೇಕು. ಏಕೆಂದರೆ ಅವರು ಅಕ್ಷರ ಕ್ರಾಂತಿಯನ್ನು ನಡೆಸಿ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದರು. ಸಮ ಸಮಾಜದ ನಿರ್ಮಾಣಕ್ಕಾಗಿ ಅವಿರತವಾಗಿ ಶ್ರಮಿಸಿದರು. ಭಾರತದಲ್ಲಿ ಹೆಣ್ಣುಮಕ್ಕಳಿಗಾಗಿ ಪ್ರಪ್ರಥಮವಾಗಿ ಶಾಲೆಯನ್ನು ತೆರೆದರು ಎಂದು ಅವರ ಜೀವನ ವೃತ್ತಾಂತದ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಕು. ಪಿ.ಜಿ.ಐಶ್ವರ್ಯ ಹಾಗೂ ಕು.ಎಸ್.ಸ್ಪೂರ್ತಿ ಪ್ರಾರ್ಥಿಸಿದರು. ರಹಸ್ಯ ರೈ ಸ್ವಾಗತಿಸಿದರು. ಕು. ಆಯೇಷಾ ಶಬನಮ್ ಸಾವಿತ್ರ ಬಾಪುಲೆಯವರ ಕುರಿತು ಮಾತನಾಡಿದರು. ಕು. ಫಾತಿಮಾ ರುಕ್ಸಾರ್ ವಂದಿಸಿದರು. ಶ್ರೀಮತಿ ರುಕ್ಸಾರ್ ಬಾನು ನಿರೂಪಿಸಿದರು.

error: Content is protected !!