ಮಾನ್ಯರೇ,
ದಾವಣಗೆರೆ ಹಾಗೂ ಹರಿಹರದ ಮಾರ್ಗ ಮಧ್ಯೆ ಇರುವ ದೊಡ್ಡಬಾತಿ ಸಮೀಪದ ಕೆರೆಗೆ ತಡೆ ಗೋಡೆ ಇಲ್ಲದಿರುವುದು ಸಂಚಾರಿಗಳಿಗೆ ಸಂಕಟ ತಂದಿದೆ.
ಕೆರೆಯ ದಂಡೆಗೆ ಅಂಟಿಕೊಂಡ ದಾವಣಗೆರೆ ಮತ್ತು ಹರಿಹರ ಸಂಪರ್ಕಿಸುವ ರಸ್ತೆ 1 ಕಿ.ಮೀ ವ್ಯಾಪ್ತಿ ಹೊಂದಿದ್ದು, ಇಲ್ಲಿ ನಿತ್ಯವೂ ಸಾವಿರಾರು ಜನ ಪ್ರಯಾಣಿಸುತ್ತಾರೆ. ಈ ವೇಳೆ ಅಪಾಯ ಸಂಭವಿಸಿದರೆ ಪ್ರಾಣ ಹಾನಿಯಾಗುವ ಸಾಧ್ಯತೆ ಕಾಣುತ್ತಿದೆ.
ಹಾಗೆಯೇ ರಾತ್ರಿ ಸಮಯದಲ್ಲಿ ಕೆರೆಯ ಮೇಲಿರುವ ರಸ್ತೆಯಲ್ಲಿ ಬೀದಿ ದೀಪದ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆಯುದ್ದವೂ ಸಂಪೂರ್ಣ ಕತ್ತಲು ಆವರಿಸುತ್ತಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಈ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡುತ್ತಿದ್ದೇನೆ.
– ಎಸ್.ಎಚ್. ಷಣ್ಮುಖ, ಹಳೇಬಾತಿ.