ತುಸು ಮಳೆಯಾದರೂ ರಸ್ತೆಯಲ್ಲಿ ನಿಲ್ಲುವ ನೀರು, ಕಣ್ಮುಚ್ಚಿ ಕುಳಿತ ಪಾಲಿಕೆ
ಮಾನ್ಯರೇ
ದಾವಣಗೆರೆಯ ವಿದ್ಯಾರ್ಥಿ ಭವನ ವೃತ್ತದಿಂದ ಅಂಬೇಡ್ಕರ್ ವೃತ್ತಕ್ಕೆ ಹೋಗುವ ರಸ್ತೆ ಇದು. ಇಲ್ಲಿ ತುಸು ಮಳೆಯಾದರೂ ರಸ್ತೆಯಲ್ಲಿ ಬಹಳಷ್ಟು ನೀರು ನಿಲ್ಲುತ್ತದೆ. ರಸ್ತೆ ಮೇಲೆ ಬಿದ್ದ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ನೀರು ನಿಲ್ಲುವುದರಿಂದ ವಾಹನ ಸವಾರರು ಬಲಬದಿಯಲ್ಲಿಯೇ ಬರುವುದರಿಂದ ಇದಿರು ಬರುವ ವಾಹನಗಳಿಗೆ ಅಡ್ಡಿಯಾಗುತ್ತಿದೆ. ಅಲ್ಲದೇ ಪಾದಚಾರಿಗಳಿಗೂ ತೊಂದರೆಯಾಗುತ್ತಿದೆ. ಕಣ್ಣು ಮುಚ್ಚಿ ಕುಳಿತ ಮಹಾನಗರ ಪಾಲಿಕೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ.