ಮಾನ್ಯರೇ,
ದಾವಣಗೆರೆ ನಗರದ ನ್ಯಾಯಾಲಯ ಸಂಕೀರ್ಣದ ಆವರಣದ ಮುಂಭಾಗ ಪಾದಚಾರಿ ಮಾರ್ಗದಲ್ಲಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಪಾಯಕ್ಕೆ ಆಹ್ವಾನ ಮಾಡುವಂತಿದೆ.
ಟ್ರಾನ್ಸ್‌ಫಾರ್ಮರ್ ಬಳಿ ನಿತ್ಯ ಸಂಚರಿಸುವ ಸಾರ್ವಜನಿಕರು ಭಯ ಹಾಗೂ ಆತಂಕದಲ್ಲೇ ಸಾಗುತ್ತಿದ್ದಾರೆ. ಈ ವಿದ್ಯುತ್ ಟ್ರಾನ್ಸ್ಫಾರ್ಮರ್ ಅಳವಡಿಸಿದ ಇಲಾಖೆಯವರು ಎಚ್ಚರಿಕೆ ಫಲಕವನ್ನೂ ಸಹ ಹಾಕದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ಮಳೆಗಾಲ ಪ್ರಾರಂಭವಾಗಿದೆ. ಈ ಸಮಯದಲ್ಲಿ ಇಂತಹ ಸ್ಥಳದಲ್ಲಿ ಅವಘಡ ಉಂಟಾದರೆ ಆಗುವ ಅನಾಹುತಕ್ಕೆ ಯಾರು ಹೊಣೆ?
ನಿತ್ಯ ಜನ ಸಂದಣಿಯ ಸ್ಥಳವಾಗಿರುವ, ಪಾದಾಚಾರಿ ಮಾರ್ಗವನ್ನು ಆಕ್ರಮಿಸಿಕೊಂಡಿರುವ ಈ ವಿದ್ಯುತ್ ಟ್ರಾನ್ಸ್‌ಫಾರ್ಮನಿಂದ ದುರಂತ ಸಂಭವಿಸುವ ಮೊದಲೇ ಇದನ್ನು ಬೇರೆಡೆಗೆ ಸ್ಥಳಾಂತರಿಸಿದರೆ ಮುಂದಾಗುವ ಅಪಾಯ ತಪ್ಪಿಸಬಹುದು. ಆದ್ದರಿಂದ ನಗರ ಜನತೆಯ ಪರವಾಗಿ ಅಧಿಕಾರಿಗಳಿಗೆ ಇದು ನನ್ನ ಮನವಿಯಾಗಿದೆ.
– ವಾದಿರಾಜ ಭಟ್ ವೈ., ವಕೀಲರು, ದಾವಣಗೆರೆ.