ಎಲ್ಲೆಂದರಲ್ಲಿ ಕಸ ಮುಸರೆ ಎಸೆಯುವುದನ್ನು ತಡೆಯಿರಿ

ಮಾನ್ಯರೇ, 

ನಗರದ ಪ್ರಮುಖ ಬಡಾವಣೆಗಳಲ್ಲಿ ಒಂದಾದ ಆಂಜನೇಯ ಬಡಾವಣೆಯ ಟ್ಯಾಂಕ್ ಪಾರ್ಕನ್ನು ಮಾದರಿ ಉದ್ಯಾನವನ ಮಾಡಬೇಕೆಂಬ ಹಂಬಲ ಇಲ್ಲಿನ ವಾಸಿಗಳದ್ದಾಗಿದೆ ಆದರೆ, ಇತ್ತೀಚಿನ ದಿನಗಳಲ್ಲಿ ಈ ಪಾರ್ಕಿನ ಸುತ್ತಲೂ ತಡರಾತ್ರಿ ಮತ್ತು ಬೆಳಗಿನ ಜಾವ ಕೆಲವು ಮನೆಯವರು ಮತ್ತು ಪಿಜಿ ಹಾಗೂ ಹಾಸ್ಟೆಲ್‌ನಿಂದ ತಿಂದು ಉಳಿದ ಪದಾರ್ಥವನ್ನು ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ.

ಬೀದಿ ನಾಯಿಗಳು ಇವನ್ನು ಎಳೆದು, ಚೆಲ್ಲಾಡಿ ಪಾರ್ಕಿನ ಸುತ್ತಲೂ ಗಲೀಜು ಮಾಡುವ ಜತೆಗೆ ಪಾರ್ಕಿಗೆ ಅಂಟಿಕೊಂಡ ರಸ್ತೆಯಲ್ಲಿ ಕಸ-ಮುಸರಿ ಹರಡುವ ಮೂಲಕ ಪ್ರಕೃತಿ ಸ್ವಾಸ್ಥ್ಯ ಹಾಳು ಮಾಡುತ್ತಿವೆ.

ಈ ದುಸ್ಥಿತಿಯಿಂದ ಸ್ಥಳೀಯ ಜನರು, ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದ ಮುಖ, ಬಾಯಿ ಮುಚ್ಚಿ ಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಆದ್ದರಿಂದ ಈ ಕೂಡಲೇ ಪಾಲಿಕೆಯ ಆಯುಕ್ತರು, ಆರೋಗ್ಯಾಧಿಕಾರಿಗಳು ಇತ್ತ ಗಮನ ಹರಿಸಿ ಕಸ ಎಸೆಯುವವರ ಮೇಲೆ ದಂಡ ವಿಧಿಸಿ ಮತ್ತು ಬೀದಿ ನಾಯಿಯ ಹಾವಳಿಯಿಂದ ಸ್ಥಳೀಯರನ್ನು ರಕ್ಷಿಸಿ.

– ಶಂಕರ ರಾವ್, ಆಂಜನೇಯ ಬಡಾವಣೆ, 8ನೇ ಕ್ರಾಸ್. ದಾವಣಗೆರೆ.

error: Content is protected !!