ವಾಲ್ಮೀಕಿ ನಿಗಮದ ವ್ಯಾಪಕ ಭ್ರಷ್ಟಾಚಾರ ಖಂಡಿಸಿ ನಾಳೆ ಪ್ರತಿಭಟನೆ

ವಾಲ್ಮೀಕಿ ನಿಗಮದ ವ್ಯಾಪಕ ಭ್ರಷ್ಟಾಚಾರ ಖಂಡಿಸಿ ನಾಳೆ ಪ್ರತಿಭಟನೆ

ದಾವಣಗೆರೆ, ಜೂ. 26- ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸರ್ಕಾರಿ ಅನುದಾನದ ಹಣ  ವರ್ಗಾವಣೆಯಲ್ಲಿನ ವ್ಯಾಪಕ ಭ್ರಷ್ಟಾಚಾರ ವಿರೋಧಿಸಿ ನಾಡಿದ್ದು ದಿನಾಂಕ 28 ರ ಶುಕ್ರವಾರ ಬೆಳಿಗ್ಗೆ 10.30 ಕ್ಕೆ ನಗರದ ಜಿಲ್ಲಾಧಿ ಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸ ಕರಿಯಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಹಣ ವರ್ಗಾವಣೆ ಯಲ್ಲಿ ನಡೆದ ಅವ್ಯವಹಾರ ಖಂಡಿಸಿ ಈ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದ್ದು, ನಿಗಮದ ಎಂ.ಡಿ. ಪದ್ಮ ನಾಭ್ ಅವರು ತನ್ನ ಸಹಿಯನ್ನು ಪೋರ್ಜರಿ ಮಾಡಲಾಗಿದೆ ಎನ್ನುತ್ತಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಹಣಕಾಸು ಸಚಿವರಾದ ಸಿದ್ಧರಾ ಮಯ್ಯ ಅವರೇ ಈ ಪ್ರಕರಣಕ್ಕೆ ಹೊಣೆಯಾಗಬೇಕಾ ಗುತ್ತದೆ. ಕೇವಲ ಸಚಿವ ನಾಗೇಂದ್ರ ಅವರ ರಾಜೀನಾಮೆ ಪರಿಹಾರ ಅಲ್ಲ ಎಂದು ಕಿಡಿಕಾರಿದರು.

ಪರಿಶಿಷ್ಟರ ಕಲ್ಯಾಣಕ್ಕಾಗಿ ಬಿಡುಗಡೆಯಾದ ಹಣದಲ್ಲಿ ಅವ್ಯವಹಾರ ನಡೆಸಿ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ದ್ರೋಹ ಮಾಡಿದೆ ಎಂದು ಆರೋಪಿಸಿದರು.

ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಹಿಂದುಳಿದ ವರ್ಗಗಳ ಸಮುದಾಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೀಸಲಿರಿಸಿದ್ದ ಸುಮಾರು 24 ಸಾವಿರ ಕೋಟಿ ರೂ.ಗಳನ್ನು ಕಾಂಗ್ರೆಸ್ ಸರ್ಕಾರ ಇತರೆ ಯೋಜನೆಗಳಿಗೆ ಬಳಸಿಕೊಂಡಿರು ವುದು ಆ ಸಮುದಾಯಕ್ಕೆ ಮಾಡಿ ದ ಅನ್ಯಾಯವಾಗಿದೆ. ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆಯ ಡೆಟ್ ನೋಟ್‌ನಲ್ಲಿ ಸ್ಪಷ್ಟವಾಗಿ ಸಚಿವರ ಮೌಖಿಕ ಆದೇಶ ಎಂದು ಬರೆದಿದ್ದರೂ, ಇದುವರೆಗೂ ಈ ಪ್ರಕರಣದಲ್ಲಿ ಯಾವುದೇ ತನಿಖಾ ಸಂಸ್ಥೆಯಿಂದ ಸಚಿವರನ್ನು ತನಿಖೆಗೆ ಒಳ ಪಡಿಸಿಲ್ಲ ಎಂದರು. ಎಸ್ಟಿ ಮೀಸಲು ಕ್ಷೇತ್ರಗ ಳಿಂದ ಗೆದ್ದ ಶಾಸಕರು ಈ ಪ್ರಕರಣದ ಬಗ್ಗೆ ಮೌನ ವಹಿಸಿರುವುದು ಎಸ್ಟಿ ಸಮುದಾಯಕ್ಕೆ ಮಾಡಿದ ದ್ರೋಹವಾಗಿದೆ. ಈ ಅವ್ಯವಹಾರಕ್ಕೆ ಹಣಕಾಸು ಇಲಾಖೆಗೆ ಸಂಬಂಧಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕೆಂದು ಶ್ರೀನಿವಾಸ್ ದಾಸಕರಿಯಪ್ಪ ಆಗ್ರಹಿಸಿದರು.

ಕಾಂಗ್ರೆಸ್ ಆಡಳಿತದಲ್ಲಿ ದಿನ ನಿತ್ಯ ಡಿಸಿಎಂ ಸ್ಥಾನಕ್ಕಾಗಿ ತಿಕ್ಕಾಟ, ಸಚಿವ ಸ್ಥಾನಕ್ಕಾಗಿ ಗುದ್ದಾಟ, ಅನುದಾನಕ್ಕಾಗಿ ಶಾಸಕರ ಹೋರಾಟ  ಲೂಟಿ ಮಾಡಲಿಕ್ಕೆಂದೇ ನಿರಂತರ ಪೈಪೋಟಿ ನಡೆಯುತ್ತಿದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಎನ್. ಲೋಕೇಶ್, ಲೋಹಿತ್ ಮಂಗೇನಹಳ್ಳಿ, ಆನಗೋಡು ತಿಪ್ಪಣ್ಣ, ಹೆಚ್.ಪಿ. ದುರುಗೇಶ್, ಗುಮ್ಮನೂರು ಶ್ರೀನಿವಾಸ್, ಸಾಲಕಟ್ಟೆ ಸಿದ್ಧಪ್ಪ, ಹೊಸಹಳ್ಳಿ ವೆಂಕಟೇಶ್, ಕೃಷ್ಣಮೂರ್ತಿ, ತರಕಾರಿ ಶಿವಣ್ಣ, ತ್ಯಾವಣಗಿ ದೊಡ್ಡೇಶ್, ರಮೇಶ್, ಕೆಂಚನಗೌಡ ಉಪಸ್ಥಿತರಿದ್ದರು.

error: Content is protected !!