`ಬುದ್ಧಿ, ಆರೋಗ್ಯ ಮತ್ತು ಯಶಸ್ಸಿಗೆ ನಿರಂತರ ಯೋಗ ವಿಜ್ಞಾನ’

`ಬುದ್ಧಿ, ಆರೋಗ್ಯ ಮತ್ತು ಯಶಸ್ಸಿಗೆ ನಿರಂತರ ಯೋಗ ವಿಜ್ಞಾನ’

`ಯೋಗೇನ ಚಿತ್ತಸ್ಯ ಪದೇ ನವಾಚ ಮಲಂ ಶರೀರಸ್ಯಚ ವೈದ್ಯಕೇನಾ ಯೋಪಾ 

ಕರೋತಮಂ ಪ್ರವರಂ ಮುನೀ ನಾಂ ಪತಂಜಲಿಂ ಪ್ರಾಂಜಲಿ ರಾನತೋಸ್ಮಿ 

ಆಬಾಹು ಪುರುಷ ಕರಂ ಶಂಖ ಚಕ್ರ ಸಿದಾರಿಣಂ

 ಸಹಸ್ರ ಶಿರಸಂ ಶ್ವೇತಂ ಪ್ರಣಮಾಮಿ ಪತಂಜಲಿ’

 ಪತಂಜಲಿ ಯೋಗ ಮಂತ್ರ 

ಗಾಳಿ, ನೀರು ಮತ್ತು ಮಣ್ಣು ಇವುಗಳು ನೈಸರ್ಗಿಕ ವಾಗಿ ಲಭ್ಯವಿರುವ ಸಂಪನ್ಮೂಲಗಳು. ಅಂತೆಯೇ ಮಾನವನ ದೇಹವು ನೈಸರ್ಗಿಕ ಸಂಪನ್ಮೂಲವಾಗಿದೆ. ಮಾನವನ ಅಸ್ತಿತ್ವಕ್ಕೆ ಆಹಾರ, ನೀರು ಹೇಗೆ ಅಗತ್ಯವೂ ಅಂತೆಯೇ ದೇಹ ಮತ್ತು ಮನಸ್ಸಿನ ಶುದ್ಧೀಕರಣವು ತುಂಬಾ ಅತ್ಯಗತ್ಯವಾಗಿದೆ. ಯೋಗ ಜೀವನವನ್ನು ಅಳವಡಿಸಿಕೊಂಡಾಗ ದೇಹ, ಮನಸ್ಸುಗಳ ಅಂತರ್ಶಕ್ತಿಯ ವೃದ್ಧಿಯಿಂದಾಗಿ ಮನುಷ್ಯ ಪರಿಸರವನ್ನು ಶುದ್ಧಿಗೊಳಿಸಲು ರೂಪುಗೊಳ್ಳುತ್ತಾನೆ. ಯೋಗ ಪ್ರಕ್ರಿಯೆಯು  ಭಕ್ತಿ ಯೋಗ, ಜ್ಞಾನ ಯೋಗ ಮತ್ತು ಕ್ರಿಯಾ ಯೋಗವನ್ನು ಒಳಗೊಂಡು ದೇಹ ಮತ್ತು ಮನಸ್ಸನ್ನು ಸಂಪೂರ್ಣ ಹತೋಟಿಯಲ್ಲಿಟ್ಟು ಆರೋಗ್ಯ ವರ್ಧನೆಗೆ ಕಾರಣವಾಗುತ್ತದೆ. ಯೋಗ ವಿಜ್ಞಾನವು ಜ್ಞಾನ ವಿಜ್ಞಾನ ಮತ್ತು ಕ್ರಿಯೆಗಳ ಸಮ್ಮಿಳಿತದಿಂದ ರೂಪುಗೊಂಡಿದೆ. ಯಾವುದೇ ಸಮಾಜವು ಆರೋಗ್ಯವಂತ ನಾಗರಿಕರನ್ನು ನಿರ್ಮಾಣ ಮಾಡಬೇಕಾದರೆ ಆಹಾರ (ಮಿತ ಬುಕ್ ಹಿತ ಬುಕ್ ಮತ್ತು ಋತು ಬುಕ್) ಮತ್ತು ಯೋಗ ಪ್ರಕ್ರಿಯೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾಗುತ್ತದೆ. ಮಹರ್ಷಿ ಪತಂಜಲಿ ಅವರ ಯೋಗ ಸೂತ್ರಗಳು ಅಪಾರ ಯೋಗ ಶಕ್ತಿಯನ್ನು ಬದುಕುವ ಸಾಮರ್ಥ್ಯವನ್ನು ಹೆಚ್ಚಿಸುತ್ತೇವೆ. ನಿಸ್ವಾರ್ಥ, ಆನಂದಮಯ ಮತ್ತು ಪ್ರೇಮಮಯ ವಾತಾವರಣ ಸೃಷ್ಟಿಸಿ ಆರೋಗ್ಯವಂತ ಸಮಾಜ ನಿರ್ಮಿಸುವುದು ಯೋಗ ವಿಜ್ಞಾನದ ಜಯವಾಗಿದೆ. ಮಹರ್ಷಿ ಪತಂಜಲಿ ಅವರ ಯೋಗ ಸೂತ್ರದ ಕೊಡುಗೆ ಆಧುನಿಕ ಕಾಲದ ಬದಲಾವಣೆಗಳಾದ ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಳ್ಳುವ ಬಗೆ, `ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ’ ಎಂಬ ಧ್ಯೇಯೋದ್ದೇಶಗಳು ಮನುಷ್ಯನನ್ನು ಮತ್ತಷ್ಟು ಶುದ್ಧೀಕರಿಸುತ್ತದೆ. ಯೋಗ ಎಂಬುದು ಒಂದು ಜ್ಞಾನದ ಆಗರ. ಯೋಗ ಎಂಬುದು ದೇಹ ದಂಡನೆ ಮಾತ್ರವಲ್ಲ ಇದು ಶರೀರ ಮತ್ತು ಮನಸ್ಸಿನ ಅಂತರ್‌ ದೃಷ್ಟಿಯಿಂದಾಗಿ ನಮ್ಮನ್ನು ನಾವು ಕಂಡುಕೊಳ್ಳುವ ಪರಿ. ಇದರಿಂದಾಗಿ ಜೀವನಾನಂದವನ್ನು, ಪ್ರಕೃತಿಯನ್ನು ಆಸ್ವಾದಿಸುವ ಮತ್ತು ಜೀವನ ಪ್ರೀತಿಯನ್ನು ಪಡೆಯುವ ಹಂಬಲ ಉಂಟಾಗುತ್ತದೆ. 

ಯೋಗ ಪ್ರಕ್ರಿಯೆಯಿಂದ ಆಗುವ ಅನುಕೂಲಗಳು

ಮಾನಸಿಕ ಒತ್ತಡ ಕಡಿಮೆ ಮಾಡಲು, ರಕ್ತದ ಒತ್ತಡ ಸರಿಪಡಿಸಲು, ಸ್ಥೂಲಕಾಯವನ್ನು ಕಡಿಮೆಗೊಳಿಸಲು, ಕೊಬ್ಬು ಕರಗಿಸಲು, ಅಂತ ಶಕ್ತಿ ವೃದ್ಧಿಗಾಗಿ ಮತ್ತು ಮನಃಶಾಂತಿಗಳಂತಹ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

ದೇಹದ ಒಟ್ಟಾರೆ ತುಂಬಾ ಆರೋಗ್ಯಕ್ಕಾಗಿ ಮಕ್ಕಳು, ಯುವಜನರು, ಅಬಾಲ ವೃದ್ಧರು, ಗರ್ಭಿಣಿಯರು ಮತ್ತು ಎಲ್ಲ  ಮನುಷ್ಯರು ಮಾಡಬಹುದಾದ ಪ್ರಕ್ರಿಯೆಯೇ ಯೋಗ. 

ನಿದ್ರಾಹೀನತೆ, ಬೆನ್ನು ನೋವು, ಅಜೀರ್ಣತೆ, ಕೈಕಾಲು, ಮಂಡಿ ನೋವುಗಳು ಮುಂತಾದ ತೊಡಕು ಗಳನ್ನು ಸೂಕ್ತ ಯೋಗಾಸನದಿಂದ ತಡೆಯಲು ಸಾಧ್ಯವಿದೆ. ದಿನನಿತ್ಯದ ಜೀವನ ಜಂಜಾಟದಿಂದಾದ ಒತ್ತಡವನ್ನು ಉಸಿರಾಟದ ಸಮತೋಲನ ಆಸನಗಳು, ಮೆದುಳು ಮತ್ತು ಶ್ವಾಸಕೋಶದ ಆಂತರಿಕ ಸಂವಹನ ದಿಂದಾಗಿ ಮನಃ  ಶಾಂತಿಯನ್ನು ಒದಗಿಸುತ್ತದೆ. ಇದರಿಂದ ಹಲವಾರು ರೋಗಗಳು ದೂರವಾಗಿ ಸಂತೋಷ ಮತ್ತು ಉಲ್ಲಾಸದಿಂದಿರಲು ಸಹಾಯ ಮಾಡಿ ಕೆಲಸ ಕಾರ್ಯಗಳಲ್ಲಿ ದೃಢವಾಗಿ ತೊಡಗಿಸುವ ಅಂತಃ ಶಕ್ತಿಯನ್ನು ಹೆಚ್ಚಿಸುತ್ತದೆ. ಉಸಿರಾಟ ಮತ್ತು ಸೂಕ್ತ ಯೋಗಾಸನಗಳಿಂದಾಗಿ ತೇಜಸ್ಸು ಮತ್ತು ಓಜಸ್ಸು ಹೆಚ್ಚಿ ರಕ್ತ ಪರಿಚಲನೆ ಸರಾಗವಾಗಿ ನಡೆದು ಉತ್ತಮ ಮಟ್ಟದ ಆಮ್ಲಜನಕ ಮತ್ತು ಜೀವ ಸತ್ವಗಳನ್ನು ದೇಹದ ಎಲ್ಲಾ ಭಾಗಗಳಿಗೆ ಲಭ್ಯವಾಗಿಸಿ, ಆರೋಗ್ಯವಂತರಾಗಿ ಚರ್ಮದ ಆರೋಗ್ಯ ಮತ್ತು ಕಾಂತಿಯನ್ನು ಪಡೆಯಬಹುದು. ಅಲ್ಲದೆ ಹೃದಯ ಮತ್ತು ಹೃದಯದಲ್ಲಿನ ವಿವಿಧ ಭಾಗಗಳಿಗೆ ಉತ್ತಮ ರಕ್ತ ಪರಿಚಲನೆಯಿಂದಾಗಿ ರಕ್ತ ಸಂಚಾರ ಸುಗಮವಾಗಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಮುಕ್ತರಾಗಿ ಆರೋಗ್ಯವಂತ ಹೃದಯವನ್ನು ಹೊಂದಬಹುದು. 

ದಾವಣಗೆರೆ ವಿಶ್ವವಿದ್ಯಾನಿಲಯದ `ಯೋಗ ವಿಜ್ಞಾನ ಅಧ್ಯಯನ ವಿಭಾಗವು’ ಕಳೆದ ಏಳು ವರ್ಷ ಗಳಿಂದ ಅತ್ಯಂತ  ಸ್ಫೂರ್ತಿದಾಯಕವಾಗಿ ಕಾರ್ಯ ನಿರ್ವ ಹಿಸುತ್ತಿದೆ. ಯೋಗ ಪಠ್ಯ, ಪ್ರಾಯೋಗಿಕ ಕ್ರಿಯೆಗಳು, ಆಸನ ಮೊದಲಾದ ವಿಷಯಗಳನ್ನು ಪಠ್ಯಕ್ರಮಗಳಲ್ಲಿ ಅಳವಡಿಸಿಕೊಂಡು ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು ದೇಶ. ವಿದೇಶಗಳಲ್ಲಿ ಉದ್ಯೋಗ ಪಡೆದು ಉತ್ತಮ ಆರೋಗ್ಯ ಮತ್ತು ಯಶಸ್ವೀ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ. 

ಪ್ರತಿ ವರ್ಷ ಜೂನ್ 21ರಂದು (2015ರಲ್ಲಿ ಆರಂಭವಾಗಿ) ಅಂತರರಾಷ್ಟ್ರೀಯ ಯೋಗ ದಿನವ ನ್ನಾಗಿ ಆಚರಿಸಲಾಗುತ್ತಿದ್ದು, ಈ ವರ್ಷವೂ ದಶಮಾ ನೋತ್ಸವ ವನ್ನು ಎದುರು ನೋಡುತ್ತಿದೆ. ಈ ವರ್ಷದ ಧ್ಯೇಯ ವಾಕ್ಯವು ನಮಗಾಗಿ ಮತ್ತು ಸಮಾಜಕ್ಕಾಗಿ ಯೋಗ ಎಂಬುದಾಗಿದ್ದು ಮಹರ್ಷಿ ಪತಂಜಲಿ ಅವರ ಸೂತ್ರದಂತೆ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಆಶಯವೇ ಆಗಿದೆ. ಆದ್ದರಿಂದ ಆರೋಗ್ಯವಂತ ಮತ್ತು ಸಮಚಿತ್ತದ ಮನೋ ಬಲಕ್ಕಾಗಿ ಯೋಗವನ್ನು ಪ್ರತಿದಿನ ಅಭ್ಯಾಸ ಮಾಡಿ ನಿರೋಗಿಗಳಾಗೋಣ ಮತ್ತು ನಾವು ಕಲಿತ ವಿದ್ಯೆಯನ್ನು ಸಮಾಜಕ್ಕೆ ಸಮರ್ಪಿಸಿ ಆರೋಗ್ಯ ಸುಸ್ಥಿರ ಸಮಾಜ ನಿರ್ಮಾಣ ಮಾಡೋಣ.

`ಬುದ್ಧಿ, ಆರೋಗ್ಯ ಮತ್ತು ಯಶಸ್ಸಿಗೆ ನಿರಂತರ ಯೋಗ ವಿಜ್ಞಾನ' - Janathavani– ಡಾ. ಗಾಯತ್ರಿ ದೇವರಾಜ, ಹಿರಿಯ ಪ್ರಾಧ್ಯಾಪಕರು, ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ.

error: Content is protected !!