ರಾಜಕೀಯದ ಸಹಜ ವಿಷಕ್ಕೆ ನ್ಯಾಯ ನಿಷ್ಠೂರಿ ಪ್ರಾಜ್ಞರಾಗಿದ್ದ ಹೆಚ್.ಸಿದ್ದವೀರಪ್ಪ

ರಾಜಕೀಯದ ಸಹಜ ವಿಷಕ್ಕೆ ನ್ಯಾಯ ನಿಷ್ಠೂರಿ ಪ್ರಾಜ್ಞರಾಗಿದ್ದ ಹೆಚ್.ಸಿದ್ದವೀರಪ್ಪ

ಹೆಚ್.ಸಿದ್ದವೀರಪ್ಪ 118ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ…

ಸಾಮಾಜಿಕ ಬದುಕಿಗೆ ನೀತಿ ತತ್ವ ಸಾಂಘಿಕವಾಗಿರುತ್ತದೆ. ವ್ಯಷ್ಠಿ-ಸಮಷ್ಠಿಗಳ ಹಿತಾರ್ಥಗಳಲ್ಲಿ ಸಂಘರ್ಷಗಳು ಬರದಂತೆ ನೋಡಿಕೊಳ್ಳುವುದು ನೀತಿಯ ಅಥವಾ ಧರ್ಮದ ಕರ್ತವ್ಯ. ಅದರ ವ್ಯಾಪ್ತಿಯು ಸಾರ್ವಧೀಶಿಕ ಹಾಗೂ ಹೊಂದಿಕೊಳ್ಳುವ (Concordantia) ಗುಣವನ್ನು ತನ್ನ ಕಕ್ಷೆಯಲ್ಲಿ ಪಾತಾಳಿಸುತ್ತದೆ.

ಇಂದು ನಮ್ಮ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಮನುಷ್ಯರು ವಿರುಧ್ಯೋಕ್ತಿ (Paradox) ಗೊಳಗಾಗಿ, ಮಾನವೀಯ ಮೌಲ್ಯದ ಎಲ್ಲಾ ಶ್ರೇಣಿ (The whole scale of values) ಗಳು ಅನೇಕ ವಿಧ್ವಂಸಕ ಕೃತಿಗಳಲ್ಲಿ ತೊಡಗುತ್ತಿರುವುದನ್ನು ಕಾಣುತ್ತಿದ್ದೇವೆ. ಇದಲ್ಲದೇ ಮಾನಸಿಕ, ಅಯೋಗ್ಯ (Psychologically Incompatible)  ಗಳ ಕಾರ್ಮೋಡಗಳು ತೂಗಾಡುತ್ತಿವೆ. ಜಗತ್ತಿನ ಇಂದಿನ ಪರಿಸ್ಥಿತಿಯನ್ನು ವೀಕ್ಷಿಸಿದರೆ ಯಾವ ಗಳಿಗೆಯಲ್ಲಿ ಮಾನವ ಕುಲವೇ ಶೂನ್ಯ (Soelig) ವಾಗುತ್ತದೆಯೋ ಎಂಬ ಭಯ ಎಲ್ಲರನ್ನೂ ಆವರಿಸಿದೆ. ಹೀಗೆಯೇ ‘ಅತಿನಿಷ್ಠವಾದ’
(Dogmatic)  ಮುನ್ನಡೆದರೆ ಮತ್ತು ಶಿರೋಭ್ರಮಣೆ (Dizzy)ಯ ಚಾಂಚಲ್ಯತೆಗೆ ಮಾನವ ಜನಾಂಗದ ನಾಶ ನಿಶ್ಚಿತ ಎಂಬುದನ್ನು ತಿಳಿಯಲಾರದವರಾಗಿದ್ದೇವೆ. 

ಭಾರತವು ಸ್ವಾತಂತ್ರ್ಯ ಪಡೆದ ಪರಿಗಳು ಎಂದರೆ ‘ನಿನ್ನೆ’ಗಳು ‘ಇಂದಿ’ನವರಿಗೆ ಸಾಧಿತದರಿವು ಮೂಡದಿದ್ದರೆ ‘ನಾಳೆ’ಗಳು ಅಖಲ್ಯ
(Cowardice)  ವಾಗುತ್ತವೆ. ಇಂತೆಲ್ಲಾ ಮಹೋನ್ನತ ಅಭಿಪ್ರಾಯಗಳನ್ನಿಟ್ಟುಕೊಂಡು ಪ್ರಥಮ ಪ್ರಜಾಸತ್ಯಾತ್ಮಕ ಚುನಾವಣೆಯನ್ನು ರೂಪಿಸಿ, ಸಾರ್ಥಕ ಸಾಧನೆಯ ತಳಹದಿಯ ಮೇಲೆ ಸರಳ-ಸುಂದರ-ಹಂದರದ ಪಡಿ ನೆರಳಿನಲ್ಲಿ ವಿಧಾನಸೌಧದೊಳಗೆ ನುಡಿಗಡಗಳನ್ನು ಬಿತ್ತಿ; ‘ಯಾವ ಸರ್ಕಾರದಲ್ಲಿ ರಾಜ್ಯದ ಆಡಳಿತವು ಒಂದು ನಿರ್ದಿಷ್ಟ ವರ್ಗಕ್ಕೆ ಅಥವಾ ವರ್ಗಗಳಿಗೆ ಸೇರಿರದೇ, ಸಂಪೂರ್ಣ ಸಮಾಜದ ಸದಸ್ಯರುಗಳಿಗೆ ಸೇರಿರಬೇಕು’. ‘ಯಾವ ಸರ್ಕಾರದಲ್ಲಿ ಪ್ರತಿಯೊಬ್ಬನೂ ಪಾಲನ್ನು ಹೊಂದಿರುವನೋ ಅದೇ ಪ್ರಜಾಪ್ರಭುತ್ವ’ ((Democracy is A
Government in which has a share) ಎಂದು ಹೇಳಿದ ‘ಲಾರ್ಡ್ ಬ್ರೈಸ್’ ಮತ್ತು ‘ಪ್ರೊ. ಸೀಲೆ’ಯವರ ಮಾತನ್ನು ಪುನರುಕ್ತಿಗೊಳಿಸಿದವರು  ಹೆಚ್. ಸಿದ್ದವೀರಪ್ಪನವರು.

ಅವರು ಪೂನಾ ಫರ್ಗ್ಯೂಷನ್ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಕಾನೂನು ತಜ್ಞರಾದ ಡಾ. ಬಿ.ಆರ್. ಅಂಬೇಡ್ಕರ್‍ರವರು ವಿಶೇಷ ಉಪನ್ಯಾಸಕರಾಗಿ ನೀಡಿದ ಪ್ರಭಾಷಣ, ವಿಶೇಷ ಪ್ರಭಾವ ಬೀರಿದ್ದನ್ನು ಅನೇಕ ಸಲ ನೆನಪಿಸಿಕೊಳ್ಳುತ್ತಿದ್ದರು. ಅಂದಿನ ವಿದ್ಯಾರ್ಥಿಗಳಲ್ಲಿ ‘ಗಾಂಧಿ ಮತ್ತು ಅಂಬೇಡ್ಕರ್’ ಇಬ್ಬರ ಚಿಂತನೆ, ಹೋರಾಟಗಳ ಕಲ್ಪನೆ ಅಗತ್ಯವಾಗಿತ್ತು. ಇದರ ಆಯ್ಕೆ ಅವರವರಿಗೆ ಸಂಬಂಧಿಸಿದ್ದುದು. ಸಿದ್ದವೀರಪ್ಪನವರಿಗೆ ಗಾಂಧೀಜಿ ಮತ್ತು ಅಂಬೇಡ್ಕರ್‍ರವರ ಸಾರ್ವಜನಿಕವಾದ ಬದುಕಿಗೆ ಆದರ್ಶರಾದವರು. ಗಾಂಧೀಜಿಯವರನ್ನು ಎಷ್ಟು ಪ್ರಮಾಣದಲ್ಲಿ ದೃಢಪಡಿಸಿಕೊಳ್ಳಬೇಕು ಹಾಗೂ ಅಂಬೇಡ್ಕರ್‍ರವರನ್ನು ಕಾನೂನು ವ್ಯಾಪ್ತಿಯಲ್ಲಿ ಎಷ್ಟು ಪ್ರತ್ಯಾಸನ್ನರಾಗಿಸಿಕೊಳ್ಳಬೇಕು ಎಂಬಲ್ಲಿ ‘ಸರಿಯಾದ ಓದುಗ, ಪಾರಂಗತ ಓದುಗ’ (The right reader is the perfect reader) ತನದ ಜಿಜ್ಞಾಸೆಯಲ್ಲಿ ಪರಿಶೋಧನೆ (Exploration)  ಗೊಳಗಾಗಿ ತೂಗಿ, ಕಾನೂನು ಪರಿಣಿತಿ ಪಡೆದು ಬೌದ್ಧಿಕ ಆಲೋಚನೆಯಿಂದ ವಕೀಲಿ ವೃತ್ತಿ ಕ್ಷೇತ್ರದಿಂದ ಪ್ರಖ್ಯಾತರಾದವರು. 

ಹೆಚ್. ಸಿದ್ದವೀರಪ್ಪನವರು ದಾವಣಗೆರೆ ಯಲ್ಲಿಯೇ ತಮ್ಮ ವೃತ್ತಿಯನ್ನು ಪ್ರಾರಂಭಿಸಿ, ಸಾರ್ವಜನಿಕ ಬದುಕಿನಲ್ಲಿ ತಲಸ್ಪರ್ಷಿಯಾದರು. ವಕೀಲಿ ವೃತ್ತಿಯೊಂದಿಗೆ ರಾಜಕೀಯ ಅಂಗಳಕ್ಕಿಳಿದರು. ಇದರ ಪರಿಣಾಮವಾಗಿ ಜಿಲ್ಲಾ ಬೋರ್ಡ್ ಸದಸ್ಯರಾಗಿ, ರೈತರ ಫಸಲುಗಳ ಮಾರಾಟ ಸಹಕಾರ ಸಂಘದ ಸ್ಥಾಪಿತರಾಗಿ, ಕಾರ್ಮಿಕರ ಸಮಸ್ಯೆಗಳತ್ತ ಗಮನೀಕರಿಸಿ, ಶಿಕ್ಷಣ ಕ್ಷೇತ್ರಕ್ಕೆ ಪ್ರತ್ಯೇಕವಾದ ಕಾರ್ಯೋನ್ಮುಖರಾಗಿ, ಮೈಸೂರು ಪ್ರಜಾಪ್ರತಿನಿಧಿ ಸಭೆ ಸದಸ್ಯರಾಗಿ, ಕೆ.ಸಿ. ರೆಡ್ಡಿಯವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ರಾಜ್ಯದ ರಚನಾ ಸಭೆಯ ಸದಸ್ಯರಾಗಿ, ಬಹು ಪ್ರಮುಖವಾಗಿ ದಾಖಲಿಸಬೇಕಾದ ಒಂದು ವಿಚಾರ-ಡಾ. ಬಿ.ಆರ್. ಅಂಬೇಡ್ಕರ್ ರವರ ನೇತೃತ್ವದಲ್ಲಿ ಭಾರತ ಸಂವಿಧಾನ ರಚನೆಯ ‘ಕರಡು ಸಮಿತಿ’ (Draft Committee) ಸದಸ್ಯರಾಗಿ, ಪ್ರಾಮಾಣದ ಅನುಭವ (Standerd
Experience) ವನ್ನು ಹೊಂದಿ ಯಾವಾಗಲೂ ದೂರದೃಷ್ಟಿ (Foresight)  ಯಿಂದ ನಾಳಿನ ದಿನಗಳು ಬಹುಶ್ಯದ ದಿನಗಳು ಎಂದು ಭಾವಿಸಿ, ಪ್ರಜಾಸತ್ತಾತ್ಮಕ ಪ್ರಥಮ ಮಹಾ ಚುನಾವಣೆಯ ರಾಜ್ಯ ರಾಜಕಾರಣದಲ್ಲಿ ಪ್ರವೇಶಿಸಿ, ಹರಿಹರ ಕ್ಷೇತ್ರದಲ್ಲಿ ಗೆಲುವನ್ನು ಸಾಧಿಸಿಕೊಂಡು, ಕೆಂಗಲ್ ಹನುಮಂತಯ್ಯನವರ ಮುಂದಾಳತ್ವದ ಮಂತ್ರಿಮಂಡದಲ್ಲಿ ಶಾಸಕರಾಗಿ ಆಯ್ಕೆಯಾದ ಬೆನ್ನಲ್ಲೆ ಅವರಿಗೆ ದೊರೆತ ಖಾತೆಗಳು ಗೃಹ, ಕೃಷಿ, ತೋಟಗಾರಿಕೆ ಮತ್ತು ಸಾರಿಗೆ ನಂತರ ಕೈಗಾರಿಕೆಗಳಂತಹ ಪ್ರಮುಖ ಖಾತೆಗಳನ್ನು ಹೊಂದಿ ಸಚಿವರಾಗಿ ಕಾರ್ಯವನ್ನು ನಿಭಾಯಿಸಿದರು.

ಸಿದ್ದವೀರಪ್ಪನವರು ಕಾನೂನು ನಿಯಮಾವಳಿಗಳ ಅನ್ವಯ ಬೆಂಗಳೂರು ಟ್ರಾನ್ಸ್‍ಫೋರ್ಟ್ ಕಂಪನಿ, ಕೆ.ಜಿ.ಎಫ್. ಗೋಲ್ಡ್ ಮೈನ್ಸನ್ನು ರಾಷ್ಟ್ರೀಕರಣಗೊಳಿಸಿದ ಬೆನ್ನಲ್ಲೇ ಜವಾಹರಲಾಲ್ ನೆಹರು ಅಸಮಾಧಾನ ಹೊಂದಿದ್ದು, ಲಾರ್ಡ್ ಮೌಂಟ್ ಬ್ಯಾಟನ್‍ರವರಿಗೆ ಆತ್ಮೀಯರಾಗಿದ್ದ ಜಾನ್ ಟೇಲರ್ & ಕಂಪನಿ ವಿರುದ್ಧ ಸಾರಿದ್ದು ದೇಶಕ್ಕೆ ಸ್ವಾತಂತ್ರ್ಯ ಲಭಿಸಿದರೂ ವಿದೇಶಿಯರ ಹಸ್ತಕ್ಷೇಪವನ್ನು ತಪ್ಪಿಸಿದ್ದು, ಸರ್ ಎಂ.ವಿ. ವಿಶ್ವೇಶ್ವರಯ್ಯನವರ ಸಲಹೆ ಪಡೆದು ಗ್ರಾಮೀಣ ಕೈಗಾರಿಕಾ ಅಭಿವೃದ್ಧಿ ಯೋಜನೆ, ಮುಂದೆ ಅದು ಖಾದಿ ಗ್ರಾಮೋದ್ಯೋಗ ಮಂಡಳಿ ಎಂದು ರೂಪುಗೊಂಡಿದ್ದು, ವಿಧಾನಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಸಮರ್ಥ ಉತ್ತರ ಕೊಟ್ಟದ್ದು, ವರ್ತಕರಿಂದ ರೈತರಿಗೆ ಆಗುತ್ತಿದ್ದ ಅನ್ಯಾಯ ಸರಿಪಡಿಸಲು ರೈತರನ್ನು ಸಂಘಟಿಸಿ ‘ರೆಗ್ಯೂಲೇಟೆಡ್ ಮಾರ್ಕೆಟ್ ಸಹಕಾರ ಸಂಘ’ ಸ್ಥಾಪಿಸಿ ರೈತರಿಗೆ ಬೆಂಬಲ ದೊರಕಿಸಿದ್ದು, ಇನ್ನೂ ಅನೇಕ ಕಾರ್ಯಗಳನ್ನು ಪೂರೈಸಿದ ಹೆಗ್ಗಳಿಕೆ ಹೆಚ್. ಸಿದ್ದವೀರಪ್ಪನವರದು.

ಹೆಚ್. ಸಿದ್ದವೀರಪ್ಪನವರ ವಿಶಿಷ್ಟ ವ್ಯಕ್ತಿತ್ವ, ವಿಚಾರ, ಪಾವಿತ್ರ್ಯತೆ, ವಿವೇಕಪೂರ್ಣ ನಡವಳಿಕೆ, ಸತ್ವ ಪರಂಪರೆಯ ಪ್ರಣತಿ, ನೊಂದವರನ್ನೂ ಬೆಂಬಲಿಸುವ ಮಾನವೀಯತೆ, ಅನ್ಯಾಯಕ್ಕೆ ಎದೆ ಸೆಟೆದು ನಿಲ್ಲುವ ಗರುಢಗಾಂಭೀರ್ಯ, ಗ್ರಾಮೀಣ ಸಂಸ್ಕೃತಿಯ ಸಿರಿಗಂಧ ತಮ್ಮ ಅಭಿಪ್ರಾಯಗಳನ್ನು ಒಪ್ಪಲಿ, ಬಿಡಲಿ, ಮುಚ್ಚು-ಮರೆ ಇಲ್ಲದೇ ವ್ಯಕ್ತದಾಷ್ಟ್ಯತೆ, ಕೃಷಿಕರಾಗಿ ಸಿಹಿ-ಕಹಿಯನ್ನು ಉಂಡ ಅನುಭವ ರಾಜಕೀಯ ಜೀವನದಲ್ಲಿ ತಮ್ಮೆಲ್ಲವನ್ನೂ ಧಾರೆ ಎರೆದು ತಪ್ಪು ಮಾಡಿದವರು ಯಾವುದೇ ಹುದ್ದೆ ಹೊಂದಿದ ವ್ಯಕ್ತಿಯಾಗಿರಲಿ ಅವರನ್ನು ನಿರ್ದಾಕ್ಷಿಣ್ಯವಾಗಿ ಹಾಗೂ ಬಹಿರಂಗವಾಗಿ ಖಂಡಿಸಿ ನ್ಯಾಯ-ನಿಷ್ಠೆಯಿಂದ ಬಾಳಿದ ಧೀಮಂತರು.

ಶ್ರೀಯುತರು ವಾಸ್ತವವಾದಿ. ಮಾತು-ಕೃತಿ ವಿರೋಧಾರ್ಥಕವೆಂದು ಭಾವಿಸಲೇ ಇಲ್ಲ. ರೈತರ ಶೋಷಣೆಗೆ ಕಾರಣರಾದ ವ್ಯಾಪಾರಸ್ಥರ ಬಗ್ಗೆ ವಿವಿಧ ಸಭೆಗಳಲ್ಲಿ ಹೇಳಿದ ಮಾತು ಹೀಗಿದೆ:- ಇವತ್ತಿನ ದಿವಸ ಈ ರಾಜ್ಯ ನೇಗಿಲ ಯೋಗಿಯ ಕೈಯಲ್ಲಿಲ್ಲ; ತಕ್ಕಡಿ ಹಿಡಿಯುವ ವ್ಯಾಪಾರಸ್ಥರ ಕೈಯಲ್ಲಿದೆ. ಇವರ ಉದರ ಪೋಷಣೆಯಾಗಬೇಕು ಇದು ನಮ್ಮ ರಾಜ್ಯದ ದುರ್ವೀಪಾಕ ಎಂದು ನುಡಿದಿದ್ದುದು, ದೇವರಾಜ ಅರಸು ಮಂತ್ರಿಮಂಡಲದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಚಿವರಾಗಿದ್ದಾಗ ದಲಿತ ವರ್ಗದ ವೈದ್ಯರೊಬ್ಬರಿಗೆ ಸ್ನಾತಕೋತ್ತರ ಶಿಕ್ಷಣ ಪಡೆಯುವಲ್ಲಿ ವಂಚನೆಯಾಗಿದ್ದನ್ನು ತಿಳಿದು ನ್ಯಾಯ ಒದಗಿಸುವಲ್ಲಿ ತಾಳಿದ ನಿಲುವು ನಿಜಕ್ಕೂ ಮಾನವೀಯ; ಸ್ಮರಣೀಯ.

ಸಿದ್ದವೀರಪ್ಪನವರು ರಾಜ್ಯಕ್ಕೆ, ದೇಶಕ್ಕೆ ಶ್ರಮಿಸಿದರೇ ವಿನಃ ಸ್ವಂತಕ್ಕೆ ಏನೂ ಮಾಡಿಕೊಳ್ಳಲಿಲ್ಲ. ತಮಗಿದ್ದ ಅನುಭವ ಸಂಪತ್ತು ಹಾಗೂ ಸಚಿವ ಹುದ್ದೆಯಿಂದ ಹಣ, ಆಸ್ತಿ ಮಾಡುವ ಅವಕಾಶವಿದ್ದರೂ ‘ಪಾಪದ ಹಣ ಬೇಕಿಲ್ಲ, ಇಂತಹ ಹಣದಿಂದ ಅಪಥ್ಯರೂ ಕೆಟ್ಟು ಹೋಗುತ್ತಾರೆ, ಸಮಾಜ ಕಂಟಕಪ್ರಾಯರಾಗುತ್ತಾರೆ’ ಎಂದು ಚೂಪಾಗಿ ಹೇಳಿ ‘ಒಂದು ಕಾಲದ ಅತ್ಯುಚ್ಛ ಜೀವ ಕಲ್ಪನೆ (The highest life conception of a time)  ಮತ್ತು ಜೀವನ ಗ್ರಹಿಕೆಯ ಅತ್ಯುಚ್ಛ ಮಟ್ಟ (The highest level of life comprehension)  ದ ತಿಳುವಳಿಕೆಯನ್ನು ಹೇಳಿ ದಿಗ್ಭ್ರಾಂತಗೊಳಿಸುತ್ತಿದ್ದರು.

ಜೀವನವೇ ಕಲೆಯಲ್ಲ, ಜೀವನ ಕಲೆಯ ಕಚ್ಛಾವಸ್ತುವಷ್ಟೆ. ಇದನ್ನು ಕೃತಿಯಲ್ಲಿ ಅರಗಿಸಿದಾಗ ಮಾತ್ರ ಕಲಾಕೃತಿ ನಿರ್ಮಾಣವಾಗುತ್ತದೆ ಎಂಬ ನುಡಿಯೊಂದಿಗೆ ತನ್ನ ಸಾಮಗ್ರಿಯನ್ನೆಲ್ಲಾ ವ್ಯವಸ್ಥಿತಗೊಳಿಸಿ ಸೃಜನ ಕಾರ್ಯವನ್ನು ಸಾಧಿಸುವ ರಾಜಕಾರಣಿಯ ಮೂಲರೂಪ ಅಂತಃಪ್ರಜ್ಞೆ (Primary Intution of form) ಯನ್ನು ಪರಿಶೀಲಿಸಬಲ್ಲ ಶಕ್ತಿ ಸರ್ವ ಸದಸ್ಯರ ಧ್ಯೇಯವಾಗಬೇಕೆಂದರು.

ರಾಜಕೀಯದ ನಿಡುದಾರಿಯಲ್ಲಿ ಸಮರ್ಪಣಾಭಾವದಿಂದ ನಿತ್ತರಿಸಿ ತನ್ನ ವರ್ಚಸ್ವಿ ವ್ಯಕ್ತಿತ್ವದಿಂದ ರೂಕ್ಷ ಸಮಾಜಕ್ಕೆ ಹದವನ್ನು ಹರಹವನ್ನು ನಡೆನುಡಿಗಳನ್ನು ನೀಡಿದ್ದ ಹೆಚ್. ಸಿದ್ದವೀರಪ್ಪನವರ 118ನೇ ಜನ್ಮ ದಿನಾಚರಣೆ ನೆನಸಿಗೆ ಸಮರ್ಥನೆ.


ರಾಜಕೀಯದ ಸಹಜ ವಿಷಕ್ಕೆ ನ್ಯಾಯ ನಿಷ್ಠೂರಿ ಪ್ರಾಜ್ಞರಾಗಿದ್ದ ಹೆಚ್.ಸಿದ್ದವೀರಪ್ಪ - Janathavani– ಪ್ರೊ|| ಬಾತಿ ಬಸವರಾಜ್, ಶೈಕ್ಷಣಿಕ ಸಲಹೆಗಾರರು,  ದವನ್ ಕಾಲೇಜು, ದಾವಣಗೆರೆ. ಮೊಬೈಲ್: 8884527130

error: Content is protected !!