ಮಾನ್ಯರೇ,
ನಗರದ ಪ್ರತಿಷ್ಠಿತ ರಸ್ತೆಗಳಲ್ಲಿ ಒಂದಾದ ಎ.ವಿ.ಕೆ. ಕಾಲೇಜು ರಸ್ತೆ ಯಲ್ಲಿ ಹೊಂಡ ಬಿದ್ದಿದ್ದು, ವಾಹನಗಳು ವೇಗವಾಗಿ ಬಂದಾಗ ಈ ಸಣ್ಣ ಹಳ್ಳವು ಗಮನಕ್ಕೆ ಬಾರದೇ ಅವಘಡ ಆಗಲು ಸ್ವಾಗತ ಮಾಡುವಂತಿದೆ. ದ್ವಿಚಕ್ರ ವಾಹನ ಸವಾರರುಗಳಿಗೆ ಈ ಸಮಸ್ಯೆಯು ಸವಾಲಾಗಿ ಎದುರಾ ಗುತ್ತದೆ.
ನಿತ್ಯ ಈ ರಸ್ತೆಯು ತುಂಬಾ ವಾಹನ ದಟ್ಟಣೆ ಮತ್ತು ಜನಸಂದಣಿಯನ್ನು ಹೆಚ್ಚಾಗಿ ಹೊಂದಿರುತ್ತದೆ. ಹೀಗೆ ಇದ್ದಾಗ್ಯೂ ಈ ಸಮಸ್ಯೆಯು ಮಹಾನಗರ ಪಾಲಿಕೆಯ ಕಣ್ಣಿಗೆ ಬೀಳದೇ ಇರುವುದು ಬೇಸರದ ಸಂಗತಿ. ಅನಾಹುತ ನಡೆಯುವ ಮುನ್ನವೇ ಈ ಸಮಸ್ಯೆಯನ್ನು ಆದಷ್ಟು ಶೀಘ್ರವಾಗಿ ಸರಿಪಡಿಸಿ, ಸಾರ್ವಜನಿಕರಿಗೆ ಉತ್ತಮ ವ್ಯವಸ್ಥೆ ಮಾಡಿಕೊಡಬೇಕಾಗಿ ನಗರದ ಸಾರ್ವಜನಿಕರ ಪರವಾಗಿ ವಿನಂತಿ ಆಗಿರುತ್ತದೆ.
– ವಾದಿರಾಜ ಭಟ್ ವೈ., ವಕೀಲರು, ದಾವಣಗೆರೆ.