ಡೆಂಗ್ಯೂ ನಿಯಂತ್ರಣ ಅರಿವು ಜನರಿಗಿರಲಿ

ಡೆಂಗ್ಯೂ ನಿಯಂತ್ರಣ ಅರಿವು ಜನರಿಗಿರಲಿ

ರಾಷ್ಟ್ರೀಯ ಡೆಂಗ್ಯೂ ನಿಯಂತ್ರಣ ಜಾಗೃತಿ ಜಾಥಾದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ

ದಾವಣಗೆರೆ, ಮೇ 17 – ಡೆಂಗ್ಯೂ ನಿಯಂತ್ರಣದ ಬಗ್ಗೆ ಜನರಿಗೆ ಜಾಗೃತಿ ಇದ್ದಾಗ ರೋಗವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ ತಿಳಿಸಿದರು.

ಅವರು ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ ಇವರ ಸಂಯುಕ್ತಾಶ್ರಯದಲ್ಲಿ  ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಡೆಂಗ್ಯೂ ನಿಯಂತ್ರಣ ಕುರಿತು ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಮಾತನಾಡಿದರು.

 ನಿಂತ ನೀರು ಸೊಳ್ಳೆಗಳ ತವರು, ಡೆಂಗಿ ಜ್ವರ ಈಡಿಸ್ ಎಂಬ ಸೊಳ್ಳೆ ಯಿಂದ ಹರಡುತ್ತದೆ, ನೀರಿನ ಸಂಗ್ರ ಹದ ಪರಿಕರಗಳನ್ನು ವಾರಕ್ಕೆ ಎರಡು ಬಾರಿ ಸ್ವಚ್ಚಗೊಳಿಸಿ, ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ, ನೀರಿನ ಪರಿಕರಗಳಲ್ಲಿನ ಬಾಲಹುಳುಗಳೇ ಸೊಳ್ಳೆ, ಇವುಗಳ ಉತ್ಪತ್ತಿಯನ್ನು ನಿಯಂ ತ್ರಣದಲ್ಲಿಟ್ಟು ಆರೋಗ್ಯ ಇಲಾಖೆಯೊಂ ದಿಗೆ ಕೈ ಜೋಡಿಸಿ ಡೆಂಗ್ಯೂ ಮಹಾ ಮಾರಿಯನ್ನು ಸೋಲಿಸಿ ಎಂದರು.

ಕಾರ್ಯಕ್ರಮದಲ್ಲಿ  ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಕೆ.ಎಚ್. ಗಂಗಾಧರ್, ದಾವಣಗೆರೆ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ದೇವರಾಜ್ ಪಟಾಗೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಅಧೀಕ್ಷಕರು ಡಾ. ಮಧು, ಡಾ. ಸುರೇಶ್ ಬಾರ್ಕಿ ಡಿಹೆಚ್‍ಓ, ಡಾ. ರೇಣುಕಾ ಆರಾಧ್ಯ ಆರ್‌.ಸಿ.ಎಚ್, ಡಾ. ರಾಘವನ್ ಡಿಎಸ್‍ಓ, ಡಾ. ರುದ್ರಸ್ವಾಮಿ ಎಫ್‍ಡಬ್ಲ್ಯೂಓ ಹಾಗೂ ಇತರರು ಭಾಗವಹಿಸಿದ್ದರು.

error: Content is protected !!