ಆರೈಕೆ ಆಸ್ಪತ್ರೆಯಲ್ಲಿ ದಾದಿಯರ ದಿನಾಚರಣೆ

ಆರೈಕೆ ಆಸ್ಪತ್ರೆಯಲ್ಲಿ ದಾದಿಯರ ದಿನಾಚರಣೆ

ದಾವಣಗೆರೆ, ಮೇ 16- ನಗರದ ಆರೈಕೆ ಸೂಪರ್  ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಂತರ ರಾಷ್ಟ್ರೀಯ ದಾದಿಯರ (ನರ್ಸ್) ದಿನಾಚರಣೆ ಆಚರಿಸಲಾಯಿತು.

`ನಮ್ಮ ನರ್ಸ್‌ಗಳು ನಮ್ಮ ಭವಿಷ್ಯ’ ಎಂಬ ಸಂದೇಶದಡಿ ಈ ಕಾರ್ಯಕ್ರಮ ಆಯೋಜಿಸ ಲಾಗಿತ್ತು. ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ. ಟಿ.ಜಿ. ರವಿಕುಮಾರ್ ಮಾತನಾಡಿ, ಅಂತರರಾಷ್ಟ್ರೀಯ ದಾದಿಯರ ದಿನದ ಪ್ರಾಮುಖ್ಯತೆಯನ್ನು ತಿಳಿಸಿದರು. ಈ ಸಮಯದಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ಅವರು ತಮ್ಮ ವೃತ್ತಿಯಲ್ಲಿ ಲೇಡಿ ವಿತ್ ಲ್ಯಾಂಪ್ ‘ ಎಂದು ಏಕೆ ಕರೆಯುತ್ತಾರೆ ಎಂದು ತಿಳಿಸಿಕೊಟ್ಟರು 

ವಿಶ್ವಯುದ್ಧದ ಸಂದರ್ಭದಲ್ಲಿ ಗಾಯಗೊಂಡಿದ್ದ ಸೈನಿಕರಿಗೆ ರಾತ್ರಿಯ ಸಮಯದಲ್ಲಿ ತಮ್ಮ ನರ್ಸಿಂಗ್ ಸೇವೆಯನ್ನು ನೀಡಿ ಆಧುನಿಕ ಪ್ರಪಂಚಕ್ಕೆ ತಮ್ಮ ಕೊಡುಗೆ ಯಾವ ರೀತಿ ಇರಬೇಕು ಎಂಬುದನ್ನು ತೋರಿಸಿಕೊಟ್ಟರು. ಯಾವುದೇ ಆಸ್ಪತ್ರೆ ಉತ್ತಮ ಸೇವೆಯನ್ನು ನೀಡಲು ನರ್ಸ್‌ಗಳ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು. 

ಈ ಸಮಯದಲ್ಲಿ ಆರೈಕೆ ಹಾಸ್ಪಿಟಲ್ ನರ್ಸಿಂಗ್ ಸೂಪರಿಂಟೆಂಡೆಂಟ್, ಶ್ರೀಮತಿ ರೂಪ ಎಚ್.ಕೆ. ಅವರನ್ನು ಜಗಳೂರು ಮಾಜಿ ಶಾಸಕ ಮತ್ತು ಆರೈಕೆ ಗ್ರೂಪ್ಸ್ ನ ಅಧ್ಯಕ್ಷ ಟಿ. ಗುರುಸಿದ್ದನಗೌಡ್ರು ಸನ್ಮಾನಿಸಿದರು. 

ಆಸ್ಪತ್ರೆಯ ಎಲ್ಲಾ ವೈದ್ಯರ ತಂಡ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

error: Content is protected !!