ದಾವಣಗೆರೆ ಶೇಖರಪ್ಪ ನಗರ `ಎ’ ಬ್ಲಾಕ್ ವಾಸಿ ದಿವಂಗತ ಕಲ್ಲೇದೇವರಪುರ ದೊಡ್ಡ ಅಜ್ಜಪ್ಪನವರ ಪತ್ನಿ ಶ್ರೀಮತಿ ದುಗ್ಗಮ್ಮ ಉಪ್ಪಾರ (78) ಅವರು ದಿನಾಂಕ 24.4.2024ರ ಬುಧವಾರ ಸಂಜೆ 6.58ಕ್ಕೆ ನಿಧನರಾದರು. ಉಪ್ಪಾರ ಸಮಾಜದ ಮುಖಂಡ ಕೆ.ಎ.ಪಾಪಣ್ಣ ಸೇರಿದಂತೆ 3 ಗಂಡು, 5 ಜನ ಹೆಣ್ಣುಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 25.4.2024ರ ಗುರುವಾರ ಮಧ್ಯಾಹ್ನ 2.30ಕ್ಕೆ ನಗರದ ಬೂದಾಳ್ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 29, 2024