ಹರಪನಹಳ್ಳಿ ತಾಲ್ಲೂಕು ಕಮ್ಮತ್ತಹಳ್ಳಿ ಗ್ರಾಮದ ವಾಸಿ ದಿ. ಎಂ. ಚನ್ನಪ್ಪನವರ ಧರ್ಮಪತ್ನಿ ಸಿ. ಪುಷ್ಪಾವತಿ ಇವರು, ದಿನಾಂಕ 14.03.2024ರ ಗುರುವಾರ ರಾತ್ರಿ 8.30 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 66 ವರ್ಷ ವಯಸ್ಸಾಗಿತ್ತು. ಓರ್ವ ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 15.03.2024ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಮೃತರ ಸ್ವಗ್ರಾಮವಾದ ಹರಪನಹಳ್ಳಿ ತಾಲ್ಲೂಕು ಕಮ್ಮತ್ತಹಳ್ಳಿ ಗ್ರಾಮದ ಮೃತರ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಸಿ. ಪುಷ್ಪಾವತಿ
