ದಾವಣಗೆರೆ, ಏ.18- ನಗರದಲ್ಲಿ ಗುರುವಾರ ಸಂಜೆ ಮಿಂಚು-ಗುಡುಗು ಸಹಿತ ಬೀಸಿದ ಗಾಳಿ, ಮಳೆಗೆ ನಗರದ ಜಯದೇವ ವೃತ್ತದ ಬಳಿಯ ಸಾಗರ್ ಬೆಣ್ಣೆ ದೋಸೆ ಹೋಟೆಲ್ ಬಳಿ ಮರ ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಒಂದು ಕಂಬ ರಸ್ತೆಗೆ ಬಿದ್ದರೆ, ಮತ್ತೊಂದು ಕಂಬ ದ್ವಿಚಕ್ರ ವಾಹನಗಳ ಮೇಲೆ ಬಿದ್ದಿದ್ದು, ವಾಹನಗಳಿಗೆ ಹಾನಿಯಾಗಿದೆ. ಕೆಲ ಹೊತ್ತು ರಸ್ತೆ ಸಂಚಾರ ಕಡಿತವಾಗಿತ್ತು.
ಸಂಜೆ 4 ಗಂಟೆ ವೇಳೆಗೆ ದಿಢೀರ್ ಗಾಳಿ ಬೀಸಲಾರಂಭಿಸಿತು. ನಂತರ ಮಿಂಚು-ಗುಡುಗಿನ ಆರ್ಭಟ ಹೆಚ್ಚಾಯಿತಾದರೂ, ಮಳೆ ಸುರಿದದ್ದು ಮಾತ್ರ ಕಡಿಮೆಯೇ. ಆದಾಗ್ಯೂ ತಾಪಕ್ಕೆ ಕಾದ ಬಾಣಲಿಯಂತಾಗಿದ್ದ ಧರೆ ತುಸು ತಂಪಾಯಿತು. ಆದರೆ ಹಳೆ ದಾವಣಗೆರೆ ಭಾಗದಲ್ಲಿ ಮಳೆಯಾಗಿಲ್ಲ.