ದಾವಣಗೆರೆ ಎಸ್. ನಿಜಲಿಂಗಪ್ಪ ಬಡಾವಣೆ, ಲಕ್ಷ್ಮಿ ಫ್ಲೋರ್ ಮಿಲ್ ಹತ್ತಿರ, ನ್ಯಾಷನಲ್ ಕಾನ್ವೆಂಟ್ ಶಾಲೆಯ ಹಿಂಭಾಗ, ಮನೆ ನಂ. 98, `ಹೊಂಗಿರಣ’ ವಾಸಿ, ಜಿಲ್ಲಾ ನಿವೃತ್ತ ಶಸ್ತ್ರಚಿಕಿತ್ಸಕರೂ ಮತ್ತು ಚಿಗಟೇರಿ ಜಿಲ್ಲಾಸ್ಪತ್ರೆಯ ನಿವೃತ್ತ ಅಧೀಕ್ಷಕರೂ ಆಗಿದ್ದ ಡಾ. ಟಿ. ಪರಶುರಾಮಪ್ಪ ಅವರು ದಿನಾಂಕ 24-02-2024ರ ಶನಿವಾರ ರಾತ್ರಿ 11.36ಕ್ಕೆ ಹೃದಯಾಘಾತದಿಂದ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಅಳಿಯಂದಿರು, ಸೊಸೆ, ಮೊಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 25-02-2024ರ ಭಾನುವಾರ ಸಂಜೆ 4 ಗಂಟೆಗೆ ನಗರದ ಪಿ.ಬಿ. ರಸ್ತೆಯಲ್ಲಿರುವ ವೈಕುಂಠ ಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಡಾ. ಟಿ. ಪರಶುರಾಮಪ್ಪ
