ದಾವಣಗೆರೆ ಸಿಟಿ, ಪಿ.ಜೆ. ಬಡಾವಣೆ, 8 ನೇ ಮೇನ್, 5 ನೇ ಕ್ರಾಸ್, ಸೇಂಟ್ ಪಾಲ್ಸ್ ಕಾನ್ವೆಂಟ್ ಹತ್ತಿರದ ನಿವಾಸಿ ವಿದ್ಯಾ ಪೈ (66)ಇವರು ದಿನಾಂಕ 12.04.2024ರ ಶುಕ್ರವಾರ ರಾತ್ರಿ 8 ಗಂಟೆಗೆ ನಿಧನರಾದರು. ತರಳಬಾಳು ಶಾಲೆಯಲ್ಲಿ ನರ್ಸರಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಮೃತರು, ಅಪಾರ ಬಂಧುಗಳನ್ನು ಅಗಲಿರುತ್ತಾರೆ. ಮೃತರ ಅಂತ್ಯಕ್ರಿಯೆ ದಿನಾಂಕ 13.04.2024ರ ಶನಿವಾರ ಬೆಳಿಗ್ಗೆ 10 ಗಂಟೆಗೆ ದಾವಣಗೆರೆ ಪಿ.ಬಿ. ರಸ್ತೆಯಲ್ಲಿನ ವೈಕುಂಠ ಶಾಂತಿಧಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ವಿದ್ಯಾ ಪೈ
