ದಾವಣಗೆರೆ, ಏ.11- ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಬೆಂಬಲಿಸಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಬಿ.ಎಂ.ವಾಗೀಶ್‍ಸ್ವಾಮಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಇಂದು ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ನಿವಾಸದಲ್ಲಿ ಮಲೇಬೆನ್ನೂರಿನ ಪುರಸಭೆಯ ನಾಲ್ವರು ಸದಸ್ಯರು ಸೇರಿದಂತೆ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕಾಂಗ್ರೆಸ್ ಪಕ್ಷದ ಜನಪರ ಕಾರ್ಯ ಕ್ರಮಗಳಿಗೆ ಮನಸೋತು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಪಕ್ಷವನ್ನು ಸೇರ್ಪಡೆಗೊಂಡಿದ್ದೇನೆ ಎಂದರು.
ಪಕ್ಷದ ಸಿದ್ಧಾಂತ ನಂಬಿ ಪಕ್ಷವನ್ನು ಬೇಷರತ್ತಾಗಿ ಬೆಂಬಲಿಸಿರುವ ವಾಗೀಶ್ ಸ್ವಾಮಿ ಮತ್ತವರ ಅಪಾರ ಬೆಂಬಲಿಗರನ್ನು ಆತ್ಮೀಯವಾಗಿ ಸ್ವಾಗತಿಸುವುದಾಗಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.
ಮಲೇಬೆನ್ನೂರಿನ ಪುರಸಭೆಯ ಸದಸ್ಯ ರಾದ ಗೌಡ್ರು ಮಂಜುನಾಥ್, ಅಕ್ಕಮ್ಮ ಬಿ.ಸುರೇಶ್, ಹೆಚ್.ಕೆ.ಸುಧಾ ಪಿ.ಆರ್.ರಾಜು ಮತ್ತು ಮಂಜುನಾಥ್ ಬಿ ಹಾಗೂ ಮುಖಂಡರುಗಳಾದ ಮಾಜಿ ಸದಸ್ಯ ಸುರೇಶ್ ಬಿ., ಚಂದ್ರಪ್ಪ ಬಿ., ಗೋವಿನಹಾಳು ದಯಾನಂದ್, ರಾಜಪ್ಪ ಕೆ.ಜಿ., ಕಡೇಮನಿ ದೇವೇಂದ್ರಪ್ಪ ಹೊಳೆಸಿರಿಗೆರೆ, ಮಂಜುನಾಥ್ ಸಿರಿಗೆರೆ, ಮಲ್ಲೇಶಪ್ಪ ಮಾಳಿಗಿ, ಪ್ರಕಾಶ್, ಕಡ್ಲೆಗೊಂದಿ ಕೇಶವಮೂರ್ತಿ, ಓಬಳೇಶಪ್ಪ ಲೋಕಿಕೆರೆ, ಮಂಜಣ್ಣ ಕುರಿ, ಆನಂದಪ್ಪ ಕಲ್ಕೆರೆ ಕ್ಯಾಂಪ್, ನಾಗಣ್ಣ ಸುಲ್ತಾನಿಪುರ, ಎನ್.ಬಿ.ಗಂಗಾಧರಪ್ಪ ವಕೀಲರು ಹೊಳೆ ಸಿರಿಗೆರೆ, ಪಂಚಮಸಾಲಿ ಸಮಾಜದ ಅಶೋಕಣ್ಣ, ವಿಜಯಕುಮಾರ್ ಹದಡಿ, ಎಲ್.ಆರ್.ಕರಿಯಣ್ಣ ಸುಲ್ತಾನಿಪುರ, ನಿಂಗಪ್ಪ ಮೆಣಸಿನಕಾಯಿ, ಶ್ರೀನಿವಾಸ ಭಜರಂಗಿ, ಆಕಾಶ್, ಬಿ. ಮಹಾರುದ್ರಪ್ಪ ಸೇರಿದಂತೆ ನೂರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ರಾಮಪ್ಪ, ಹರಿಹರ ಕಾಂಗ್ರೆಸ್ ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರ್, ಯೂನಿಯನ್ ಬ್ಯಾಂಕ್‍ನ ಸಿರಿಗೆರೆ ರಾಜಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬೆಳ್ಳೂಡಿ ಬಸವರಾಜ್, ಮಂಜುನಾಥ ಪಟೇಲ್, ಆನಂದಪ್ಪ, ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಪ್ರಕಾಶ್ ಪಾಟೀಲ್, ಮಹಾನಗರ ಪಾಲಿಕೆ ಸದಸ್ಯ ಎ.ನಾಗರಾಜ್, ಹುಲ್ಮನಿ ಗಣೇಶ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.