ದಾವಣಗೆರೆಯ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ನ ಆರ್ಥೊಡಾಂಟಿಕ್ಸ್ ವಿಭಾಗದ ನಿವೃತ್ತ ಮುಖ್ಯಸ್ಥರೂ, ಹಿರಿಯ ದಂತ ವೈದ್ಯರೂ ಆದ ಡಾ|| ಜಿ. ಶಿವಪ್ರಕಾಶ್ ಅವರು (ನಿವೃತ್ತ ಕಾರ್ಯಪಾಲಕ ಅಭಿಯಂತರರಾಗಿದ್ದ ದಿ|| ಶ್ರೀ ಜಯದೇವಪ್ಪ ಮತ್ತು ದಿ|| ಶ್ರೀಮತಿ ಚನ್ನಮ್ಮ ದಂಪತಿ ಪುತ್ರ) ದಿನಾಂಕ 20-02-2024ರ ಮಂಗಳವಾರ ಸಂಜೆ 6.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 59 ವರ್ಷ ವಯಸ್ಸಾಗಿತ್ತು. ಡಾ|| ಜಿ. ಶಿವಪ್ರಕಾಶ್, ಮಕ್ಕಳ ತಜ್ಞರಾದ ಡಾ|| ಜಿ. ಗುರುಪ್ರಸಾದ್ ಅವರ ಸಹೋದರ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಸೊಸೆ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಡಾ|| ಶಿವಪ್ರಕಾಶ್ ಅವರ ಪಾರ್ಥಿವ ಶರೀರವನ್ನು ದಿನಾಂಕ 21-2-2024ರ ಬುಧವಾರ ಮಧ್ಯಾಹ್ನ 12 ರವರೆಗೆ ದಾವಣಗೆರೆಯ ಎಂ.ಸಿ.ಸಿ. `ಬಿ’ ಬ್ಲಾಕ್, ಕುವೆಂಪು ನಗರ, ಮಾಮಾಸ್ ಜಾಯಿಂಟ್ ರಸ್ತೆಯಲ್ಲಿರುವ `ವೇದಾ ಡೆಂಟಲ್ ಕ್ಲಿನಿಕ್’ನಲ್ಲಿ ಇರಿಸಲಾಗುವುದು. ನಂತರ ಮಧ್ಯಾಹ್ನ 2 ಗಂಟೆಗೆ ಬೆಳವನೂರು 6ನೇ ಮೈಲಿಕಲ್ ಹತ್ತಿರವಿರುವ `ಜಯದೇವ ಫಾರ್ಮ್’ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಡಾ|| ಜಿ. ಶಿವಪ್ರಕಾಶ್
