ದಾವಣಗೆರೆ ಸಿದ್ದವೀರಪ್ಪ ಬಡಾವಣೆ ವಾಸಿ ಗುಡಾಳು ಗೌಡ್ರ ದಿ|| ದಾನಪ್ಪನವರ ಪುತ್ರ ಗೌಡ್ರ ಗಂಗಾಧರಪ್ಪನವರು (ನಿವೃತ್ತ ಇಂಜಿನಿಯರ್) ಇವರು ದಿನಾಂಕ : 07.02.2024 ರ ರಾತ್ರಿ 11.35ಕ್ಕೆ ನಿಧನರಾಗಿರುತ್ತಾರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 79 ವರ್ಷ ವಯಸ್ಸಾಗಿತ್ತು. ಇವರು ಧರ್ಮಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು, ಅಳಿಯಂದಿರು, ಮೊಮ್ಮಕ್ಕಳು, ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಪಾರ್ಥಿವ ಶರೀರವನ್ನು ದಾವಣಗೆರೆ, ಸಿದ್ದವೀರಪ್ಪ ಬಡಾವಣೆಯ ಮೃತರ ಸ್ವಗೃಹದಲ್ಲಿ ಬೆಳಿಗ್ಗೆ 11.30 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಇಡಲಾಗುವುದು. ನಂತರ ಅಂತ್ಯಕ್ರಿಯೆಯನ್ನು ದಿನಾಂಕ : 9.2.2024ರ ಮಧ್ಯಾಹ್ನ 3.30 ಗಂಟೆಗೆ ದಾವಣಗೆರೆ ತಾಲ್ಲೂಕು ಗುಡಾಳು ಗ್ರಾಮದ ಸ್ವಂತ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 23, 2024