ಬ್ಯಾಂಕಿನ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಉಪಾಧ್ಯಕ್ಷ ಎಸ್.ಎಸ್. ಮಲ್ಲಿಕಾರ್ಜುನ್ ಸಂತಸ
ದಾವಣಗೆರೆ,ಏ.3- ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕು ಗಳಲ್ಲೊಂದಾದ ನಗರದ ಬಾಪೂಜಿ ಕೋ-ಆಪರೇ ಟಿವ್ ಬ್ಯಾಂಕ್ 2023-24 ನೇ ಸಾಲಿನ ಹಣಕಾಸು ವರ್ಷದಲ್ಲಿ ಒಟ್ಟಾರೆ 16.09 ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರು ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ, ಉಪಾಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ನಿರ್ದೇಶಕ ಮಂಡಲಿಯ ಸದಸ್ಯರುಗಳು ಸಂತೋಷ ವ್ಯಕ್ತಪಡಿಸಿದ್ದಾರೆ.
ಆದಾಯ ತೆರಿಗೆ ಮತ್ತು ಇತರೆ ಅವಕಾಶ ಗಳನ್ನು ಕಲ್ಪಿಸಿದ ನಂತರ ರೂ. 9.74 ಕೋಟಿ ನಿವ್ವಳ ಲಾಭ ಆಗಿದ್ದು, ಕಳೆದ ಸಾಲಿಗಿಂತ ಈ ವರ್ಷ ರೂ. 1.65 ಕೋಟಿ ಹೆಚ್ಚಿನ ಲಾಭ ಗಳಿಸಿದೆ ಎಂದು ಅವರು ತಿಳಿಸಿದ್ದಾರೆ.
ಬ್ಯಾಂಕು 10785 ಸದ ಸ್ಯರುಗಳನ್ನು ಹೊಂದಿದ್ದು ಷೇರು ಬಂಡವಾಳ ರೂ. 20.69 ಕೋಟಿ, ಆಪದ್ಧನ ಮತ್ತು ಇತರೆ ನಿಧಿಗಳು ರೂ. 135.20 ಕೋಟಿ ಗಳು, ರೂ. 443.03 ಕೋಟಿ ವಿವಿಧ ಲಾಭದಾಯಕ ಭದ್ರತೆಗಳಲ್ಲಿ ತೊಡಗಣೆ ಮಾಡಿದೆ, ದುಡಿಯುವ ಬಂಡವಾಳ ರೂ. 1012.33 ಕೋಟಿ, ಠೇವಣಿ ರೂ. 845.75 ಕೋಟಿ ಸಂಗ್ರಹವಾಗಿದ್ದು, ರೂ. 495.89 ಕೋಟಿ ಸಾಲ ಸೌಲಭ್ಯವನ್ನು, ಭಾರ ತೀಯ ರಿಜರ್ವ್ ಬ್ಯಾಂಕಿನ ಆದೇಶದಂತೆ ಆಧ್ಯತಾ ರಂಗ ಮತ್ತು ದುರ್ಬಲ ವರ್ಗದವರನ್ನೊಳಗೊಂಡು ಸದಸ್ಯರಿಗೆ ಕಲ್ಪಿಸಲಾಗಿದೆ. ಬ್ಯಾಂಕಿನ ಠೇವಣಿದಾರರ ಸುರಕ್ಷತೆಯ ದೃಷ್ಟಿಯಿಂದ ರೂಪಾಯಿ 5 ಲಕ್ಷದವರೆಗಿನ ಠೇವಣಿಗಳಿಗೆ ಡಿಪಾಜಿಟ್ ಇನ್ಸೂರೆನ್ಸ್ ಸ್ಕಿಮ್ ಚಾಲ್ತಿ ಯಲ್ಲಿರುತ್ತದೆ.
ಬ್ಯಾಂಕಿನ ಷೇರುದಾರರಿಗೆ 2016-17ನೇ ಸಾಲಿನಿಂದ ಸತತವಾಗಿ ಶೇ. 18 ಡಿವಿಡೆಂಡ್ ನೀಡುತ್ತಾ ಬಂದಿದ್ದು, ಈ ವರ್ಷವೂ ಸಹ 18% ಡಿವಿಡೆಂಡ್ ನೀಡಲು ಉದ್ದೇಶಿಸಲಾಗಿದೆ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಯಶಸ್ವಿನಿ ನಗರ ಸಹಕಾರಿ ಆರೋಗ್ಯ ರಕ್ಷಣಾ ಯೋಜನೆಯನ್ನು ಕೂಡ ಬ್ಯಾಂಕು ಅಳವಡಿಸಿಕೊಂಡಿದೆ. ಬ್ಯಾಂಕಿನ ಆಡಳಿತ ಮಂಡಲಿಯ ಸತತ ಪ್ರಯತ್ನದಿಂದಾಗಿ ಬ್ಯಾಂಕಿನ ಕಾರ್ಯಕ್ಷೇತ್ರ ವ್ಯಾಪ್ತಿಯನ್ನು ಕರ್ನಾಟಕ ರಾಜ್ಯದಾದ್ಯಂತ ವಿಸ್ತರಿಸಲು ಸಹಕಾರ ಇಲಾಖೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿರುತ್ತದೆ.
ಬ್ಯಾಂಕಿನ ಈ ಸಾಧನೆಗೆ ಎಲ್ಲಾ ಸದಸ್ಯರು, ಗ್ರಾಹಕರು, ಆಡಳಿತ ಮಂಡಲಿ, ರಿಜರ್ವ್ ಬ್ಯಾಂಕ್ ಮತ್ತು ಸಹಕಾರಿ ಸಂಘಗಳ ಇಲಾಖೆ ಮತ್ತು ರಾಜ್ಯ ಸಹಕಾರಿ ಮಹಾಮಂಡಳ ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರ ಸಹಕಾರವೇ ಮುಖ್ಯ ಕಾರಣವಾಗಿದೆ ಎಂದು ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕ ಮಂಡಲಿ ಸದಸ್ಯರುಗಳು ಹರ್ಷ ವ್ಯಕ್ತಪಡಿಸಿದ್ದಾರೆಂದು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಂ. ಬಸವರಾಜ್ ವಿವರಿಸಿದ್ದಾರೆ.