ದಾವಣಗೆರೆ, ಮಾ.ಏ. 3- ಹರಿಹರ ತುಂಗಭದ್ರಾ ನದಿಯಲ್ಲಿನ ನೀರು ಹರಿಹರದಿಂದ ಮುಂದಕ್ಕೆ ಸಾಗಿದ್ದು ನದಿಯಲ್ಲಿ ಎಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ ಎಂದು ಹರಿಹರ ಸಮೀಪದ ಜಾಕ್‍ವೆಲ್‍ಗೆ ಬುಧವಾರ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ನೀರಾವರಿ ನಿಗಮದಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾರ್ಚ್ 29 ರಿಂದ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ಸ್‍ನಂತೆ ಭದ್ರಾ ನದಿಗೆ ನೀರು ಬಿಡಲಾಗುತ್ತಿದೆ. ಇದನ್ನು ಏಪ್ರಿಲ್ 5 ರ ವರೆಗೆ 3 ಸಾವಿರದಂತೆ ಮತ್ತು ಏ.6 ರ ಮಧ್ಯರಾತ್ರಿ ವರೆಗೆ 2200 ಕ್ಯೂಸೆಕ್ಸ್ ನೀರನ್ನು ಬಿಡಲಾಗುತ್ತಿದೆ.