ಹರಿಹರ, ಮಾ.18- ನಾಡಿನ ಜನತೆಯಲ್ಲಿ ಕನ್ನಡದ ಕಿಚ್ಚು ಹಾಗೂ ಅಭಿಮಾನ ಹೆಚ್ಚಾದರೆ ಕನ್ನಡದ ಹಿರಿಮೆ ಕೂಡ ಹೆಚ್ಚಾಗುತ್ತದೆ ಎಂದು ತಹಶೀಲ್ದಾರ್ ಗುರುಬಸವರಾಜ್ ಹೇಳಿದರು.
ನಗರದ ಸಿದ್ದೇಶ್ವರ್ ಪ್ಯಾಲೇಸ್ ಸಭಾಂಗ ಣದಲ್ಲಿ ಇಂದು ನಡೆದ 13 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರಧ್ವಜಾರೋ ಹಣ ನೆರವೇರಿಸಿ ಅವರು ಮಾತನಾಡಿದರು.
ಬಾಲ್ಯದಲ್ಲಿ ಮಕ್ಕಳಿಗೆ ಮಾತೃಭಾಷೆ ಬಗ್ಗೆ ಅಭಿಮಾನ ಮೂಡಿಸಿದರೆ, ಕನ್ನಡ ಭಾಷೆಯ ಬಗ್ಗೆ ಅಭಿಮಾನ ಹುಟ್ಟುವುದಕ್ಕೆ ಸಹಕಾರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕನ್ನಡದ ಬಗ್ಗೆ ಅಭಿಮಾನ ಕಡಿಮೆಯಾಗಿದ್ದು, ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ ಎಂದು ಹೇಳಿದರು.
ಪೌರಾಯುಕ್ತ ಐಗೂರು ಬಸವರಾಜ್ ಮಾತನಾಡಿ, ಹಲವಾರು ವರ್ಷಗಳಿಂದ ಗ್ರಾಮ ಮಟ್ಟದಿಂದ ಹಿಡಿದು ವಿಶ್ವ ಮಟ್ಟದ ವರೆಗೆ ಕನ್ನಡ ಸಮ್ಮೇಳನಗಳು ನಡೆಯುತ್ತಿರುವು ದರಿಂದ ಕನ್ನಡವು ಉನ್ನತ ಮಟ್ಟದವರೆಗೆ ಬೆಳೆಯುವುದಕ್ಕೆ ದಾರಿಯಾಗಿ, ಅಂತರ್ಜಾಲ ದಲ್ಲಿ ಸಾಹಿತ್ಯದ ಕೊರತೆ ಇಲ್ಲದಂತೆ ಆಗಿದೆ.
ಆ ನಿಟ್ಟಿನಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಕಸಾಪ ಸದಸ್ಯರು ಎರಡು ದಿನಗಳ ಕಾಲ ಸಮ್ಮೇಳನ ಆಯೋಜಿಸುವುದರೊಂದಿಗೆ ಕನ್ನಡವನ್ನು ಹೆಚ್ಚಿನ ಪ್ರಮಾಣದಲ್ಲಿ ಉಳಿಸುವ ಮತ್ತು ಬೆಳಸುವಂತಹ ಕಾರ್ಯವನ್ನು ಮಾಡಿ ಯಶಸ್ವಿಗೋಳಿಸಲು ಶ್ರಮಿಸಿದ್ದು ಶ್ಲ್ಯಾಘನೀಯ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಸಿ.ವಿ. ಪಾಟೀಲ್, ದಾವಣಗೆರೆ ಶಿಕ್ಷಣ ಇಲಾಖೆಯ ಪರಿವೀಕ್ಷಕರಾದ ಎನ್.ಪಿ. ಮಂಜುಳಾ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ದಿಳ್ಳೆಪ್ಪ, ರೇವಣಸಿದ್ದಪ್ಪ, ರಾಘವೇಂದ್ರ ನಾಯರಿ, ಸಿ.ಜಿ. ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ್, ಎಂ. ಚಿದಾನಂದ ಕಂಚಿಕೇರಿ, ಬಿ.ಬಿ. ರೇವಣ್ಣನಾಯ್ಕ್, ರಿಯಾಜ್ ಆಹ್ಮದ್, ವಿ.ಬಿ. ಕೊಟ್ರೇಶ್, ಸದಾನಂದ ಕುಂಬಳೂರು, ಪಿ. ಪ್ರಕಾಶ್, ವೀರೇಶ್ ಪ್ರಸಾದ್, ಗಣಪತಿ ಮಾಳಂಜೆ, ಗೀತಾ ಕೊಂಡಜ್ಜಿ, ಹೆಚ್, ಹಾಲಪ್ಪ, ಕೆ.ಆರ್. ಮಂಜುನಾಥ್, ಕರಿಬಸಪ್ಪ ಕುಪ್ಪೇಲೂರು, ಡಿ.ಎನ್. ಶಿವಮ್ಮ, ಪ್ರಕಾಶ್, ಜೆ.ಎಂ. ಗುರುಬಸವರಾಜ್, ಮಲ್ಲಿಕಾರ್ಜುನ್, ಜಿ.ಎಸ್. ನಾಗರಾಜ್, ವಿಜಯಕುಮಾರ್ ಓಲೆಕರ್, ಸಲಾಂಸಾಬ್, ಶಾಂತಕುಮಾರಿ, ಸೀತಾ ನಾರಾಯಣ, ಸಿದ್ದಮ್ಮ, ಸುಮಂಗಳ ಇತರರು ಹಾಜರಿದ್ದರು.