ಸಂಭ್ರಮವನ್ನು ಕಣ್ತುಂಬಿಕೊಂಡ ಅಪಾರ ಸಂಖ್ಯೆಯ ಭಕ್ತರು
ದಾವಣಗೆರೆ, ಮಾ. 17- ತಿರುಪತಿ ತಿಮ್ಮಪ್ಪನ ದೇಗುಲದ ವೈಭವ ಇಂದು ದೇವನಗರಿ ಯಲ್ಲೂ ಅನವಾರಣಗೊಂಡಿತ್ತು. ಸುಂದರ ವೇದಿಕೆಯಲ್ಲಿ ಶ್ರೀನಿವಾಸ ಕಲ್ಯಾಣ ಸಂಭ್ರಮ ಕಂಡು ಬಂದಿದ್ದು ವಿಶೇಷವೇ ಸರಿ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆ ಯಲ್ಲಿ ಭಕ್ತರು ಆಗಮಿಸಿದ್ದರು.
ಕಾರ್ಯಕ್ರಮ ಆಯೋಜನೆ ಗೊಂಡಿದ್ದ ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಸಭಾಂ ಗಣ ಕಿಕ್ಕಿರಿದು ತುಂಬಿತ್ತು. ಒಳಗೆ ಕಾಲಿಡಲೂ ಜಾಗವಿಲ್ಲದಂತೆ ಕೆಲವರು ಹೊರಗಡೆ ಬಾಗಿಲ ಬಳಿ ನಿಂತು ವೀಕ್ಷಣೆ ಮಾಡುತ್ತಿದ್ದರು. ಎತ್ತ ನೋಡಿದರತ್ತ ಜನವೋ ಜನ.
ವಿಘ್ನೇಶನ ಪೂಜೆಯೊಂದಿಗೆ ಕಲ್ಯಾಣೋತ್ಸವಕ್ಕೆ ಚಾಲನೆ ದೊರೆ ಯಿತು. ಸ್ವಾಮಿಗೆ ಮಂಗಳ ಸ್ನಾನ ಮಾಡಿಸಿ ಮಂಗಳಾರತಿ ಬೆಳಗ ಲಾಯಿತು. ಅಭಿಷೇಕ, ಪುಣ್ಯಾಹ ವಾಚನ, ಒರಳು ಪೂಜೆ, ಬಳಿ ಕೊಡಿಸುವ ಶಾಸ್ತ್ರ, ಮಾಂಗಲ್ಯ ಧಾರಣೆ ಎಲ್ಲವೂ ಶಾಸ್ತ್ರೋಕ್ತವಾಗಿ ನೆರವೇರಿದವು.
ಸಭಾಂಗಣದಲ್ಲಿ ಗೋವಿಂದ ನಾಮ ಸ್ಮರಣೆ, ಹರೇ ಶ್ರೀನಿವಾಸ, ಗುರು ರಾಘವೇಂದ್ರ, ಹರೇ ರಾಮ ಹರೇ ರಾಮ ಎಂದು ಭಗವಂತನಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
ಕೌತಾಳಂ ಶ್ರೀ ಗುರು ಜಗನ್ನಾಥ ಸೇವಾ ಸಮಿತಿಯವರು ಕಲ್ಯಾಣೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಪಲಿಮಾರು ಶ್ರೀಗಳ ಉಪಸ್ಥಿತಿಯಲ್ಲಿ ಎಲ್ಲವೂ ಸಂಗವಾಗಿ ನಡೆಯಿತು. ಕೆ. ಅಪ್ಪಣ್ನಾಚಾರ್ಯ, ಸದಾನಂದ ಶಾಸ್ತ್ರಿಗಳು, ಸಂಪನ್ನ ಮುತಾಲಿಕ್, ಕಂಪ್ಲಿ ಗುರುರಾಜಾಚಾರ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.