ಸಿ.ಜಿ. ಆಸ್ಪತ್ರೆಯಲ್ಲಿ ಪ್ರಯೋಗಾಲಯ ಉದ್ಘಾಟನೆ

ಸಿ.ಜಿ. ಆಸ್ಪತ್ರೆಯಲ್ಲಿ ಪ್ರಯೋಗಾಲಯ ಉದ್ಘಾಟನೆ

ದಾವಣಗೆರೆ, ಫೆ. 25, ಜಿಲ್ಲಾ ಆಸ್ಪತ್ರೆ ಚಿಗಟೇರಿ ಆವರಣದಲ್ಲಿ ಬಹು ಉಪಯೋಗಿ ಪ್ರಯೋಗಾಲಯ ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚ್ಯು ವಲ್ ಮೂಲಕ  ಭಾನುವಾರ ಉದ್ಘಾಟಿಸಿದರು.

ರಕ್ತ ಪರೀಕ್ಷೆಗಳು, ಎಚ್.ಐ.ವಿ. ಏಡ್ಸ್, ಮೈಕ್ರೋ ಬಯಾಲಜಿ ಪರೀಕ್ಷೆ ಹಾಗೂ ಇತರೆ ಪರೀಕ್ಷೆಗಳನ್ನು ಒಂದೇ ಸೂರಿನಡಿ ಮಾಡುವ ಪ್ರಯೋಗಾಲಯ ಇದಾಗಿದೆ. 

ರಾಷ್ಟ್ರೀಯ ಆರೋಗ್ಯ ಅಭಿಯಾನ ಇವರ ವತಿಯಿಂದ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಸಮಗ್ರ ಸಾರ್ವಜನಿಕರ ಆರೋಗ್ಯ ಪ್ರಯೋಗಾ ಲಯದ ನಿರ್ಮಾಣ ಮಾಡಲಾಗಿದೆ. 

ಜಿಲ್ಲಾ ಶಸ್ತ್ರ  ಚಿಕಿತ್ಸಕ ಡಾ. ನಾಗೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ, ಪಾಲಿಕೆ ಸದಸ್ಯ ಪ್ರಸನ್ನಕುಮಾರ್, ನಿವಾಸಿ ವೈದ್ಯಾಧಿಕಾರಿ ಡಾ. ಎಸ್. ನಾಗವೇಣಿ, ಕೇಂದ್ರ ವೀಕ್ಷಕ ಡಾ.ಸೋಮಶೇಖರ್ ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಡಾ. ಗಿರೀಶ್ ಸ್ವಾಗತಿಸಿದರು.  ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ್ ಬಾರ್ಕಿ ವಂದಿಸಿದರು.

error: Content is protected !!