ದಾವಣಗೆರೆ,ಫೆ.20- ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲೊಂದಾದ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿ.ಸಿ. ಉಮಾಪತಿ ಮತ್ತು ಕೋಗುಂಡಿ ಬಕ್ಕೇಶಪ್ಪ ನೇತೃತ್ವದ ಗುಂಪಿಗೆ ಭರ್ಜರಿ ಜಯ ಲಭಿಸಿದೆ.
ಬಿ.ಸಿ. ಉಮಾಪತಿ ಹಾಗೂ ಕೋಗುಂಡಿ ಬಕ್ಕೇಶಪ್ಪ ಅವರಲ್ಲದೇ, ಅವರ ಗುಂಪಿನಿಂದ ಸ್ಪರ್ಧಿಸಿದ್ದ ಎಲ್ಲಾ 15 ಜನರೂ ಜಯಶೀಲರಾಗಿದ್ದಾರೆ. 15 ಜನರಲ್ಲಿ 13 ಜನರು ಮತ್ತೊಂದು ಅವಧಿಗೆ ಪುನರಾಯ್ಕೆಯಾಗಿದ್ದಾರೆ. ಉಳಿದಿಬ್ಬರು ಹೊಸಬರಾಗಿದ್ದಾರೆ.
ಆಡಳಿತ ಮಂಡಳಿಯ ಒಟ್ಟು 15 ಸ್ಥಾನಗಳಿಗೆ ಆಯ್ಕೆ ಬಯಸಿ 23 ಜನರು ಸ್ಪರ್ಧೆ ಮಾಡಿದ್ದರು. ಇವರಲ್ಲಿ ಉಮಾಪತಿ – ಬಕ್ಕೇಶಪ್ಪ ಗುಂಪಿನ ಐವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 18 ಜನರಲ್ಲಿ ಉಮಾಪತಿ – ಬಕ್ಕೇಶಪ್ಪ ಗುಂಪಿನ ಎಲ್ಲಾ 10 ಜನರೂ ಅತ್ಯಧಿಕ ಮತಗಳನ್ನು ಗಳಿಸಿ ಆಯ್ಕೆಯಾಗಿದ್ದಾರೆ. ಉಳಿದಂತೆ, ಪ್ರತ್ಯೇಕವಾಗಿ ಸ್ಪರ್ಧಿಸಿದ್ದ 8 ಜನರು ಪರಾಭವಗೊಂಡಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಉಮಾಪತಿ – ಕೋಗುಂಡಿ ಬಕ್ಕೇಶಪ್ಪ ಗುಂಪಿನ ಬಿ.ಸಿ. ಉಮಾಪತಿ (3952), ಅಂದನೂರು ಮುಪ್ಪಣ್ಣ (3534), ದೇವರಮನೆ ಶಿವಕುಮಾರ್ (3427), ಅಜ್ಜಂಪುರ ಶೆಟ್ರು ವಿಜಯಕುಮಾರ್ (3388), ಕೋಗುಂಡಿ ಬಕ್ಕೇಶಪ್ಪ (3322), ಟಿ.ಎಸ್.ಜಯರುದ್ರೇಶ್ (3233), ಕಂಚಿಕೇರಿ ಮಹೇಶ್ (3039), ಹೆಚ್.ಎಂ.ರುದ್ರಮುನಿಸ್ವಾಮಿ (2866), ಪಲ್ಲಾಗಟ್ಟೆ ಶಿವಾನಂದಪ್ಪ (2650), ಪ್ರವರ್ಗ `ಬಿ’ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಸೋಗಿ ಮುರುಗೇಶ್ (1995) ಅತ್ಯಧಿಕ ಮತಗಳನ್ನು ಗಳಿಸಿ ಚುನಾಯಿತರಾಗಿದ್ದಾರೆ.
ಇದೇ ಗುಂಪಿನಿಂದ ಸ್ಪರ್ಧಿಸಿದ್ದ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರದಿಂದ ಎಂ. ಚಂದ್ರಶೇಖರ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ವಿ. ವಿಕ್ರಮ್, ಮಹಿಳಾ ಮೀಸಲು ಕ್ಷೇತ್ರದಿಂದ ಶ್ರೀಮತಿ ಸುರೇಖಾ ಎಂ. ಚಿಗಟೇರಿ ಮತ್ತು ಶ್ರೀಮತಿ ಅರ್ಚನಾ ಡಾ. ರುದ್ರಮುನಿ, ಪ್ರವರ್ಗ `ಎ’ ಮೀಸಲು ಕ್ಷೇತ್ರದಿಂದ ಇ.ಎಂ. ಮಂಜುನಾಥ ಅವರುಗಳು ಅವಿರೋಧವಾಗಿ ಆಯ್ಕೆಯಾಗಿರುವ ನಿರ್ದೇಶಕರು.
ಸಾಮಾನ್ಯ ಕ್ಷೇತ್ರದಿಂದ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಎಂ.ವಿ. ಜಯಪ್ರಕಾಶ್ ಮಾಗಿ (2251), ಅಖಿಲೇಶ್ ಕೋಗುಂಡಿ (1450) ಮತ್ತು ಎನ್.ಎ. ಗುರುರಾಜ್ (945) ಪರಾಭವಗೊಂಡಿದ್ದಾರೆ.
ಪ್ರವರ್ಗ `ಬಿ’ ಮೀಸಲು ಕ್ಷೇತ್ರದ 1 ಸ್ಥಾನಕ್ಕೆ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಐವರು ಅಭ್ಯರ್ಥಿಗಳಾದ ಲೆಕ್ಕ ಪರಿಶೋಧಕ ಜಂಬಿಗಿ ರಾದೇಶ್ (1623), ಬೆಳ್ಳೂಡಿ ಮಂಜುನಾಥ್ (1590), ಎಸ್.ವಿ.ಪ್ರಭುಸ್ವಾಮಿ (1137), ಶ್ರೀಮತಿ ಹಂಪಾಳಿ ನಾಗಮಣಿ ಬಸವರಾಜ್ (913) ಮತ್ತು ಎಂ.ಹೆಚ್. ಶಿವಯೋಗೀಶ್ವರ ಸ್ವಾಮಿ (688) ಪರಾಭವಗೊಂಡಿದ್ದಾರೆ.