ಭಾಷೆಗೆ ಅವಮಾನವಾದರೆ ಅದನ್ನ ಸಹಿಸೆಲಾರೆವು

ಭಾಷೆಗೆ ಅವಮಾನವಾದರೆ ಅದನ್ನ ಸಹಿಸೆಲಾರೆವು

ರಾಣೇಬೆನ್ನೂರಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಪಸಭಾಪತಿ ರುದ್ರಪ್ಪ ಲಮಾಣಿ

ರಾಣೇಬೆನ್ನೂರು, ಫೆ.11- ಪರ ಭಾಷೆಯನ್ನು ಗೌರವಿಸುವ ನಾವು ನಮ್ಮ ಭಾಷೆಗೆ ಅವಮಾನವಾದರೆ ಅದನ್ನು ಸಹಿಸಲಾರೆವು. ಅಂತಹ ಸಂದರ್ಭದಲ್ಲಿ ಸಂಘಟಿತರಾಗಿ ಅವರ ವಿರುದ್ಧ ಹೋರಾಡುತ್ತೇವೆ ಎಂದು ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಹೇಳಿದರು. 

ರಾಣೇಬೆನ್ನೂರಿನಲ್ಲಿ ಇಂದು ಎರಡು ದಿನಗಳ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾರಾಷ್ಟ್ರಿಗರ ಉಪಟಳದಿಂದ ಬೆಳಗಾವಿ ಭಾಗದ ಜನರಿಗೆ ಆಗುತ್ತಿರುವ  ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಅಲ್ಲಿ ಮಿನಿ ವಿಧಾನಸೌಧವನ್ನು ನಿರ್ಮಿಸಿದ್ದು, ಪ್ರತಿವರ್ಷ ಅಲ್ಲಿ ಅಧಿವೇಶನ ನಡೆಸಲಾಗುತ್ತಿದೆ. ಭಾಷೆಗೆ ತೊಂದರೆ ಬಂದರೆ, ಸರ್ಕಾರ ಸಹ ಸಹಿಸಲಾರದು ಎಂದು ಹೇಳಿದ ರುದ್ರಪ್ಪ ಲಮಾಣಿ, ಮುಂದಿನ ಜಿಲ್ಲಾ ಸಮ್ಮೇಳನದ ಸ್ಥಳವನ್ನು ಈ ಸಮ್ಮೇಳನದಲ್ಲಿಯೇ ನಿರ್ಧರಿಸುವಂತೆ ಸೂಚಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಸಮ್ಮೇಳನಗಳು ಕೇವಲ ಪುಸ್ತಕ ಬಿಡುಗಡೆಯ ಸಮಾರಂಭಗಳಾಗದೇ ಆಯಾ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಜನಪ್ರತಿನಿಧಿಗಳ ಮೇಲೆ ತರುವ ಒತ್ತಡಗಳಾಗಬೇಕು ಎಂದರು. ರಾಣೇಬೆನ್ನೂರು ತಾಲ್ಲೂಕನ್ನು ಪ್ರವಾಸಿ ತಾಣ ಮಾಡುವ ಹಾಗೂ ಅನಕ್ಷರ ರಹಿತ ತಾಲ್ಲೂಕು ಮಾಡುವ ಮತ್ತೆರಡು ತಮ್ಮ ಕನಸುಗಳನ್ನು ಪ್ರಕಾಶ್ ಅವರು ಬಿತ್ತರಿಸಿದರು.  

ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ್‌ ಜೋಷಿ ಮಾತನಾಡಿ, ಶಿಶುನಾಳ ಷರೀಫರು, ಅಂಬಿಗರ ಚೌಡಯ್ಯ, ಸರ್ವಜ್ಞ, ಹೆಳವನಕಟ್ಟೆ ಗಿರಿಯಮ್ಮ, ಗುರುಗೋವಿಂದ ಭಟ್ಟರು, ಕನಕದಾಸರು ಮಹಾ ಮಹಿಮರಿಂದ ರಾಣೇಬೆನ್ನೂರು, ಹಾವೇರಿ ಜಿಲ್ಲೆ ಪುಣ್ಯಭೂಮಿಯಾಗಿದೆ. ಇಂತಹ ಪ್ರಾಥ ಸ್ಮರಣೀಯರನ್ನು ನೆನೆಯುವುದು ಪರಿಷತ್ ಕಾರ್ಯವಾಗಿದೆ ಎಂದು ಹೇಳಿದರು.

ತಾಲ್ಲೂಕು ಅಧ್ಯಕ್ಷ ವಿರೇಶ್ ಜಂಬಗಿ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ  ಲಿಂಗಯ್ಯ ಹಿರೇಮಠ ಪ್ರಾಸ್ತಾವಿಕ ಮಾತಗಳನ್ನಾ ಡಿದರು. ವೇದಿಕೆಯಲ್ಲಿ ಮಾಜಿ ಶಾಸಕ ಅರುಣಕುಮಾರ್‌ ಪೂಜಾರ್‌, ಏಕನಾಥ ಭಾನುವಳ್ಳಿ, ಜಿ.ಜಿ.ಹೊಟ್ಟಿಗೌಡ್ರ, ಪುಟ್ಟಪ್ಪ ಮರಿಯಮ್ಮನವರ್, ಪ್ರಕಾಶ್ ಜೈನ್, ಡಾ. ಬಸವರಾಜ ಕೇಲಗಾರ, ವಾಸುದೇವ ಲದ್ವಾ ಮತ್ತಿತರರಿದ್ದರು.

ಮೆರವಣಿಗೆ : ಶಾಲಾ ವಿದ್ಯಾರ್ಥಿಗಳು, ಶಿಕ್ಷಕ – ಶಿಕ್ಷಕಿಯರು, ಜಾನಪದ ಕಲಾತಂಡಗಳು, ಕನ್ನಡಾಂ ಬೆಯ ಪಾತ್ರಧಾರಿಗಳು,  ಭಾಗವಹಿಸಿದ್ದ ಮೈಲುದ್ದದ ಮೆರವಣಿಗೆಯಲ್ಲಿ, ಸರ್ವಾಧ್ಯಕ್ಷ ಜೆ.ಎಂ.ಮಠದ ಅವರನ್ನು ಸಿದ್ದೇಶ್ವರ ದೇವಸ್ಥಾನದಿಂದ ಎಪಿಎಂಸಿ ಸಮಾರಂಭ ಸ್ಥಳಕ್ಕೆ ಕರೆತರಲಾಯಿತು.

`ಕಡೆಗಣ್ಣಲ್ಲಿ ನೋಡಿದಿರೆನ್ನಯ್ಯ ಎನ್ನುವುದು’ ಕೆ.ಹೆಚ್.ಮುಕ್ಕಣ್ಣನವರ ಪುಸ್ತಕವೂ ಸೇರಿದಂತೆ ಎಂಟು ಪುಸ್ತಕಗಳನ್ನು ಬಿಡುಗಡೆ ನಡೆಯಿತು. 

ಪರಿಷತ್ ಧ್ವಜದ ಹಸ್ತಾಂತರ ಸಾಹಿತಿ ಸತೀಶ್ ಕುಲ್ಕರ್ಣಿ, ಸಿದ್ದು ಆರ್.ಜಿ.ಹಳ್ಳಿ, ವಾಸಣ್ಣ ಲದ್ವಾ, ವಾಸಪ್ಪ ಕುಸ ಗೂರ ಅವರುಗಳಿಗೆ ಸನ್ಮಾನಿಸಲಾಯಿತು. 

ಬೆಳಿಗ್ಗೆ ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ್ ಅವರಿಂದ ರಾಷ್ಟ್ರಧ್ವಜ, ಲಿಂಗಯ್ಯ ಅವರಿಂದ ಪರಿಷತ್ ಧ್ವಜ, ವೀರೇಶ ಜಂಬಗಿ ಅವರಿಂದ ನಾಡ ಧ್ವಜಾರೋಹಣ ನೆರವೇರಿತು.

error: Content is protected !!