ಜಿಲ್ಲೆಯ ಐವರಿಗೆ `ಕೆಯುಡಬ್ಲ್ಯುಜೆ’ ಪ್ರಶಸ್ತಿ

ಜಿಲ್ಲೆಯ ಐವರಿಗೆ `ಕೆಯುಡಬ್ಲ್ಯುಜೆ’ ಪ್ರಶಸ್ತಿ

ಜಿಲ್ಲೆಯ ಐವರಿಗೆ `ಕೆಯುಡಬ್ಲ್ಯುಜೆ' ಪ್ರಶಸ್ತಿ - Janathavaniದಾವಣಗೆರೆ, ಫೆ.1- ಪತ್ರಿಕೋದ್ಯಮದಲ್ಲಿ ಸಲ್ಲಿಸುತ್ತಿರುವ ಅನುಪಮ ಸೇವೆಗೆ ರಾಜ್ಯದ ಪ್ರತಿಷ್ಠಿತ ಪತ್ರಕರ್ತರ ಬೃಹತ್ ಸಂಘಟನೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಜಿಲ್ಲೆಯ 5 ಜನರು ಭಾಜನರಾಗಿದ್ದಾರೆ.

ಮಲ್ನಾಡವಾಣಿ ಸಂಪಾದಕರಾದ ಕೆ.ಏಕಾಂತಪ್ಪ, ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಬಿ. ನವೀನ್, ಜನತಾವಾಣಿ ಸುದ್ದಿ ಸಂಪಾದಕ ಎಂ.ಎಸ್.ಶಿವಶರಣಪ್ಪ, ಹಿರಿಯ ವ್ಯಂಗ್ಯಚಿತ್ರಕಾರ ಹೆಚ್.ಬಿ.ಮಂಜುನಾಥ್ ಮತ್ತು ಚಂದನ ಟಿವಿ ಹಿರಿಯ ವರದಿಗಾರ ಎ.ಎಲ್.ತಾರಾನಾಥ್ ಅವರುಗಳು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿ ವರ್ಷವೂ ನಡೆಯುವ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದ ಸಂದರ್ಭದಲ್ಲಿ ಕೆಯುಡಬ್ಲ್ಯುಜೆ ಈ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.

ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿ ಯರು ಮತ್ತು ಪ್ರತಿಭಾನ್ವಿತರನ್ನು ಗುರುತಿಸಿ, ನೀಡುತ್ತಿರುವ ಈ ಪ್ರಶಸ್ತಿಗೆ ಈ ಬಾರಿ 40ಕ್ಕೂ ಹೆಚ್ಚು ಪತ್ರಕರ್ತರನ್ನು ಆಯ್ಕೆ ಮಾಡಲಾಗಿದ್ದು, ನಾಳೆ ದಿನಾಂಕ 3 ಮತ್ತು 4 ರಂದು ದಾವಣಗೆರೆಯಲ್ಲಿ ಏರ್ಪಾಡಾಗಿರುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದ್ದಾರೆ.

ಅಭಿನಂದನೆ : ಪ್ರಶಸ್ತಿ ಪುರಸ್ಕೃತರನ್ನು ಕಾರ್ಯನಿರತ ಪತ್ರಕರ್ತರ ಸಂಘದ ಜಿಲಾಧ್ಯಕ್ಷ ಇ.ಎಂ. ಮಂಜುನಾಥ, ಪ್ರಧಾನ ಕಾರ್ಯದರ್ಶಿ ಎ. ಫಕೃದ್ಧೀನ್, ಖಜಾಂಚಿ ಎನ್.ವಿ. ಬದರಿನಾಥ್, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಡಾ. ಸಿ.ವರದರಾಜ್, ಖಜಾಂಚಿ ಮಧು ನಾಗರಾಜ್ ಕುಂದುವಾಡ ಅಭಿನಂದನೆ ಸಲ್ಲಿಸಿದ್ದಾರೆ.

error: Content is protected !!