ಕರ್ನಾಟಕದಲ್ಲಿ ವೈವಿಧ್ಯಮಯ ಖನಿಜ ಸಂಪತ್ತು : ಸಚಿವ ಎಸ್ಸೆಸ್ಸೆಂ

ಕರ್ನಾಟಕದಲ್ಲಿ ವೈವಿಧ್ಯಮಯ ಖನಿಜ ಸಂಪತ್ತು : ಸಚಿವ ಎಸ್ಸೆಸ್ಸೆಂ

ಕರ್ನಾಟಕ  ಗಣಿ ಮತ್ತು ಭೂವಿಜ್ಞಾನ ಇಲಾಖೆಯು  2022-23ನೇ ಸಾಲಿನ ಖನಿಜ ಬ್ಲಾಕ್‌ಗಳ ಹರಾಜಿನಲ್ಲಿ 3ನೇ ಬಹುಮಾನ  ಪಡೆದುಕೊಂಡ ಹಿನ್ನೆಲೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಪ್ರಶಸ್ತಿ ಸ್ವೀಕರಿಸಿದರು.

ದಾವಣಗೆರೆ, ಜ.23- ಭಾರತ ದಲ್ಲಿ 6ನೇ ಅತಿದೊಡ್ಡ ರಾಜ್ಯವಾದ ಕರ್ನಾಟಕವು ವೈವಿಧ್ಯಮಯ ಖನಿಜ ಸಂಪತ್ತನ್ನು ಹೊಂದಿದ್ದು, ಅದರ ಆರ್ಥಿಕ ಅಭಿವೃದ್ಧಿಗೆ ಗಣನೀಯವಾಗಿ ಕೊಡುಗೆ ನೀಡುತ್ತಿದೆ ಎಂದು ಕರ್ನಾ ಟಕ ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.

ಮಂಗಳವಾರ ಮಧ್ಯಪ್ರದೇಶದ ಭೂಪಾಲ್‍ನಲ್ಲಿ 2ನೇ ರಾಜ್ಯ ಗಣಿಗಾರಿಕೆ ಮಂತ್ರಿಗಳ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಕಬ್ಬಿಣದ ಅದಿರು, ಮ್ಯಾಂಗ ನೀಸ್, ಸುಣ್ಣದ ಕಲ್ಲು, ಡಾಲಮೈಟ್, ಚಿನ್ನ, ಬಾಕ್ಸೈಟ್, ತಾಮ್ರ, ಕ್ರೋಮೈಟ್, ಗ್ರಾನೈಟ್, ಮುಂತಾದ ಕೆಲವು ಪ್ರಮುಖ ಖನಿಜ ಸಂಪನ್ಮೂಲಗಳು ಕರ್ನಾಟಕದಲ್ಲಿ ದೊರೆಯುತ್ತಿವೆ ಎಂದರು.

2ನೇ ರಾಜ್ಯ ಗಣಿಗಾರಿಕೆ ಸಚಿವರ ಸಮ್ಮೇಳನದಲ್ಲಿ ಭಾಗವಹಿಸಿರುವುದು ಸಂತಸ ತಂದಿದ್ದು, ಗಣಿಗಾರಿಕೆ ವಲಯದಲ್ಲಿ ಅನೇಕ ಪ್ರಗತಿಗಳಾದ ಪರಿಶೋಧನೆ, ಸುಸ್ಥಿರ ಅಭ್ಯಾಸಗಳು ಮತ್ತು ಖನಿಜ ನೀತಿಗಳ ಬಗ್ಗೆ ತಿಳಿದು ಕೊಳ್ಳಲು ವೇದಿಕೆಯನ್ನು ಒದಗಿಸಿರು ವುದು ಉತ್ತಮ ಬೆಳವಣಿಗೆ ಎಂದರು.

ಪರಿಶೋಧನಾ ಚಟುವಟಿಕೆ ಗಳನ್ನು ಉತ್ತೇಜಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಕಷ್ಟು ಒತ್ತು ನೀಡಿದ್ದಾರೆ. ಖನಿಜಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟು ಕೊಂಡು, ನಮ್ಮ ರಾಜ್ಯದಲ್ಲಿ ವಿಶೇಷವಾಗಿ ಮ್ಯಾಂಗನೀಸ್, ಪ್ಲಾಟಿನಂ ಗ್ರೂಪ್ ಎಲಿಮೆಂಟ್ಸ್, ನಿಕಲ್, ಮೂಲ ಲೋಹಗಳು, ಚಿನ್ನ ಮತ್ತು ಕ್ರಿಟಿಕಲ್ ನಂತಹ ಖನಿಜಗಳ ಪರಿಶೋಧನೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಖಾಸಗಿ ಮತ್ತು ಸರ್ಕಾರಿ ಘಟಕಗಳು ಮುಂದಾಗಬೇಕೆಂದರು.

2022-23ರಲ್ಲಿ ಖನಿಜ ಉತ್ಪಾ ದನೆಯಲ್ಲಿ ಕರ್ನಾಟಕವು ಪ್ರಮುಖ ಕೊಡುಗೆ ನೀಡುವ ರಾಜ್ಯಗಳಲ್ಲಿ ಒಂದಾಗಿದೆ. ಸಿದ್ದರಾಮಯ್ಯ ನೀತಿ ಆಯೋಗದ ಈಸ್ ಆಫ್ ಡುಯಿಂಗ್ ಬ್ಯುಸಿನೆಸ್ ನಲ್ಲಿ ಕರ್ನಾಟಕ ನಂ.1 ರಾಜ್ಯವಾಗಿದೆ ಎಂದರು.

ರಾಜ್ಯವು ಅನೇಕ ಸ್ಟಾರ್ಟ್‍ಅಪ್‍ಗಳಿಗೆ ಅತ್ಯಂತ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ ಮತ್ತು ಸುಮಾರು 400 ಫಾರ್ಚೂನ್ ಕಂಪನಿಗಳನ್ನು ಹೊಂದಿರುವ ಮೂಲಕ ಸ್ಪಷ್ಟವಾಗಿದೆ. ಆದ್ದರಿಂದ, ಸಂಭಾವ್ಯ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಕರ್ನಾಟಕದಲ್ಲಿ ಲಭ್ಯವಿರುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಲು ಎಲ್ಲಾ ಉದ್ಯಮ ಪಾಲುದಾರರು ಮತ್ತು ಸರ್ಕಾರಿ ಕಂಪನಿಗಳಿಗೆ ಮನವಿ ಮಾಡಿದರು.

ಇದೇ ವೇಳೆ ಕರ್ನಾಟಕ ಗಣಿ ಮತ್ತು ಭೂವಿಜ್ಞಾನ ಇಲಾಖೆಯು 2022-23ನೇ ಸಾಲಿನ ಖನಿಜ ಬ್ಲಾಕ್‍ಗಳ ಹರಾಜಿನಲ್ಲಿ 3ನೇ ಬಹುಮಾನ ಪಡೆದುಕೊಂಡಿದ್ದು,  ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಬಹುಮಾನ ಸ್ವೀಕರಿಸಿದರು. 

ಸಂಸದೀಯ ವ್ಯವಹಾರಗಳ ಗಣಿ ಮತ್ತು ಕಲ್ಲಿದ್ದಲು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, ಕರ್ನಾಟಕ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ದೇಶದಲ್ಲೇ ಮೂರನೇ ಸ್ಥಾನವನ್ನು ಪಡೆದುಕೊಂಡಿರುವುದಕ್ಕೆ ಶುಭಾಶಯಯ ತಿಳಿಸಿ, ಮಲ್ಲಿಕಾರ್ಜುನ್ ಅವರು ಕರ್ನಾಟಕದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾರ್ಯಸಾಧನೆಗೆ ಸಂತಸ ವ್ಯಕ್ತಪಡಿಸಿದ್ದರು.

ಕೇಂದ್ರದ ಹಿರಿಯ ಅಧಿಕಾರಿಗಳು ಹಾಗೂ ಮಧ್ಯಪ್ರದೇಶದ ಹಿರಿಯ ಅಧಿಕಾರಿಗಳು ಮತ್ತು ಕರ್ನಾಟಕ ಗಣಿ ಇಲಾಖೆಯ ನಿರ್ದೇಶಕರಾದ ಗಿರೀಶ್ ಉಪಸ್ಥಿತರಿದ್ದರು.

error: Content is protected !!