ಶಿವಯೋಗಿ ಸಿದ್ದರಾಮೇಶ್ವರರ ಆದರ್ಶ ಇಂದಿಗೂ ಪ್ರಸ್ತುತ

ಶಿವಯೋಗಿ ಸಿದ್ದರಾಮೇಶ್ವರರ ಆದರ್ಶ ಇಂದಿಗೂ ಪ್ರಸ್ತುತ

ದಾವಣಗೆರೆ, ಜ. 18- 12 ನೇ ಶತಮಾನ ಶ್ರೇಷ್ಠ ವಚನಕಾರರ ಯುಗವಾಗಿದ್ದು, ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ಕಾಯಕ ಇಂದಿಗೂ ಪ್ರಸ್ತುತ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಭೋವಿ ಸಮಾಜದ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ನಿನ್ನೆ ನಡೆದ  ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರ ಕಾಲದ ಅನುಭವ ಮಂಟಪದಲ್ಲಿ ತನ್ನ ಕಾಯಕ ನಿಷ್ಠೆ ಮುಖಾಂತರ ಶ್ರೀ ಶಿವಯೋಗಿ ಸಿದ್ದರಾಮೇಶ್ವರರು ಗುರುತಿಸಿಕೊಂಡರು. ಸಮಾಜದ ಒಳಿತಿಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ನಿರ್ವಹಿಸಿದರು. ಆದ್ದರಿಂದ ನಾವೆಲ್ಲರೂ ಜಾತಿ, ಮತ, ಪಂಥಗಳೆನ್ನದೆ ಎಲ್ಲರೂ ಇವರ ಜಯಂತ್ಯೋತ್ಸವವನ್ನು ಆಚರಿ‌ ಸುವ ಜೊತೆಗೆ ಇವರ ಕಾಯಕ ತತ್ವಗಳನ್ನು ಜೀವನದಲ್ಲಿ ಅಳಡಿಸಿ ಕೊಳ್ಳಬೇಕು. ಇಂತಹ  ಮಹಾನ್ ಶರಣರ ಸ್ಮರಣೆಯ ಮೂಲಕ ಸಮಾಜ ತನ್ನನ್ನು ತಾನು ಅರಿತು ಬದಲಾಗಬೇಕಿದೆ. ಕೆರೆ ಕಟ್ಟೆ, ಕಾಲುವೆ, ಕಟ್ಟುವ ಕರ್ಮ ಮಾರ್ಗದಲ್ಲಿ ಸಾಗಿ, ಮಾನವ ಜನ್ಮದ ಸಾರ್ಥಕತೆಯನ್ನು ನಿರೂಪಿಸಿದ ಇವರು ಬಸವಣ್ಣ ಹಾಗೂ ಶರಣರ ಭೇಟಿಯಿಂದ ಜ್ಞಾನಮಾರ್ಗದಲ್ಲಿ ಸಾಗಿದವರಾಗಿದ್ದಾರೆ ಎಂದರು.

ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ನಗರ ಪಾಲಿಕೆ ಸದಸ್ಯ ಶಿವಾನಂದ, ರೇಷ್ಮೆ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಡಿ. ಬಸವರಾಜು, ಸಮಾಜದ ಮುಖಂಡ ಮಂಜುನಾಥ್, ಶ್ರೀನಿವಾಸ್, ಹೆಚ್. ಜಯಣ್ಣ, ಆರ್.ಎಲ್. ಲಾ ಕಾಲೇಜಿನ ಪ್ರಾಧ್ಯಾಪಕ ವಿದ್ಯಾಧರ, ವೇದಮೂರ್ತಿ ಟಿ. ಉಪನ್ಯಾಸ ನೀಡಿದರು.

error: Content is protected !!