ಹರಿಹರ, ಜ.14- ಇಲ್ಲಿನ ಚಿಂತಾಮಣಿ ನಗರದಲ್ಲಿನ ಲಿಟ್ಲ್ ಚಾಂಪ್ಸ್ ಶಾಲೆಯಲ್ಲಿ ಶನಿವಾರ ಮಕ್ಕಳ ಸಂತೆ ಕಾರ್ಯಕ್ರಮ ನಡೆಯಿತು.
ಸಂತೆಯಲ್ಲಿ ವಿದ್ಯಾರ್ಥಿಗಳೇ ಸೊಪ್ಪು, ತರಕಾರಿ, ಹಣ್ಣು, ಹೂ, ದವಸ ಧಾನ್ಯಗಳನ್ನು ಮಾರಾಟ ಮಾಡುತ್ತಿದ್ದರೆ, ಸುತ್ತ ಮುತ್ತಲಿನ ಶಾಲೆಯ ವಿದ್ಯಾರ್ಥಿಗಳು, ಸಾರ್ವಜನಿಕರು ಖರೀದಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು.
ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ವಿಜಯಕುಮಾರ್, ಅಧ್ಯಕ್ಷ ಕಿರಣ್ ಕುಮಾರ್, ನಿರ್ದೇಶಕರುಗಳಾದ ಸಹನ, ಸ್ನೇಹ, ಶಿಕ್ಷಕರಾದ ಲೀನಾ ಶ್ಯಾಮ್ರಾಜ್, ಶಾರದಾ, ಕಣ್ಯಾಳ್, ಆರೋಗ್ಯ ಮೇರಿ ಸುಧಾ, ಕೃಷ್ಣಪ್ಪ, ಶಶಿಕಲಾ, ಶ್ವೇತಾ, ಸೌಮ್ಯ, ರಮಾ, ಶಿಲ್ಪಾ, ಅಶ್ವಿನಿ, ಹೇಮಾವತಿ ಉಪಸ್ಥಿತರಿದ್ದರು.