ಮಲೇಬೆನ್ನೂರಿನಲ್ಲಿ ಇಂದು ಸಂಕ್ರಾಂತಿ

ಮಲೇಬೆನ್ನೂರಿನಲ್ಲಿ ಇಂದು ಸಂಕ್ರಾಂತಿ

ಶ್ರೀ ಭದ್ರಾಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಇಂದು ಮಕರ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ.

ಇಂದು ಪ್ರಾತಃಕಾಲದಲ್ಲಿ ಎಲ್ಲಾ ದೇವರುಗಳಿಗೆ ಅಭಿಷೇಕ, ಬೆಳಿಗ್ಗೆ 8 ರಿಂದ 10.30ರವರೆಗೆ ಶ್ರೀ ಆದಿತ್ಯ ಸೂರ್ಯ ಪಾರಾಯಣ ಹೋಮ, ಪೂರ್ಣಾವತಿ ನೀಡಲಾಗುವುದು.

ಸಂಜೆ 5 ರಿಂದ 7.30 ರವರೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಸಮಿತಿ ಉಪಾಧ್ಯಕ್ಷ ಬಿ.ಚಿದಾನಂದಪ್ಪ ತಿಳಿಸಿದ್ದಾರೆ. ಇಂದು ಬೆಳಿಗ್ಗೆಯಿಂದ ರಾತ್ರಿ 9 ಗಂಟೆವರೆಗೂ ಸಂಕ್ರಾಂತಿ ವೀಶೇಷತೆಯ ಅನ್ನ ಸಂತರ್ಪಣೆ ಇರುತ್ತದೆ.

error: Content is protected !!