ರಾಮಗೊಂಡನಹಳ್ಳಿಯಲ್ಲಿ ಶಿವಸಂಚಾರ ನಾಟಕೋತ್ಸವ

ರಾಮಗೊಂಡನಹಳ್ಳಿಯಲ್ಲಿ ಶಿವಸಂಚಾರ ನಾಟಕೋತ್ಸವ

ದಾವಣಗೆರೆ, ಜ. 14 – ಇಲ್ಲಿಗೆ ಸಮೀಪದ ರಾಮಗೊಂಡನ ಹಳ್ಳಿಯಲ್ಲಿ ಶಿವಸಂಚಾರ ನಾಟಕೋತ್ಸವದ  ಎರಡನೇ ದಿನದ  ಕಾರ್ಯಕ್ರಮವನ್ನು ಉದ್ಘಾಟನೆಯನ್ನು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ಶ್ರೀಧರಮೂರ್ತಿ ಅವರು ನೆರವೇರಿಸಿದರು.

ಶ್ರೀಧರಮೂರ್ತಿ  ಮಾತ ನಾಡಿ, ನಾಟಕ ಪ್ರಾಚೀನ ಕಲೆಯಾದರೂ ಪ್ರತೀ ರಂಗಪ್ರವೇಶ ಮತ್ತು ರಂಗಪ್ರಯೋಗ ಹೊಸತಾಗಿರುತ್ತದೆ ಎಂದು ಹೇಳಿದರು.

ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ ಅಧೀಕ್ಷಕ ರಮೇಶ್ ಆರ್‌.   ಅವರು ಮಾತನಾಡಿ, ನಾಟಕಗಳು ಜೀವಂತ ಕಲೆಗಳಾಗಿದ್ದು, ಮಧ್ಯ ಕರ್ನಾಟಕವನ್ನು ಕೇಂದ್ರವಾಗಿಟ್ಟುಕೊಂಡು ಶರಣರ ಸಂದೇಶಗಳನ್ನು ಜನರಿಗೆ ತಲುಪಿಸುವ ಈ ಶ್ರೇಷ್ಠ ಮಾಧ್ಯಮ ಅನಕ್ಷರಾದಿಯಾಗಿ ಸರ್ವರಿಗೂ ಗ್ರಹಿಸುವಂತದ್ದು ಎಂದು ತಿಳಿಸಿದರು.

ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಜಿ.ಎಸ್. ಸುರೇಂದ್ರ ಅವರು ಮಾತನಾಡಿ, ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ರಂಗಭೂಮಿಯ ಮೂಲಕ ನಡೆಸುತ್ತಿರುವ ಈ ರಂಗ ಪ್ರಯೋಗದ ಫಲ 12 ನೇ ಶತಮಾನದ ಶರಣರ ಜೀವನವನ್ನು 21ನೇ ಶತಮಾನದ ಆಧುನಿಕ ನಾಗರಿಕರಿಗೆ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.

ಕು. ತನು ಪ್ರಾರ್ಥಿಸಿದರು, ಕು. ನೂತನ ಜಿ.ಎಸ್. ಸ್ವಾಗತಿಸಿದರು. ಕು.  ಪ್ರಕೃತಿ ನಿರೂಪಿಸಿದರು.

error: Content is protected !!