ವಿಷ್ಣು ಸಹಸ್ರನಾಮ ಪಾರಾಯಣದಿಂದ ಏಕಾಗ್ರತೆ-ಯೋಗ ತಜ್ಞ ರಾಘವೇಂದ್ರ ಗುರೂಜಿ ಪ್ರತಿಪಾದನೆ

ವಿಷ್ಣು ಸಹಸ್ರನಾಮ ಪಾರಾಯಣದಿಂದ  ಏಕಾಗ್ರತೆ-ಯೋಗ ತಜ್ಞ ರಾಘವೇಂದ್ರ ಗುರೂಜಿ ಪ್ರತಿಪಾದನೆ

ದಾವಣಗೆರೆ, ಜ. 9- ವಿಷ್ಣು ಸಹಸ್ರನಾಮ ಪಾರಾಯಣವನ್ನು ಪ್ರತಿ ದಿನ ಹೇಳುವುದರಿಂದ ಸಾವಿರಾರು ಲಾಭಗಳು ನಮ್ಮ ಶರೀರ ಮತ್ತು ಮನಸ್ಸಿಗೆ ಲಭಿಸುವುದು. ಶ್ರದ್ಧೆ, ಭಕ್ತಿ ಮತ್ತು ನಂಬಿಕೆಯಿಂದ ಪ್ರತಿದಿನ ತಪ್ಪದೇ ಪಠಿಸುವುದರಿಂದ ಆತ್ಮವಿಶ್ವಾಸವು ಹೆಚ್ಚಾಗಿ ಏಕಾಗ್ರತೆ ಮೂಡುವುದು ಎಂದು ಆದರ್ಶ ಯೋಗ ಪ್ರತಿಷ್ಠಾನದ ಯೋಗ ಗುರು ರಾಘವೇಂದ್ರ ಗುರೂಜಿ ಅಭಿಪ್ರಾಯಪಟ್ಟರು.

ನಗರದ ಆದರ್ಶ ಯೋಗ ಪ್ರತಿಷ್ಠಾನದ ಶ್ರೀ ಮಹಾಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಮೊನ್ನೆ ಆಯೋಜಿಸಿದ್ದ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ಯಜ್ಞ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರತಿದಿನ ಪಾರಾಯಣ ಮಾಡುವುದರಿಂದ ಶರೀರ ದಲ್ಲಿರುವ ಸೂಕ್ಷ್ಮ ನರನಾಡಿಗಳು  ಶುದ್ಧಗೊಳ್ಳುತ್ತವೆ ಎಂದು ವೈಜ್ಞಾನಿಕ ಸಂಶೋಧನೆಯಿಂದ ದೃಢಪಟ್ಟಿದೆ. ಮಾನವ ಕೋಟಿಯ ಉದ್ದಾರಕ್ಕಾಗಿ ಇರುವ ಭಕ್ತಿಯ ಪರಾಕಾಷ್ಠೆಯನ್ನು ಪಡೆಯುವ ಸುಲಭ ಮಾರ್ಗ ಇದಾಗಿದೆ ಎಂದು ಗುರೂಜಿ, ವಿಷ್ಣು ಸಹಸ್ರನಾಮದ ಮಹತ್ವವನ್ನು ತಿಳಿಸಿದರು.

ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಶ್ರೀ ಸಂಜೀವಿನಿ ಆಂಜನೇಯ ದೇವಸ್ಥಾನ ಹಾಗೂ ಸರಸ್ವತಿ ನಗರದ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದ  ಭಜನಾ ಮಂಡಳಿಯ ಸದಸ್ಯರು  ಸುಶ್ರಾವ್ಯವಾಗಿ ಪಾರಾಯಣ ಯಜ್ಞವನ್ನು ನಡೆಸಿಕೊಟ್ಟರು. 

ಈ ಎರಡೂ ತಂಡದ ಗುರುಗಳಾದ ಮಾತೃಶ್ರೀ ಸಾವಿತ್ರಮ್ಮ ಮತ್ತು ಶ್ರೀ ಶಂಕರ ನಾರಾಯಣ ಶಾಸ್ತ್ರಿಗಳು ಇವರಿಗೆ ಮಾರ್ಗದರ್ಶಕರಾಗಿದ್ದರು.

ಪೂಜಾ ಕಾರ್ಯಕ್ರಮವನ್ನು ಅಂತರವಳ್ಳಿ ಮುರುಳೀಧರ ಆಚಾರ್ ನೇತೃತ್ವದಲ್ಲಿ ಶ್ರೀಮತಿ ಶ್ವೇತಾ ಮತ್ತು ಚೇತನ್ ಸಿ. ಒಡೆಯರ್ ದಂಪತಿಗಳು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಮಕ್ಕಳ ತಜ್ಞ ಡಾ|| ಸಂಭಾಜಿರಾವ್, ಸಗಟು ಔಷಧಿ ವ್ಯಾಪಾರಿ ಹಂಪನೂರು ಎನ್. ಸಂಗನಬಸಪ್ಪ, ಯೋಗ ಶಿಕ್ಷಕ ವಿ. ಲಲಿತ್‍ಕುಮಾರ್ ಜೈನ್, ಹರಿಹರದ ಮಾಲ್ಪಾನಿ ಗ್ರೂಪ್‍ನ ಶ್ರೀಮತಿ ಸಂಗೀತ ಮಾಲ್ಪಾನಿ, ಬಾಳೆ ಎಲೆ ವ್ಯಾಪಾರಿ ರುದ್ರೇಶ್, ದೂಡಾ ಉದ್ಯೋಗಿ ಕಲ್ಲೇಶ್ ಇನ್ನಿತರರು ಪಾಲ್ಗೊಂಡ ಕಾರ್ಯಕ್ರಮದಲ್ಲಿ ಶ್ರೀಮತಿ ಶ್ರೀದೇವಿ ಮತ್ತು ಗೌರಮ್ಮ ತಂಡದಿಂದ ರಂಗೋಲಿ ಸೇವೆ, ನಿವೃತ್ತ ತಹಶೀಲ್ದಾರ್ ವಿಶ್ವನಾಥಯ್ಯ ಎ.ಕೆ. ಫಾರ್ಮಾದ ಉದ್ಯೋಗಿ ನಾಗರಾಜ ಹೂವಿನ ಅಲಂಕಾರ ಸೇವೆ ಅರ್ಪಿಸಿದರು.

ಭರತ್ ಓಡೋನಿ, ಸಂದೀಪ್ ಓಡೋನಿ, ಪ್ರಶಾಂತ್ ಎಂ.ಎಂ., ಮುಖೇಶ್ ದೇವ್, ಪೃಥ್ವಿದೇವ್, ರಾಹುಲ್ ವಿ.ಕೆ., ಯೋಗ ಶಿಕ್ಷಕ ವೀರಭದ್ರಯ್ಯ ಸ್ವಾಮಿ ಇನ್ನಿತರರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

error: Content is protected !!