ಹರಪನಹಳ್ಳಿ : ಸಂಚಾರಿ ಪೊಲೀಸ್ ಘಟಕ ಉದ್ಘಾಟನೆ

ಹರಪನಹಳ್ಳಿ : ಸಂಚಾರಿ ಪೊಲೀಸ್ ಘಟಕ ಉದ್ಘಾಟನೆ

ಹರಪನಹಳ್ಳಿ, ಜ. 6 – ಪಟ್ಟಣದ ಹಳೇ ಪೊಲೀಸ್ ಠಾಣೆ ಆವರಣದಲ್ಲಿ ಸಂಚಾರಿ ಪೊಲೀಸ್ ಘಟಕವನ್ನು ಶುಕ್ರವಾರ ಉದ್ಘಾಟಿಸಲಾಯಿತು.

ಡಿವೈಎಸ್‍ಪಿ ವೆಂಕಟಪ್ಪನಾಯಕ ಪೂಜೆ ನೆರವೇರಿಸುವುದರೊಂದಿಗೆ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಹರಪನಹಳ್ಳಿ ಪಟ್ಟಣದಲ್ಲಿ ಜನ ಸಂದಣಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆದ್ದರಿಂದ ವಿಜಯನಗರ ಜಿಲ್ಲಾ ಎಸ್‍ಪಿಯವರು ಪಟ್ಟಣದಲ್ಲಿ ತಾತ್ಕಾಲಿಕ ಸಂಚಾರಿ ಪೊಲೀಸ್ ಘಟಕ ಸ್ಥಾಪಿಸಲು ಅನುಮತಿ ನೀಡಿದ್ದಾರೆ ಎಂದರು.

ಈ ಸಂಚಾರಿ ಘಟಕದಲ್ಲಿ ಪಿಎಸ್‍ಐ ರುದ್ರಪ್ಪ ನೇತೃತ್ವದಲ್ಲಿ ಇಬ್ಬರು ಎಎಸ್‍ಐ, ಹನ್ನೆರಡು ಜನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಐ.ಬಿ. ವೃತ್ತ, ಹರಿಹರ ವೃತ್ತ, ಕೊಟ್ಟೂರು ವೃತ್ತ ಮುಂತಾದ ಕಡೆಗಳಲ್ಲಿ ಟ್ರಾಪಿಕ್ ಸಮಸ್ಯೆ ತಲೆ ದೋರುತ್ತಿದ್ದು ಈ ಸಮಸ್ಯೆ ನಿವಾರಿಸಲು ಈ ಘಟಕ ಕಾರ್ಯ ನಿರ್ವಹಿಸುತ್ತದೆ. 

ಈ ಘಟಕಕ್ಕೆ ಸದ್ಯ ಎರಡು ದ್ವಿಚಕ್ರ ವಾಹನಗಳು ಹಾಗೂ ಕೆಲವೊಂದು ಸಾಮಗ್ರಿಗಳನ್ನು ನೀಡಲಾಗಿದೆ. ಜೀಪು ವಾಹನವನ್ನು ಸದ್ಯದಲ್ಲೆ ನೀಡಲಾಗುವುದು ಎಂದು ತಿಳಿಸಿದರು.

ಈಚೇಗೆ ಪಟ್ಟಣದಲ್ಲಿನ ಆಟೋ ಡ್ರೈವರ್‍ಗಳ ಸಭೆ ನಡೆಸಿ ಟ್ರಾಫಿಕ್ ಬಗ್ಗೆ ಅವರಿಗೆ ಅರಿವು ಮೂಡಿಸಿದ್ದೇವೆ. ಆಟೋದಲ್ಲಿರುವ ಕರ್ಕಶ ಧ್ವನಿ ವರ್ಧಕಗಳನ್ನು ಎರಡು ದಿನಗಳಲ್ಲಿ ತೆರವುಗೊಳಿಸಲು ಸೂಚಿಸಿದ್ದು ಅವರೂ ಸಹ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ರಾತ್ರಿ ಸಂದರ್ಭದಲ್ಲಿ ಕೇವಲ ಹತ್ತು ಜನ ಆಟೋ ಚಾಲಕರು ಕಾರ್ಯ ನಿರ್ವಹಿಸಲು ಒಮ್ಮತವಾಗಿದೆ ಎಂದು ಹೇಳಿದ ಅವರು ರಾತ್ರಿ ವೇಳೆ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಳ್ಳಲು ಆಟೋ ಚಾಲಕರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿಪಿಐ ಎಂ. ನಾಗರಾಜ ಕಮ್ಮಾರ, ಪಿಎಸ್‍ಐ ಸಿ. ಶಂಭುಲಿಂಗ ಹಿರೇಮಠ, ಸಂಚಾರಿ ಘಟಕದ ಪಿಎಸ್‍ಐ ರುದ್ರಪ್ಪ, ಸಿಬ್ಬಂದಿ ಅಂಜಿನಪ್ಪ, ವೀರಣ್ಣ ಬಾರ್ಕಿ, ಎಚ್. ಮಂಜುನಾಥ್, ಅಂಬರೀಶ್, ಫೈಯಾಜ್, ಕೊಟ್ರೇಶ ಸೇರಿದಂತೆ ಗೃಹ ರಕ್ಷಕದಳದ ಸಿಬ್ಬಂದಿ ಇದ್ದರು.

error: Content is protected !!